‘ಬಿಗ್ ಬಾಸ್ ಕನ್ನಡ ಸೀಸನ್ 10’ರ (Bigg Boss Kannada 10) ಹಾವಳಿ ಜೋರಾಗಿತ್ತು. ಈ ಸೀಸನ್‌ನ ಎಲ್ಲಾ ಸ್ಪರ್ಧಿಗಳು ಈಗ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ವಿನಯ್ ಗೌಡ (Vinay) ಅಭಿಮಾನಿಗಳಿಗೆ ಬಿಗ್ ಅಪ್‌ಡೇಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಶೋ ಆಯ್ತು ಮುಂದೇನು? ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ದೊಡ್ಮನೆಯ ಆನೆ ಎಂದೇ ಫೇಮಸ್ ಆಗಿರುವ ವಿನಯ್ ಗೌಡಗೆ ಅಪಾರ ಅಭಿಮಾನಿಗಳ ಬಳಗವಿದೆ. ಅದರಲ್ಲೂ ವಿನಯ್‌ಗೆ ಫೀಮೇಲ್ ಫ್ಯಾನ್ಸ್ ಜಾಸ್ತಿ. ದೊಡ್ಮನೆ ಆಟದ ಬಳಿಕ ವಿನಯ್ ಯಾವ ಪ್ರಾಜೆಕ್ಟ್ ಮಾಡ್ತಾರೆ ಎಂದು ಅಭಿಮಾನಿಗಳ ಪ್ರಶ್ನೆಗೆ ಇನ್ಸ್ಟಾಗ್ರಾಂ ಲೈವ್‌ನಲ್ಲಿ ಉತ್ತರಿಸಿದ್ದಾರೆ. ಇದನ್ನೂ ಓದಿ:ತನಿಷಾ ಜೊತೆಗಿನ ಸಿನಿಮಾ ಬಗ್ಗೆ ವರ್ತೂರು ಸಂತೋಷ್ ಪ್ರತಿಕ್ರಿಯೆ
ಸಹಸ್ಪರ್ಧಿ ಮೈಕೆಲ್ ಅಜಯ್ (Michel Ajay) ಜೊತೆಗೂಡಿ ಹೊಸದೊಂದು ಕೆಫೆ ತೆರೆಯುತ್ತಿರುವುದಾಗಿ ಹೇಳಿದ್ದಾರೆ. ಮಾರ್ಚ್ 7ರಂದು ತಮ್ಮ ಹುಟುಹಬ್ಬವಿದ್ದು, ಅಂದು ಕೆಲವೊಂದು ಘೋಷಣೆಗಳನ್ನು ಮಾಡುತ್ತಿರುವುದಾಗಿ ವಿನಯ್ ತಿಳಿಸಿದ್ದಾರೆ. ಹೊಸ ಸಿನಿಮಾದ ಅನೌನ್ಸ್‌ಮೆಂಟ್ ಕೂಡ ಮಾಡುವುದಾಗಿ ಹೇಳಿದ್ದಾರೆ.
ಲೈವ್‌ನಲ್ಲಿ ಅಭಿಮಾನಿಗಳು ಸ್ನೇಹಿತ್ ಒಡನಾಟದ ಬಗ್ಗೆ ಕೇಳಿದ್ದಾರೆ. ಸ್ನೇಹಿತ್ ನನ್ನ ಬ್ರದರ್ ಇದ್ದ ಹಾಗೆ. ಬೆಸ್ಟ್ ಫ್ರೆಂಡ್ ಕೂಡ. ತುಂಬಾ ಜೆನ್ಯೂನ್ ವ್ಯಕ್ತಿ. ಸ್ನೇಹಿತ್ ತುಂಬಾ ಸ್ವೀಟ್ ಹಾರ್ಟ್, ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ ಎಂದು ವಿನಯ್ ಮಾತನಾಡಿದ್ದಾರೆ.
ಬಿಗ್ ಬಾಸ್‌ನಿಂದ ಬಂದ್ಮೇಲೆ ವಿನಯ್‌ಗೆ ಕನ್ನಡದ ಜೊತೆ ಪರಭಾಷೆಗಳಿಂದ ಕೂಡ ಬೇಡಿಕೆ ಶುರುವಾಗಿದೆ. ಮೂಲಗಳ ಪ್ರಕಾರ, ಕನ್ನಡ ಸಿನಿಮಾಗಳ ಜೊತೆ ತೆಲುಗು, ತಮಿಳಿನಲ್ಲಿಯೂ ವಿನಯ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಕಾದುನೋಡಬೇಕಿದೆ.