ರ‍್ಯಾಪರ್ ಚಂದನ್ ಶೆಟ್ಟಿ (Chandan Shetty) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಬಳಿಕ ನಿವೇದಿತಾ ಗೌಡ (Niveditha Gowda) ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇದೀಗ ರೀಲ್ಸ್ ಮಾಡುವ ಬದಲು ಹಾಡುವ ಪ್ರಯತ್ನ ಮಾಡ್ತಿರೋ ನಿವೇದಿತಾಗೆ ಸಹೋದರ ಕ್ವಾಟ್ಲೆ ಕೊಟ್ಟಿದ್ದಾರೆ. ಇದರ ತುಣುಕನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಡಿವೋರ್ಸ್ ನಂತರ ಸಿನಿಮಾ ಕೆಲಸ ಮತ್ತು ಮನೆಯತ್ತ ನಟಿ ಹೆಚ್ಚು ಗಮನ ಕೊಡುತ್ತಿದ್ದಾರೆ.ಬಿಡುವಿನ ವೇಳೆಯಲ್ಲಿ, ಹಾಡುತ್ತಿದ್ದ ಅಕ್ಕನನ್ನು ಸಹೋದರ ಸಖತ್ ಆಗಿ ಕಾಡಿಸಿದ್ದಾರೆ. ಇಂಗ್ಲೀಷ್‌ನಲ್ಲಿ ಹಾಡಲು ಕುಳಿತ ನಿವೇದಿತಾಗೆ ಸಹೋದರ ಹೇಗೆಲ್ಲಾ ಕ್ವಾಟ್ಲೆ ಕೊಟ್ಟಿದ್ದಾರೆ. ಇಬ್ಬರ ಮಾತು ಹೇಗಿತ್ತು ಎಂದು ವಿಡಿಯೋ ಶೇರ್ ಮಾಡಿ ಎಲ್ಲಾ ಸಹೋದರರು ಕಿರಿಕಿರಿ ಎಂದು ನಟಿ ಕ್ಯಾಪ್ಷನ್ ನೀಡಿದ್ದಾರೆ.
View this post on Instagram
ನಿವೇದಿತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡ್ತಿದ್ದಂತೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬಂದಿದೆ. ಒಳ್ಳೆಯ ಸಿಂಗರ್ ಚಂದನ್‌ಗೆ ಡಿವೋರ್ಸ್ ಕೊಟ್ಟು ಈಗ ಶೆಟ್ರಿಗೆ ಇಂಗ್ಲೀಷ್‌ನಲ್ಲಿ ಸ್ಪರ್ಧೆ ಕೊಡೋಕೆ ಬರುತ್ತಿದ್ದಾರೆ ಎಂದು ನಿವೇದಿತಾಗೆ ನೆಟ್ಟಿಗರು ಕಾಲೆಳೆದಿದ್ದಾರೆ.
ಇನ್ನೂ ಚಂದನ್ ಶೆಟ್ಟಿ ನಟನೆಯ ‘ಕ್ಯಾಂಡಿಕ್ರಶ್’ (Candy Crush) ಸಿನಿಮಾ ಮತ್ತು ಸೃಜನ್ ಲೋಕೇಶ್ ನಟನೆಯ ‘ಜಿಎಸ್‌ಟಿ’ ಸಿನಿಮಾದಲ್ಲಿ ನಿವೇದಿತಾ ಗೌಡ ನಾಯಕಿಯಾಗಿ ನಟಿಸಿದ್ದಾರೆ.