ಸ್ಯಾಂಡಲ್‌ವುಡ್ ನಟಿಯರಾದ ನಮ್ರತಾ ಗೌಡ, ಖುಷಿ ರವಿ, ದಿವ್ಯಾ ಉರುಡುಗ (Divya Uruduga) ದುಬೈನಲ್ಲಿ ವೆಕೇಷನ್ ಮೂಡ್‌ನಲ್ಲಿದ್ದಾರೆ. ಸುಂದರ ಜಾಗಗಳಿಗೆ ಭೇಟಿ ಕೊಟ್ಟಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಿಗ್ ಬಿ ಮೊಮ್ಮಗನ ಜೊತೆ ಸುಹಾನಾ ಖಾನ್ ಫೋಟೋ ವೈರಲ್- ಡೇಟಿಂಗ್ ಬಗ್ಗೆ ಶುರುವಾಯ್ತು ಚರ್ಚೆ
- Advertisement -
ಸೂರ್ಯನ ಕಿರಣಕ್ಕೆ ಮೈಯೊಡ್ಡಿ ನಮ್ರತಾ(Namratha Gowda), ಖುಷಿ (Kushee Ravi), ದಿವ್ಯಾ ನಿಂತಿರುವ ಫೋಟೋಗಳನ್ನು ನಮ್ರತಾ ಶೇರ್ ಮಾಡಿದ್ದಾರೆ. ದುಬೈನ ಮರುಳುಗಾಡಿನಲ್ಲಿ ಸೇರಿದಂತೆ ಹಲವು ಜಾಗಗಳಿಗೆ ಅವರು ಭೇಟಿ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ವಿಭಿನ್ನ ಎನಿಸುವಂತಹ ತಿನಿಸುಗಳನ್ನು ಟೆಸ್ಟ್ ಮಾಡಿದ್ದಾರೆ.
- Advertisement -
- Advertisement -
ಅಂದಹಾಗೆ, ಕೆಲಸಕ್ಕೆ ಬ್ರೇಕ್ ನೀಡಿ ದುಬೈಗೆ ಹೋಗಿದ್ದಕ್ಕೆ ಕಾರಣವಿದೆ. ಅದವೇ ರಾಜ್ ಕಪ್ ಕ್ರಿಕೆಟ್ ಟೂರ್ನ್‌ಮೆಂಟ್‌ಗಾಗಿ ನಟಿಯರು ತೆರಳಿದ್ದಾರೆ. ಸದ್ಯ ದಿವ್ಯಾ ಉರುಡುಗ (Divya Uruduga) ‘ನಿನಗಾಗಿ’ ಸೀರಿಯಲ್ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ.
- Advertisement -
ನಮ್ರತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ 10’ ಆದ್ಮೇಲೆ ಹಲವು ಶೋ ಮತ್ತು ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಮಾಡಲು ಉತ್ತಮ ಕಥೆಗಾಗಿ ಎದುರು ನೋಡ್ತಿದ್ದಾರೆ.ಖುಷಿ ರವಿ ಅವರು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಚಿತ್ರಗಳ ಜೊತೆ ತೆಲುಗಿನಲ್ಲೂ ಖುಷಿಗೆ ಬೇಡಿಕೆಯಿದೆ.