‘ಬಿಗ್ ಬಾಸ್ ಕನ್ನಡ 11’ರಲ್ಲಿ (Bigg Boss Kannada 11) ಮೋಕ್ಷಿತಾ, ಐಶ್ವರ್ಯಾ, ಶಿಶಿರ್ ಶಾಸ್ತ್ರಿ (Shishir Shastry) ನಡುವೆ ಶುರುವಾದ ಸ್ನೇಹ ಕಾರ್ಯಕ್ರಮ ಮುಗಿದ್ಮೇಲೆಯೂ ಮುಂದುವರೆದಿದೆ. ಶೋಗಷ್ಟೇ ಸೀಮಿತವಾಗಿಡದೇ ಮುಗಿದ್ಮೇಲೆಯೂ ಮೂವರ ನಡುವೆ ಗಾಢವಾದ ಸ್ನೇಹ ಬೆಳೆದಿದೆ. ಇದೀಗ ಮೂವರು ವಿದೇಶಕ್ಕೆ ತೆರಳಿದ್ದಾರೆ. ಐಶ್ವರ್ಯಾ, ಶಿಶಿರ್ ಜೊತೆ ಮೋಕ್ಷಿತಾ ಫಾರಿನ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ: ರಾಕೇಶ್ ನಿಧನಕ್ಕೆ ರಿಷಬ್ ಶೆಟ್ಟಿ ಸಂತಾಪ
View this post on Instagram
ಮೋಕ್ಷಿತಾಗೆ (Mokshitha Pai) ಟ್ರಾವೆಲಿಂಗ್ ಎಂದರೆ ತುಂಬಾ ಇಷ್ಟ. ಸದಾ ಹೊಸ ಜಾಗಗಳಿಗೆ ಭೇಟಿ ನೀಡೋ ನಟಿ ಈಗ ‘ಬಿಗ್ ಬಾಸ್’ ಫ್ರೆಂಡ್ಸ್ ಐಶ್ವರ್ಯಾ, ಶಿಶಿರ್ ಶಾಸ್ತ್ರಿ ಜೊತೆ ಅಜೆರ್ಬೈಜಾನ್‌ನ ಬಾಕುಗೆ ತೆರಳಿದ್ದಾರೆ. ಅವರೊಂದಿಗೆ ಮೋಕ್ಷಿತಾ ತಂಗಿ ಅಮೃತಾ ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ
View this post on Instagram
ಬಾಕು ಕೊಲ್ಲಿಯ ವಿಶಾಲವಾದ ಪ್ರದೇಶಗಳಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಸುತ್ತಾಡಿದ್ದಾರೆ. ಪ್ರಪಂಚದ ಅತಿದೊಡ್ಡ ಒಳನಾಡಿನ ಜಲರಾಶಿಯಾಗಿರೋ ಕ್ಯಾಸ್ಪಿಯನ್ ಸಮುದ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಇಲ್ಲಿನ ಸುಂದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ಮುಕ್ತಾಯ ಆದ್ಮೇಲೆಯೂ ಈ ಮೂವರು ಜೊತೆಯಾಗಿರೋದನ್ನು ನೋಡಿ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
View this post on Instagram
ಇತ್ತೀಚೆಗೆ ಧರ್ಮಸ್ಥಳ, ಕೊಲ್ಲೂರು ದೇಗುಲಕ್ಕೆ ಐಶ್ವರ್ಯಾ(Aishwarya), ಶಿಶಿರ್ ಶಾಸ್ತ್ರಿ ಜೊತೆ ಮೋಕ್ಷಿತಾ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.