‘ಬಿಗ್ ಬಾಸ್’ ಸ್ಪರ್ಧಿ(Bigg Boss) ಹಿನಾ ಖಾನ್ (Hina Khan) ಅಭಿಮಾನಿಗಳಿಗೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. 3ನೇ ಹಂತದ ಸ್ತನ ಕ್ಯಾನ್ಸರ್‌ಗೆ ಒಳಗಾಗಿದ್ದಾರೆ.ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ. ಸದ್ಯ ನಟಿಯ ಆರೋಗ್ಯದ ಸಮಸ್ಯೆ ಕೇಳಿ ಫ್ಯಾನ್ಸ್ ನೋವಾಗಿದೆ. ಇದನ್ನೂ ಓದಿ:‘ಕಂಗುವ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್- ದೇವರ, ಮಾರ್ಟಿನ್ ಜೊತೆ ಕ್ಲ್ಯಾಶ್

View this post on Instagram
ಈ ಕಾಯಿಲೆ ಇದ್ದಾಗಿಯೂ ನಾನು ಉತ್ತಮವಾಗಿದ್ದೇನೆ. ನಾನು ಬಲಶಾಲಿ ಮತ್ತು ಈ ರೋಗವನ್ನು ಜಯಿಸಲು ನಿಜವಾಗಿಯೂ ಬದ್ಧನಾಗಿದ್ದೇನೆ ಎಂದು ಎಲ್ಲರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ. ನನ್ನ ಚಿಕಿತ್ಸೆಯು ಈಗಾಗಲೇ ಪ್ರಾರಂಭವಾಗಿದೆ. ಇದರಿಂದ ಇನ್ನಷ್ಟು ಬಲವಾಗಿ ಹೊರಹೊಮ್ಮಲು ಅಗತ್ಯವಿರುವ ಎಲ್ಲವನ್ನೂ ಮಾಡಲು ನಾನು ಸಿದ್ಧಳಿದ್ದೇನೆ ಎಂದು ಹಿನಾ ಖಾನ್ ಹೇಳಿಕೊಂಡಿದ್ದಾರೆ.
ಈ ಸಮಯದಲ್ಲಿ ನನ್ನ ಖಾಸಗಿತನವನ್ನು ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಪ್ರೀತಿ, ಶಕ್ತಿ ಮತ್ತು ಆಶೀರ್ವಾದವನ್ನು ನಾನು ಆಳವಾಗಿ ಪ್ರಶಂಸಿಸುತ್ತೇನೆ. ನಾನು, ನನ್ನ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆಗೆ ಧನಾತ್ಮಕವಾಗಿ ಇರುತ್ತೇನೆ. ಸರ್ವಶಕ್ತನ ಅನುಗ್ರಹದಿಂದ, ನಾನು ಈ ಸವಾಲನ್ನು ಜಯಿಸುತ್ತೇನೆ ಮತ್ತು ಸಂಪೂರ್ಣವಾಗಿ ಆರೋಗ್ಯವಾಗಿರುತ್ತೇನೆ ಎಂದು ನಾನು ನಂಬಿದ್ದೇನೆ. ದಯವಿಟ್ಟು ನಿಮ್ಮ ಪ್ರಾರ್ಥನೆ, ಆಶೀರ್ವಾದ ಮತ್ತು ಪ್ರೀತಿ ನನ್ನ ಮೇಲೆ ಇರಲಿ ಎಂದು ನಟಿ ಹೇಳಿದ್ದಾರೆ. ಅಂದಹಾಗೆ, ಸ್ತನ ಕ್ಯಾನ್ಸರ್‌ಗೆ ನಟಿ ಸೂಕ್ತ ಚಿಕಿತ್ಸೆ ಪಡೆದುಕೊಳ್ತಿದ್ದಾರೆ.
ಕಳೆದ 16 ವರ್ಷಗಳಿಂದ ಕಿರುತೆರೆಯಲ್ಲಿ ನಟಿ ಆಕ್ಟಿವ್ ಆಗಿದ್ದಾರೆ. ಸಿನಿಮಾ, ಸಾಲು ಸಾಲು ಸೀರಿಯಲ್‌ಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಹಿನಾಗೆ ಭಾರೀ ಜನಪ್ರಿಯತೆ ನೀಡಿತ್ತು.


