‘ಬಿಗ್ ಬಾಸ್’ ಮನೆಯೊಳಗೂ ಹೊರಗೂ ಧರ್ಮ, ಉಗ್ರಂ ಮಂಜುದ್ದೇ ಹವಾ- ಏನದು ಅಪ್‌ಡೇಟ್?

Public TV
2 Min Read
dharma 1 1

ಸ್ಯಾಂಡಲ್‌ವುಡ್‌ನಲ್ಲಿ ‘ಟೆನೆಂಟ್’ (Tenant) ಚಿತ್ರದ ಟೀಸರ್ ಸದ್ದು ಮಾಡುತ್ತಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ‘ಟೆನೆಂಟ್’ ಪ್ರಮೋಷನ್ ಅಂಗಳಕ್ಕೆ ಇಳಿದಿದೆ. ಸದ್ಯ ‘ಬಿಗ್ ಬಾಸ್’ (Bigg Boss Kannada 11) ಮನೆಯೊಳಗೆ ಇರುವ ನಟ ಧರ್ಮ ಕೀರ್ತಿರಾಜ್ (Dharma Keerthiraj) ಮತ್ತು ಉಗ್ರಂ ಮಂಜು (Ugramm Manju) ಮನೆ ಹೊರಗೂ ಟೆನೆಂಟ್‌ ಚಿತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ.

FotoJet 16

‌’ಟೆನೆಂಟ್’ ಚಿತ್ರದಲ್ಲಿ ಧರ್ಮ, ಉಗ್ರಂ ಮಂಜು ಜೊತೆ ತಿಲಕ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ (Sonu Gowda) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಶ್ರೀಧರ್ ಶಾಸ್ತ್ರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಶ್ರೀಧರ್ ಅವರಿಗೆ ಇದು ಮೊದಲ ಸಿನಿಮಾ. ಯುವ ನಿರ್ದೇಶಕನ ಪ್ರಯತ್ನಕ್ಕೆ ತಾರಾಬಳಗ ಸಾಥ್ ಕೊಟ್ಟಿದೆ. ಸದ್ಯ ರಿಲೀಸ್ ಆಗಿರುವ ಟೀಸರ್ ನೋಡಿದ್ರೆ, ಇದು ಚೊಚ್ಚಲ ಸಿನಿಮಾ ಅಂತ ಅನಿಸದ ಹಾಗೆ ಅಷ್ಟೆ ಅಚ್ಚುಕಟ್ಟಾಗಿ ಮಾಡಿದ್ದಾರೆ ನಿರ್ದೇಶಕರು. ಇದನ್ನೂ ಓದಿ:ಮಗನ ಲೇಟೆಸ್ಟ್‌ ಫೋಟೋ ಶೇರ್‌ ಮಾಡಿದ ‘ಹೆಬ್ಬುಲಿ’ ನಟಿ

tenant

ಮಾಸ್ಟರ್ ಚಾಯ್ಸ್ ಕ್ರಿಯೇಶನ್ ನಡಿ ನಾಗರಾಜ್ ಟಿ ನಿರ್ಮಾಣ ಮಾಡಿರುವ ‘ಟೆನೆಂಟ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸದ್ಯ, ಗಮನ ಸೆಳೆಯುತ್ತಿದೆ. ವಿಶೇಷ ಎಂದರೆ, ಈ ಟೀಸರ್ ಅನ್ನು ಸ್ಯಾಂಡಲ್‌ವುಡ್‌ನ ಅನೇಕ ಗಣ್ಯರು ಸೇರಿ ರಿಲೀಸ್ ಮಾಡಿದ್ದಾರೆ. ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಖ್ಯಾತ ಛಾಯಾಗ್ರಹಕರಾದ ಸತ್ಯ ಹೆಗ್ಡೆ, ಡಿಸೈನರ್ ಹಾಗೂ ವಿತರಕಿ ಸಚಿನ್ನಾ ಹೆಗ್ಗಾರ್, ಚಂದನ್ ಶೆಟ್ಟಿ, ನಟ, ನಿರ್ದೇಶಕ ವಿಕ್ಕಿ, ನಟ ನವೀಶ್ ಶಂಕರ್, ಸೇರಿದಂತೆ ಅನೇಕರು ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಸಾಥ್ ನೀಡಿದ್ದಾರೆ.

FotoJet 1 8

ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಟೆನೆಂಟ್’ ಸಿನಿಮಾದ ಟೀಸರ್ ಆಕರ್ಷಕವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ‘ಕಣ್ ಕಣ್ಣ ಸಲಿಗೆ’ ಎಂದು ಲವರ್ ಬಾಯ್ ಆಗಿ ಮಿಂಚುತ್ತಿದ್ದ ನಟ ಧರ್ಮ ಕೀರ್ತಿರಾಜ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿರುವುದು ವಿಶೇಷ. ಇನ್ನೂ ತಿಲಕ್ ರಾಜ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ವರ್ಷಗಳ ಬಳಿಕ ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ. ಹಾಗಾಗಿಯೇ ಈ ಸಿನಿಮಾದ ಮೇಲೆ ಅವರಿಗೂ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಟೀಸರ್‌ನಲ್ಲಿ ಎಲ್ಲರ ಪಾತ್ರಗಳು ಸಹ ಗಮನ ಸೆಳೆಯುತ್ತಿದೆ. ಅಂದಹಾಗೆ ಚಿತ್ರಕ್ಕೆ ಗಿರೀಶ್ ಹೊತೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಜ್ವಲ್ ಸಂಕಲನ, ಮನೋಹರ್ ಛಾಯಾಗ್ರಹಣ ಚಿತ್ರಕ್ಕಿದೆ.

Share This Article