‘ಬಿಗ್ ಬಾಸ್’ ಬೆಡಗಿ ಸೋನು ಗೌಡ (Sonu Srinivas Gowda) ಗೋವಾಗೆ (Goa) ತೆರಳಿದ್ದಾರೆ. ಮಳೆಯಲ್ಲಿ ಕೊಡೆ ಹಿಡಿದು ಸಖತ್ ಹಾಟ್ ಆಗಿ ಸೋನು ಗೌಡ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ನಟಿ ಸೋನು ಈಗ ಗೋವಾ ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ತುಂಡು ಬಟ್ಟೆ ಧರಿಸಿ ನಟಿ ಸಖತ್ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಕಪ್ಪು ಕಲರ್ ಟೀ ಶರ್ಟ್‌ಗೆ ನೀಲಿ ಬಣ್ಣದ ಚಿಕ್ಕದಾದ ಜಿನ್ಸ್ ಚಡ್ಡಿಯನ್ನು ಸೋನು ಧರಿಸಿದ್ದಾರೆ. ನಟಿಯ ಲುಕ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಬರುತ್ತಿವೆ. ಚಡ್ಡಿ ಸಣ್ಣದಾಯ್ತು ಎಂದು ನಟಿಯ ಕಾಲೆಳೆದಿದ್ದಾರೆ.
ಇನ್ನೂ ಮಾರ್ಚ್ 22ರಂದು ಅಕ್ರಮವಾಗಿ ಮಗುವೊಂದನ್ನು ದತ್ತು ಪಡೆದ ವಿಚಾರವಾಗಿ 11 ದಿನಗಳ ಕಾಲ ನಟಿ ಸೋನು ಬಂಧನದಲ್ಲಿದ್ದರು. ಆ ನಂತರ ಬಿಡುಗಡೆಯಾದರು. ಇದನ್ನೂ ಓದಿ:ಆ.8ರಿಂದ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಶುರು
ಅಂದಹಾಗೆ, ‘ಕ್ಯಾಡ್ಬರೀಸ್’ ಸಿನಿಮಾದಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಐಟಂ ಹಾಡಿಗೆ ನಟಿ ಹೆಜ್ಜೆ ಹಾಕಿದ್ದಾರೆ. ಧರ್ಮ ಕೀರ್ತಿರಾಜ್, ಅದ್ವಿತಿ ಶೆಟ್ಟಿ ನಟನೆಯ ಸಿನಿಮಾ ಇದಾಗಿದೆ. ಈ ಚಿತ್ರದ ರಿಲೀಸ್‌ಗೆ ಸೋನು ಎದುರು ನೋಡ್ತಿದ್ದಾರೆ.