Bigg Boss Kannada 10: ವೇಟಿಂಗ್ ಲಿಸ್ಟ್ ನಲ್ಲಿ ನಟಿ ಸಂಗೀತಾ ಶೃಂಗೇರಿ

Public TV
1 Min Read
Sangeetha Sringeri 2

‘ತೆಳ್ಳಗೆ ಬೆಳ್ಳಗೆ ಇದ್ದಾನೆ… ಎನ್ನುತ್ತ ವೇದಿಕೆಯ ಮೇಲೆ ಕ್ಯೂಟ್ ಆಗಿ ಪರ್ಫಾರ್ಮ್‌ ಮಾಡಿದ ಸುಂದರಿ ಸಂಗೀತಾ ಶೃಂಗೇರಿ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟಿ. ಹಿಂದೊಮ್ಮೆ ‘ಕೋಟಿ ಕೊಟ್ರೂ ಬಿಗ್‌ಬಾಸ್‌ಗೆ ಹೋಗಲ್ಲ’ ಎಂದಿದ್ದ ಸಂಗೀತಾ (Sangeetha Sringeri), ಕೋಟಿಗೂ ಮೀರಿದ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ಹ್ಯಾಪಿ ಬಿಗ್‌ಬಾಸ್‌ (Bigg Boss Kannada) ವೇದಿಕೆಗೆ ಬಂದಿದ್ದಾರೆ. ತಮ್ಮ ಲಕ್ಕಿ ನಂಬರ್ ಆದ ‘10’ ಬಿಗ್‌ಬಾಸ್‌ ಸೀಸನ್‌ ನಂಬರ್ ಕೂಡ ಆಗಿರುವುದು ಅವರು ಬಿಗ್‌ಬಾಸ್‌ಗೆ ಬರಲು ಒಂದು ಕಾರಣ.

Sangeetha Sringeri 3

‘ಹುಡುಗಿಯರು ನನ್ನ ಸ್ಪರ್ಧಿಗಳಲ್ಲ; ಹುಡುಗರು ನನ್ನ ಸ್ಪರ್ಧಿಗಳು’ ಎನ್ನುವ ಸಂಗೀತ ಸಿನಿಮಾ ಕ್ಷೇತ್ರಕ್ಕೆ ಬರದಿದ್ದರೆ ಹಾರುಹಕ್ಕಿಯಾಗಿ ಏರ್‌ಫೋರ್ಸ್‌ನಲ್ಲಿರುತ್ತಿದ್ದರು. ಅದು ಅವರ ಕನಸಾಗಿತ್ತು. ‘ಸಿಂಬಾ’ ಅವರ ನೆಚ್ಚಿನ ಸ್ನೇಹಿತ. ಚಿಕ್ಕುವನ್ನು ಮಿಸ್‌ ಮಾಡುಕೊಳ್ಳುವ ಬೇಸರವನ್ನು ‘ಚಾರ್ಲಿ’ ಮರೆಸುತ್ತದೆ ಎಂಬ ಸಮಾಧಾನವೂ ಅವರಿಗಿತ್ತು.

Sangeetha Sringeri 1

ಚಾರ್ಲಿ 777 ಮೂಲಕ ನಟನಾಪಯಣ ಆರಂಭಿಸಿದ ಸಂಗೀತಾ, ಹೊಸ ಚಾಲೆಂಜ್‌ ಅನ್ನು ಫೇಸ್‌ ಮಾಡುವುದಕ್ಕಾಗಿ ಬಿಗ್‌ಬಾಸ್‌ ಮನೆಗೆ ಬರುತ್ತಿದ್ದಾರೆ. ‘ಫ್ಯಾಮಿಲಿ ನನಗೆ ಎಲ್ಲವೂ ಹೌದು’ ಎನ್ನುವ ಸಂಗೀತಾ ಅವರನ್ನು ಮನಸಲ್ಲಿ ಇಟ್ಟುಕೊಂಡೇ ಮನೆಯೊಳಗೆ ಹೋಗಲು ಬಂದಿದ್ದರು.

 

ಇದುವರೆಗೆ ಜನರು ನನ್ನ ಕ್ಯೂಟ್‌ ಆದ ಪಾತ್ರಗಳ ಮೂಲಕವೇ ಗುರ್ತಿಸಿದ್ದಾರೆ. ಆದರೆ ನಾನು ನಿಜವಾಗಿ ಎಷ್ಟು ಬೋಲ್ಡ್‌ ಆಗಿದ್ದೀನಿ ಎಂಬುದನ್ನು ಜನರಿಗೆ ತೋರಿಸಬೇಕು ಎಂದುಕೊಂಡಿರುವ ಸಂಗೀತಾ ಅವರಿಗೆ 76% ನೀಡಿ ಹೋಲ್ಡ್‌ನಲ್ಲಿ ಇಟ್ಟಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article