BBK 11: ದೊಡ್ಮನೆ ಆಟಕ್ಕೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪಕ್ಕಾ ಲಿಸ್ಟ್

Public TV
2 Min Read
bigg boss 11 1

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ಇಂದು (ಸೆ.29) ಸಂಜೆ 6 ಗಂಟೆಗೆ ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಅದಕ್ಕೂ ಮುನ್ನ ದೊಡ್ಮನೆಗೆ ಈಗಾಗಲೇ ಕಾಲಿಟ್ಟಿರುವ ಸ್ಪರ್ಧಿಗಳ ಪಕ್ಕಾ ಲಿಸ್ಟ್ ಇಲ್ಲಿದೆ.

bhavya gowda 1

‘ಗೀತಾ’ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ನಟಿ ಭವ್ಯಾ ಗೌಡ (Bhavya Gowda) ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈ ಹಿಂದೆ ಮಿನಿ ಬಿಗ್ ಬಾಸ್‌ನಲ್ಲೂ ಇವರು ಒಂದು ವಾರಗಳ ಕಾಲ ಆಟ ಆಡಿದ್ದರು. ಇದು ಈ ಬಾರಿ ಅವರ ಕೈಹಿಡಿಯುತ್ತಾ? ಸ್ವರ್ಗಕ್ಕೆ ಹೋಗುತ್ತಾರಾ? ಅಥವಾ ನರಕಕ್ಕೆ ಹೋಗ್ತಾರಾ? ಇಂದಿನ ಗ್ರ್ಯಾಂಡ್ ಲಾಂಚ್‌ನಲ್ಲಿ ಉತ್ತರ ಸಿಗಲಿದೆ.

yamuna

‘ಅಶ್ವಿನಿ ನಕ್ಷತ್ರ’ ಸೀರಿಯಲ್‌ನಲ್ಲಿ ನಟಿ ಮಯೂರಿ ತಾಯಿಯಾಗಿ ನಟಿಸಿದ್ದ ಯಮುನಾ ಶ್ರೀನಿಧಿ ಅವರು ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

dhanraj achar

‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಧನರಾಜ್ ಆಚಾರ್ (Dhanraj Achar) ಅವರು ದೊಡ್ಮನೆಗೆ ಕಾಲಿಟ್ಟಿರೋದು ಪಕ್ಕಾ ಆಗಿದೆ. ತುಕಾಲಿ ಸಂತೋಷ್ ಅವರಂತೆಯೇ ಧನರಾಜ್ ಕೂಡ ಕಾಮಿಡಿ ಮೂಲಕ ಜನರ ಮನ ಗೆಲ್ತಾರಾ? ಕಾಯಬೇಕಿದೆ.

gouthami jadav

‘ಸತ್ಯ’ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ಡೇರಿಂಗ್ ಲೇಡಿ ಗೌತಮಿ ಜಾದವ್ (Gouthami Jadav) ‘ಬಿಗ್’ ಮನೆಗೆ ಕಾಲಿಟ್ಟಿದ್ದಾರೆ. ಸತ್ಯ ಪಾತ್ರದ ಸ್ಟೈಲಿನಲ್ಲಿಯೇ ನಟಿ ಎಂಟ್ರಿ ಕೊಟ್ಟಿದ್ದಾರೆ.

anusha rai

ಮುದ್ದು ಮುಖದ ಚೆಲುವೆ ಅನುಷಾ ರೈ (Anusha Rai) ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಖಡಕ್, ದಮಂಯತಿ, ರೈಡರ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

dharma keerthiraj

ಖಳನಟ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ಅವರು ಖಡಕ್, ನವಗ್ರಹ, ಸುಮನ್, ಓ ಮನಸೇ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಶೋ ಮೂಲಕ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

shishir shastry

ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಅವರು ಸೊಸೆ ತಂದ ಸೌಭಾಗ್ಯ, ಕುಲವಧು, ಭಾರತಿ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ನಟಿಸಿದ್ದಾರೆ. ತೆಲುಗಿನ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.

trivikram

‘ಪದ್ಮಾವತಿ’ ಸೀರಿಯಲ್ ಮೂಲಕ ಟಿವಿ ಪ್ರೇಕ್ಷಕರ ಮನಗೆದ್ದ ನಟ ತ್ರಿವಿಕ್ರಮ್ ಈ ಬಾರಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಹಂಸ ವಿಲನ್ ಆಗಿ ನಟಿಸುತ್ತಿದ್ದರು. ಇತ್ತೀಚಿನ `ರಾಜ ರಾಣಿ’ ಶೋನಲ್ಲಿಯೂ ಸ್ಪರ್ಧಿಯಾಗಿದ್ದರು. ಈಗ ಹಂಸ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.

tukali santhosh 1 5

ತುಕಾಲಿ ಸಂತೋಷ್ ಅವರು ಕಳೆದ ಬಾರಿ ಬಿಗ್ ಬಾಸ್‌ನಲ್ಲಿ ಕಾಮಿಡಿ ಮೂಲಕ ಕಿಕ್ ಕೊಟ್ಟಿದ್ದರು. ಈ ಬಾರಿ ಅವರ ಪತ್ನಿ ಮಾನಸಾ ತುಕಾಲಿ ಸಂತೋಷ್ ಬಿಗ್ ಬಾಸ್‌ಗೆ ಕಾಲಿಟ್ಟಿದ್ದಾರೆ.‌ ಗಿಚ್ಚಿ ಗಿಲಿಗಿಲಿ 3ರ ರನ್ನರ್‌ ಅಪ್‌ ಕೂಡ ಆಗಿದ್ದರು ಮಾನಸಾ.

artist_36237_aishwarya-sindhogi-photos-images-68745

‘ನಾಗಿಣಿ 2’ ಸೀರಿಯಲ್‌ನಲ್ಲಿ ವಿಲನ್ ಆಗಿದ್ದ ಐಶ್ವರ್ಯಾ ಸಿಂಧೋಗಿ ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.

mokshitha pai

‘ಪಾರು’ ಸೀರಿಯಲ್ ಮೂಲಕ ಮನಗೆದ್ದ ನಟಿ ಮೋಕ್ಷಿತಾ ಪೈ (Mokshitha Pai) ಅವರು ಈ ಬಾರಿ ಬಿಗ್ ಬಾಸ್‌ಗೆ ಹೋಗಿರೋದು ಖಾತ್ರಿಯಾಗಿದೆ.

Chaithra Kundapura 1

ಇನ್ನೂ ಉಗ್ರಂ ಖ್ಯಾತಿಯ ಮಂಜು, ಚೈತ್ರಾ ಕುಂದಾಪುರ, ರಂಜಿತ್, ಗೋಲ್ಡ್ ಸುರೇಶ್ ಕೂಡ ಬಿಗ್ ಬಾಸ್‌ಗೆ ಬಂದಿದ್ದಾರೆ. ಈಗ ಸದ್ಯದ ಕುತೂಹಲ ಏನೆಂದರೆ ಇವರೆಲ್ಲಾ ಥೀಮ್ ಪ್ರಕಾರ, ಸ್ವರ್ಗಕ್ಕೆ ಹೋಗ್ತಾರಾ? ಅಥವಾ ನರಕಕ್ಕೆ ಹೋಗ್ತಾರಾ? ಎಂಬುದು ಕಾದುನೋಡಬೇಕಿದೆ.

Share This Article