‘ಬಿಗ್ ಬಾಸ್ ಕನ್ನಡ 11’ಕ್ಕೆ (Bigg Boss Kannada 11) ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ (Shobha Shetty) ಅನಾರೋಗ್ಯದ ಹಿನ್ನೆಲೆ ಅವರ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ದೊಡ್ಮನೆಯಿಂದ ಎಲಿಮಿನೇಟ್ ಆಗ್ತಿದ್ದಂತೆ ನಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಬೆಡ್ ಮೇಲಿಂದಲೇ ಫ್ಯಾನ್ಸ್‌ಗೆ ನಟಿ ಸಂದೇಶ ಕೊಟ್ಟಿದ್ದಾರೆ.
ಕಳೆದ ವಾರ ‘ಬಿಗ್ ಬಾಸ್’ನಿಂದ ಎಲಿಮಿನೇಷನ್ ಆದ ಬಳಿಕ ಆಸ್ಪತ್ರೆಗೆ ನಟಿ ದಾಖಲಾಗಿದ್ದಾರೆ. ಉತ್ತಮಗೊಳ್ಳುತ್ತಿದ್ದೇನೆ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ನಿಮ್ಮ ಪ್ರೀತಿಗಾಗಿ ತುಂಬಾ ಧನ್ಯವಾದಗಳು ಎಂದು ಶೋಭಾ ಶೆಟ್ಟಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದಾರೆ. ಆಸ್ಪತ್ರೆಯ ಬೆಡ್‌ನಿಂದಲೇ ಅಭಿಮಾನಿಗಳ ಪ್ರೀತಿಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಮೋಹಕ ತಾರೆ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಉಪೇಂದ್ರ ಜೊತೆ ‘ರಕ್ತ ಕಾಶ್ಮೀರ’ದ ಕಥೆ ಹೇಳಲು ಸಜ್ಜಾದ ರಮ್ಯಾ
ಫೈರ್ ಲೇಡಿ ಆಗಿ ಗುರುತಿಸಿಕೊಂಡಿದ್ದ ಶೋಭಾ ಶೆಟ್ಟಿಗೆ ಆರೋಗ್ಯ ಕೈಕೊಟ್ಟಿದ್ದಕ್ಕೆ ವೀಕೆಂಡ್ ಶೋನಲ್ಲಿ ಸುದೀಪ್‌ಗೆ (Sudeep) ಬಿಗ್ ಬಾಸ್ ಆಟ ಕ್ವೀಟ್ ಮಾಡೋದಾಗಿ ಹೇಳಿದರು. ಇದರಿಂದ ಶಿಶಿರ್ ಮತ್ತು ಐಶ್ವರ್ಯಾಗೆ ದೊಡ್ಮನೆ ಆಟ ಆಡಲು ಮತ್ತೊಂದು ಚಾನ್ಸ್ ಸಿಕ್ಕಿತ್ತು. ಫ್ಯಾನ್ಸ್ ವೋಟ್ ಮಾಡಿ ಉಳಿಸಿದರು ಕೂಡ ಆರೋಗ್ಯ ಸಾಥ್ ನೀಡುತ್ತಿಲ್ಲ. ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದರು.
ತೆಲುಗಿನ ಬಿಗ್‌ಬಾಸ್ ಸೀಸನ್ 7ರಲ್ಲಿ ಸಖತ್ ಸೌಂಡು ಮಾಡಿದ್ದ ಶೋಭಾ ಶೆಟ್ಟಿ ಕೊನೆಯವರೆಗೂ ಪ್ರೀತಿ ಗಳಿಸಿ ಉಳಿದುಕೊಂಡಿದ್ದರು. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ತೆಲುಗಿನ ವೀಕ್ಷಕರ ಅಭಿರುಚಿ ಮತ್ತು ಕನ್ನಡ ವೀಕ್ಷಕರ ಅಭಿರುಚಿ ವಿಭಿನ್ನವಾಗಿದೆ ಎಂದು ಶೋಭಾ ಅವರ ಮನಸ್ಸಿಗೆ ಅನಿಸಿತೋ ಗೊತ್ತಿಲ್ಲ. ಅನಾರೋಗ್ಯದ ಹಿನ್ನೆಲೆ ಅವರು ಬಿಗ್ ಬಾಸ್ ಆಟಕ್ಕೆ ಗುಡ್ ಬೈ ಹೇಳಿದರು.