ಕನ್ನಡ ಬಿಗ್ ಬಾಸ್ 10 ಶೋಗೆ ಕ್ಷಣಗಣನೆ ಶುರುವಾಗಿದೆ. ಸದ್ಯದಲ್ಲೇ ಪ್ರಸಾರವಾಗಲಿರುವ ಬಿಗ್ ಬಾಸ್ ಶೋ ಕುರಿತಂತೆ ಈ ಹಿಂದೆ ಸಣ್ಣದೊಂದು ಝಲಕ್ ಬಿಟ್ಟಿದ್ದರೆ, ಉಳಿದಂತೆ ಯಾವುದೇ ಆಸಕ್ತಿ ಹುಟ್ಟಿಸುವಂತೆ ಪ್ರೊಮೋ ರಿಲೀಸ್ ಮಾಡಿರಲಿಲ್ಲ. ಹಾಗಾಗಿ ಸುದೀಪ್ (Sudeep) ಅಭಿಮಾನಿಗಳಿಗೆ ಬೇಸರವಾಗಿತ್ತು. ಆ ಬೇಸರವನ್ನು ನಿವಾರಿಸುವಂತಹ ಪ್ರೊಮೋವನ್ನು ವಾಹಿನಿ ರಿಲೀಸ್ ಮಾಡಿದೆ.
ಈ ಬಾರಿಯ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಜೊತೆಗೊಂದು ಊರ ಹಬ್ಬದ ಕಾನ್ಸೆಪ್ಟ್ ನೊಂದಿಗೆ ವಿಡಿಯೋ ರಿಲಿಸ್ ಆಗಿದೆ. ಈ ಬಾರಿ ನೂರು ದಿನಗಳ ಹಬ್ಬವೆಂಬ ಕಾನ್ಸೆಪ್ಟ್ ನಲ್ಲಿ ಪ್ರೊಮೋ (Promo) ಮಾಡಲಾಗಿದೆ. ಈ ಹಬ್ಬಕ್ಕಾಗಿ ಯಾರೆಲ್ಲ ಕಾಯುತ್ತಿದ್ದಾರೆ ಎನ್ನುವುದನ್ನು ಹೇಳಲಾಗಿದೆ. ಈ ಪ್ರೊಮೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಬಾರಿ ವಾಹಿನಿಯು ಒಟಿಟಿ ಬಿಗ್ ಬಾಸ್ ಯೋಜನೆಗೆ ಬ್ರೇಕ್ ಹಾಕಿ, ಬಿಗ್ ಬಾಸ್ ಸೀಸನ್ 10ಕ್ಕೆ(Bigg Boss Kannada) ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಈ ಮೂಲಕ ಟಿವಿ ಬಿಗ್ ಬಾಸ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ.
ಬಿಗ್ ಬಾಸ್ ಕಾರ್ಯಕ್ರಮ ಎಲ್ಲಿ ನಡೆಯುತ್ತೆ? ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆ ನಡೆಯುತ್ತಿದೆ. ಈ ಬಾರಿ ಹೊಸ ಸೀಸನ್ನಲ್ಲಿ ನಾಗಿಣಿ 2 (Nagini 2) ನಟಿ ನಮ್ರತಾ ಗೌಡ (Namratha Gowda), ಹುಚ್ಚ ಚಿತ್ರದ ನಾಯಕಿ ರೇಖಾ (Rekha), ಸೋಶಿಯಲ್ ಮೀಡಿಯಾ ಸ್ಟಾರ್ಗಳಾದ ಭೂಮಿಕಾ ಬಸವರಾಜ್(Bhoomika Basavaraj), ವರ್ಷ ಕಾವೇರಿ, ಅಗ್ನಿಸಾಕ್ಷಿ ರಾಜೇಶ್ ಧ್ರುವ, ಸೇರಿದಂತೆ ಹಲವರು ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ:‘ಕಂಬಳ’ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಅನುಷ್ಕಾ ಶೆಟ್ಟಿ
ಎಲ್ಲರ ನೆಚ್ಚಿನ ಕನ್ನಡದ ಬಿಗ್ ಬಾಸ್ ಈಗ ವಾಪಸ್ಸಾಗ್ತಿದೆ. ಕಳೆದ ಸಲ ಮೊಟ್ಟಮೊದಲ ಬಾರಿಗೆ ಒಟಿಟಿಯಲ್ಲಿ ಬಂದ ಬಿಗ್ ಬಾಸ್ ಬೇರೆಯೇ ಹಂತಕ್ಕೆ ತಲುಪಿತ್ತು. ಅದೇ ಫಾರ್ಮುಲಾ ಈ ಬಾರಿನೂ ಮುಂದುವರೆಯುತ್ತೆ ಎನ್ನಲಾಗಿತ್ತು. ಆದರೆ, ಈ ಬಾರಿ ಬಿಗ್ ಬಾಸ್ ಓಟಿಟಿ (Bigg Boss 2) ಆಟಕ್ಕೆ ಬ್ರೇಕ್ ಕೊಡಲಾಗಿದೆ. ಮೊದಲು ಒಟಿಟಿ ಆ ನಂತರ ಟಿವಿಗೆ ಅನ್ನೋ ಕಾನ್ಸೆಪ್ಟ್ ಅನ್ನು ಕೈ ಬಿಟ್ಟಿದೆ ವಾಹಿನಿ.
ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ದಿನಾಂಕ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮುಂತಾದವುಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ವಾಹಿನಿಯ ಕಡೆಯಿಂದ ಬಿಗ್ ಬಾಸ್ ಸೀಸನ್ 10ಕ್ಕೆ(Bigg Boss Kannada 10) ಭರ್ಜರಿ ತಯಾರಿ ಮಾಡಿಕೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
Web Stories