ಕಿಚ್ಚನ ಕುಟುಂಬದ ಜೊತೆ ಊಟ ಸವಿದ ವಿನಯ್ ಗೌಡ

Public TV
1 Min Read
vinay gowda

ಕಿಚ್ಚ ಸುದೀಪ್ ಸದ್ಯ ‘ಮ್ಯಾಕ್ಸ್’ (Max Film) ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣಕ್ಕೆ ಬ್ರೇಕ್ ಸಿಗುತ್ತಿದ್ದಂತೆ ವಿನಯ್ ಗೌಡರನ್ನು (Vinay Gowda) ಭೇಟಿಯಾಗಿದ್ದಾರೆ. ಕಿಚ್ಚನ ಕುಟುಂಬದ ಜೊತೆಯಿರುವ ಸುಂದರ ಫೋಟೋವನ್ನು ವಿನಯ್ ಶೇರ್ ಮಾಡಿ ‘ಹಂಬಲ್ ಫ್ಯಾಮಿಲಿ’ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ:ಡಾ.ಮಂಜುನಾಥ್ ಪರ ಇಂದು ಪವನ್‌ ಕಲ್ಯಾಣ್‌ ಪ್ರಚಾರ

vinay gowda

ಹಂಬಲ್ ಫ್ಯಾಮಿಲಿ. ಅದ್ಭುತ ಊಟಕ್ಕೆ ಧನ್ಯವಾದ. ಡೆಸರ್ಟ್ ಅತ್ಯುತ್ತಮವಾಗಿತ್ತು ಎಂದು ಬರೆದಿದ್ದಾರೆ ವಿನಯ್. ಈ ಪೋಸ್ಟ್‌ಗೆ ಸಾನ್ವಿ (Saanvi Sudeep) ಅವರು ರಿಪ್ಲೈ ಮಾಡಿದ್ದು, ಹಾರ್ಟ್ ಎಮೋಜಿ ಹಾಕಿದ್ದಾರೆ. ಕಿಚ್ಚನ (Kiccha Sudeep) ಡೌನ್ ಟು ಅರ್ಥ್ ಗುಣ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಊಟ ಮಾತ್ರವಲ್ಲ ಕಿಚ್ಚನ ಜೊತೆ ವಿನಯ್ ಕೆಲ ಕಾಲ ಕಳೆದಿದ್ದಾರೆ.

ಬಿಗ್ ಬಾಸ್ ಕನ್ನಡ 10 ಫಿನಾಲೆ ಮುಗಿದ ಮೇಲೆ ಸ್ಪರ್ಧಿಗಳನ್ನು ಸುದೀಪ್ ಭೇಟಿಯಾಗಿರಲಿಲ್ಲ. ಬಿಗ್‌ ಬಾಸ್‌ ಶೋ ಬಳಿಕ ಒಪ್ಪಿಕೊಂಡಿರುವ ಸಿನಿಮಾದಲ್ಲಿ ಸುದೀಪ್ ಬ್ಯುಸಿಯಾಗಿದ್ದರು. ಮೊನ್ನೆಯಷ್ಟೇ (ಏ.19) ಬಿಗ್ ಬಾಸ್ ವಿನ್ನರ್ ಕಾರ್ತಿಕ್‌ರನ್ನು (Karthik Mahesh) ‘ಮ್ಯಾಕ್ಸ್’ ಸಿನಿಮಾ ಸೆಟ್‌ನಲ್ಲಿ ಭೇಟಿಯಾಗಿದ್ದರು. ಈಗ ವಿನಯ್‌ರನ್ನು ಕಿಚ್ಚ ಭೇಟಿಯಾಗಿರೋದು ಅಭಿಮಾನಿಗಳ ಗಮನ ಸೆಳೆದಿದೆ.

Share This Article