ಬಿಗ್ ಬಾಸ್ ಓಟಿಟಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ದಿನದಿಂದ ದಿನಕ್ಕೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗುತ್ತಿದೆ. ಇದೀಗ ಟಾಸ್ಕ್‌ವೊಂದರಲ್ಲಿ ಜಯಶ್ರೀ ಮಾಡಿದ ಎಡವಟ್ಟಿನಿಂದ ನಂದು ಕಣ್ಣಿಗೆ ನೋವಾಗಿದೆ. ಇದರಿಂದ ಬಿಗ್ ಬಾಸ್ ಕೆಂಗಣ್ಣಿಗೂ ಗುರಿಯಾಗಿರುವ ಜಯಶ್ರೀ, ಈ ವಾರ ಬಿಗ್ ಬಾಸ್ ಅವರಿಂದಲೇ ನೇರವಾಗಿ ನಾಮಿನೇಟ್ ಆಗಿದ್ದಾರೆ.
ದೊಡ್ಮನೆಯ ಆಟ ಇದೀಗ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಜಶ್ವಂತ್ ನಂತರ ವಾರದ ಕ್ಯಾಪ್ಟನ್ ಆಗಲು ಸ್ಪರ್ಧಿಗಳ ನಡುವೆ ಜಟಾಪಟಿ ನಡೆದಿದೆ. ವಾರದ ಕ್ಯಾಪ್ಟನ್ ಪಟ್ಟ ಎರಲು ಬಿಗ್ ಬಾಸ್, ಮನೆ ಮಂದಿಗೆ ತಿರುಗುವ ಕುರ್ಚಿ ಟಾಸ್ಕ್ ನೀಡಿದ್ದರು. ತಿರುಗುವ ಕುರ್ಚಿಯ ಮೇಲೆ ಪ್ರತಿ ಸ್ಪರ್ಧಿ 15 ನಿಮಿಷ ಕೂರಬೇಕು. ಸ್ಪರ್ಧಿಗೆ ಸಮಯದ ಬಗ್ಗೆ ಅರಿವಿರಬೇಕು. ಈ ವೇಳೆ ಇತರೇ ಸ್ಪರ್ಧಿಗಳು ಟಾಸ್ಕ್ ಕಂಪ್ಲೀಟ್ ಮಾಡದಂತೆ ತಡೆಯಬಹುದು.
ತಿರುಗುವ ಕುರ್ಚಿ ಟಾಸ್ಕ್‌ನಲ್ಲಿ ಎಲ್ಲಾ ಸ್ಪರ್ಧಿಗಳಂತೆ ನಂದು ಕೂಡ ಭಾಗವಹಿಸಿದ್ದಾರೆ. ಈ ವೇಳೆ ನಂದು ತಿರುಗುವ ಚೇರ್‌ನಲ್ಲಿ ಕಣ್ಣು ಮುಚ್ಚಿ ಕುಳಿತು ಸಂಖ್ಯೆಗಳನ್ನ ಏಣಿಸುತ್ತಿದ್ದಾರೆ. ಟಾಸ್ಕ್ ಕಂಪ್ಲೀಟ್ ಮಾಡದಂತೆ ಈ ವೇಳೆ ಜಯಶ್ರೀ ಕಣ್ಣಿಗೆ ಸ್ಪ್ರೈ ಹೊಡೆದಿದ್ದಾರೆ. ಬಳಿಕ ಕಣ್ಣಿಗೆ ಎರಚಿದ್ದಾರೆ. ಈ ಸಮಯದಲ್ಲಿ ನಂದು ಕಣ್ಣಿಗೆ ನೋವಾಗಿದೆ. ಇತರ ಸ್ಪರ್ಧಿಗಳು, ಮಾತನಾಡಿ, ಸ್ಪ್ರೈ ಹೊಡೆಯಬೇಡಿ ಎಂದು ಹೇಳಿದ್ದರು ಜಯಶ್ರೀ ಯಾರನ್ನ ಮಾತನ್ನ ಲೆಕ್ಕಿಸದೆ ವಾದ ಮಾಡಿದ್ದಾರೆ. ಟಾಸ್ಕ್ ನಂತರ ನಂದು ಬಳಿ ಜಯಶ್ರೀ ಕ್ಷಮೆ ಕೇಳಿದ್ದರು ಕೂಡ, ನಂದು ರಿಯಾಕ್ಟ್ ಮಾಡಲಿಲ್ಲ.
ನಂತರ ನಾಲ್ಕನೇ ವಾರದ ಕ್ಯಾಪ್ಟನ್ ಆಗಿ, ಸೋಮಣ್ಣ ಜಯಭೇರಿ ಬಾರಿಸಿದ್ದಾರೆ. ಈ ವಿಚಾರವನ್ನು ಬಿಗ್ ಬಾಸ್ ಘೋಷಿಸಿದ್ದಾರೆ. ಸೋಮಣ್ಣ ಅವರಿಗಿಂತ ಜಯಶ್ರೀ ಜಾಸ್ತಿ ನಿಮಿಷವೇ ಆಡಿದ್ದರು ಕೂಡ, ಜಯಶ್ರೀ ಮಾಡಿದ ಎಡವಟ್ಟಿನಿಂದ ಸೋತಿದ್ದಾರೆ. ಆಟದ ವೇಳೆ ನಂದು ಕಣ್ಣಿಗೆ ಸ್ಪ್ರೈ ಹಾಕಿದ್ದೆ, ಜಯಶ್ರೀಗೆ ಮುಳುವಾಗಿತ್ತು. ಜೊತೆಗೆ ಆಟದ ವೇಳೆ ಮೈಕ್ ಕೂಡ ಜಯಶ್ರೀ ಹಾನಿ ಮಾಡಿದ್ದರು. ಹಾಗಾಗಿ ಈ ವಾರ ಎಲಿಮಿನೇಟ್ ಆಗದೇ ಉಳಿದರೆ ಮುಂದಿನ ವಾರ ಕೂಡ ಜಯಶ್ರೀ ನೇರ ನಾಮಿನೇಟ್ ಆಗುವುದಾಗಿ ಬಿಗ್ ಬಾಸ್ ತಿಳಿಸಿದ್ದಾರೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್
ಈ ವೇಳೆ ವಾರದ ಆಕ್ಟಿವಿಟಿ ಗಮನಿಸಿ, ಬೆಸ್ಟ್ ಸ್ಪರ್ಧಿಯಾಗಿ ಗುರೂಜಿ ಹೊರಹೊಮ್ಮಿದರೆ, ಕಳಪೆ ಸ್ಪರ್ಧಿಯಾಗಿ ಜಯಶ್ರೀ ಬಿಗ್ ಬಾಸ್ ಮನೆಯ ಜೈಲಿಗೆ ಸೇರಿದ್ದಾರೆ. ಜಯಶ್ರೀ ಮಾಡಿದ ಎಡವಟ್ಟಿನಿಂದ ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಾರ ಕೂಡ ನಾಮಿನೇಟ್ ಆಗಿರುವ ಜಯಶ್ರೀಗೆ ಬಿಗ್ ಬಾಸ್ ಮನೆಯ ಆಟ ಅಂತ್ಯವಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ