ಬಿಗ್ ಬಾಸ್ ಸೀಸನ್ 10ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಅವರು ಹೊರಹೊಮ್ಮಿದ್ದಾರೆ. ಪ್ರತಾಪ್, ಸಂಗೀತಾ ಶೃಂಗೇರಿ ಠಕ್ಕರ್ ಕೊಟ್ಟು ಕಾರ್ತಿಕ್ ಮಹೇಶ್ ಈ ಸೀಸನ್‌ನ ವಿನ್ನರ್ ಆಗಿದ್ದಾರೆ. ಇದನ್ನೂ ಓದಿ:ನನ್ನ ಮಗನನ್ನು ವಾಪಸ್ಸು ಕೊಟ್ಟಿದ್ದೀರಿ: ಡ್ರೋನ್ ತಾಯಿ ಕಣ್ಣೀರು
ಅಸಮರ್ಥರಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಕಾರ್ತಿಕ್ ಮಹೇಶ್ ಅವರು ಮೊದಲ ದಿನದಿಂದಲೂ ಉತ್ತಮವಾಗಿ ಆಟವಾಡುತ್ತಾ ಅಭಿಮಾನಿಗಳ ಮನಗೆದ್ದಿದ್ದರು. ಸಂಗೀತಾ (Sangeetha) ಮತ್ತು ನಮ್ರತಾ (Namratha) ಗೌಡ ಜೊತೆಗಿನ ಸ್ನೇಹ ವಿಚಾರವಾಗಿ ಕಾರ್ತಿಕ್ ಸಖತ್ ಹೈಲೆಟ್ ಆಗಿದ್ದರು.
ವಿನಯ್‌ಗೆ ಎದುರಾಗಿ ನಿಂತು ಸಾಕಷ್ಟು ಟಾಸ್ಟ್‌ಗಳಲ್ಲಿ ಕಾರ್ತಿಕ್ ಠಕ್ಕರ್ ಕೊಟ್ಟಿದ್ದರು. ಡ್ಯಾನ್ಸ್, ಮನರಂಜನೆ ಎಲ್ಲದರಲ್ಲೂ ಕಾರ್ತಿಕ್ ಮಹೇಶ್ ಹೈಲೆಟ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ 10ರಲ್ಲಿ ಅಭಿಮಾನಿಗಳ ಹೃದಯ ಗೆದ್ದು ವಿನ್ನರ್ ಆಗಿ ಗೆದ್ದು ಬೀಗಿದ್ದಾರೆ.
ಕಡೆಯದಾಗಿ ಸಂಗೀತಾ, ಪ್ರತಾಪ್ (Drone Prathap) ಜೊತೆ ಕಾರ್ತಿಕ್‌ಗೆ ಪೈಪೋಟಿ ಇತ್ತು. ಈಗ ಕಾರ್ತಿಕ್ ಬಿಗ್ ಬಾಸ್ ವಿನ್ನರ್ ಆಗಿ ಸಂಭ್ರಮಿಸಿದ್ದಾರೆ.