ಬಾಲಿವುಡ್ ಬೆಡಗಿ ಉರ್ಫಿ ಜಾವೇದ್ (Urfi Javed) ಸದಾ ಒಂದಲ್ಲಾ ಒಂದು ಹೇಳಿಕೆ ಕೊಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈಗ ಸೌತ್ ನಟಿ ಸಮಂತಾ ನನ್ನ ಫ್ರೆಂಡ್ ಎಂದು ಹೊಸ ಕಥೆ ಹೇಳಿದ್ದಾರೆ ವೈರಲ್ ಹುಡುಗಿ ಉರ್ಫಿ. ಇದನ್ನೂ ಓದಿ:ಶಾರ್ಟ್ ಡ್ರೆಸ್‌ನಲ್ಲಿ ಕುಣಿದ ರೀಲ್ಸ್ ರಾಣಿ ಸೋನು
ಸದ್ಯ ‘ಫಾಲೋ ಕರ್ ಲೋ ಯಾರ್’ ಶೋನಲ್ಲಿ ಆ್ಯಕ್ಟಿವ್ ಇರುವ ಹುಡುಗಿ ಉರ್ಫಿ, ಇದರ ಪ್ರಚಾರಕ್ಕಾಗಿ ನೀಡಿದ ಸಂದರ್ಶನವೊಂದರಲ್ಲಿ ಸಮಂತಾ ನನ್ನ ಫ್ರೆಂಡ್ ಎಂದಿದ್ದಾರೆ. ಸಮಂತಾ (Actress Samantha) ಮತ್ತು ನಾನು ಇನ್ಸ್ಟಾಗ್ರಾಂ ಫ್ರೆಂಡ್ಸ್ ಎಂದು ಹೇಳಿಕೆ ನೀಡಿದ್ದಾರೆ. ಸಮಂತಾಗೆ ನನ್ನ ವಿಡಿಯೋ ಇಷ್ಟವಾದ್ರೆ ಅದನ್ನು ಅವರ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡುತ್ತಾರೆ. ಅದರ ಹಿಂದೆ ಏನೋ ಉದ್ದೇಶ ಇದೆ ಎಂದು ಅನಿಸುವುದಿಲ್ಲ. ಅವರ ಜೊತೆ ಆಗಾಗ ಇನ್ಸ್ಟಾಗ್ರಾಂದಲ್ಲಿ ಮಾತುಕತೆ ಮಾಡಿದ್ದೇನೆ ಎಂದು ಮಾತನಾಡಿದ್ದಾರೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿದ್ದಾರೆ ನಟಿ. ಈ ವಿಚಾರ ಕೂಡ ಚರ್ಚೆಗೆ ಗ್ರಾಸವಾಗಿದೆ.
ಅಂದಹಾಗೆ, ಇದೇ ಶೋನಲ್ಲಿ 3 ವರ್ಷಗಳಿಂದ ಸೆಕ್ಸ್ ಮಾಡಿಲ್ಲ ಎಂದಿರುವ ಉರ್ಫಿ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ನಾನು ಕಳೆದ 3 ವರ್ಷಗಳಿಂದ ಯಾರ ಜೊತೆಯೂ ದೈಹಿಕ ಸಂಪರ್ಕ ನಡೆಸಿಲ್ಲ. ಯಾರಿಗೂ ಕಿಸ್ ಕೂಡ ಮಾಡಿಲ್ಲ. ಯಾಕೆ ಎಂಬುದನ್ನು ಕೂಡ ನಟಿ ಮಾತನಾಡಿ, ನನ್ನ ಬಳಿ ಎಲ್ಲಿಯವರೆಗೂ ಪ್ರೈವೇಟ್ ಜೆಟ್ ಇರುವುದಿಲ್ಲವೋ ಅಲ್ಲಿ ತನಕ ಸೆಕ್ಸ್ ಮಾಡಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ ಎಂದಿದ್ದರು.
ನಾನು ಇಂಡಿಪೆಂಡೆಂಟ್ ಹುಡುಗಿ ಸ್ವಾಭಿಮಾನಿ. ಇಲ್ಲಿಯವರೆಗೂ ನನ್ನ ಜೀವನದಲ್ಲಿ ಎಲ್ಲವನ್ನೂ ನಾನೇ ಮಾಡಿಕೊಂಡಿದ್ದೇನೆ. ಹಾಗಾಗಿ ಸಂಗಾತಿಯ ಮುಂದೆ ನಾನು ದುರ್ಬಲವಾಗಿ ಕಾಣಲು ಇಷ್ಟಪಡುವುದಿಲ್ಲ ಎಂದು ಉರ್ಫಿ ಜಾವೇದ್ ಕಾರಣ ತಿಳಿಸಿದ್ದರು. ಈಗ ನಟಿಯ ಹೇಳಿಕೆಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬಂದಿತ್ತು.
ಇನ್ನೂ 2017ರಿಂದ 2022ರವರೆಗೆ ಪರಾಸ್ ಕಲ್ನಾವತ್ ಜೊತೆ ಉರ್ಫಿ ಡೇಟ್ ಮಾಡಿದರು. ಕೆಲ ಮನಸ್ತಾಪಗಳಿಂದ 2022ರಲ್ಲಿ ಇಬ್ಬರೂ ಬ್ರೇಕಪ್ ಮಾಡಿಕೊಂಡರು.