ದೊಡ್ಮನೆಯ (Bigg Boss Kannada 11) ಆಟದಿಂದ 57ದಿನಕ್ಕೆ ಧರ್ಮ ಕೀರ್ತೀರಾಜ್ (Dharma Keerthiraj) ಎಲಿಮಿನೇಟ್ ಆಗಿದ್ದಾರೆ. ಈ ಬೆನ್ನಲ್ಲೇ ಧರ್ಮ ಆಪ್ತ ದರ್ಶನ್‌ಗೆ (Darshan) ಜಾಮೀನು ಸಿಕ್ಕಿರುವ ಬಗ್ಗೆ ಹಾಗೂ ಕೇಸ್ ಕುರಿತು ಅವರು ರಿಯಾಕ್ಟ್ ಮಾಡಿದ್ದಾರೆ. ದರ್ಶನ್ ಸರ್‌ಗೆ ಬೇಲ್ ಸಿಕ್ಕಿದು ತುಂಬಾ ಖುಷಿಯಾಯ್ತು ಎಂದು ಧರ್ಮ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹೊರಗಿನ ವಿಚಾರ ನಮಗೆ ತಿಳಿಯುತ್ತಿರಲಿಲ್ಲ. ಮನೆಗೆ ಬಂದಾಗ ಫಸ್ಟ್ ಗುಡ್ ನ್ಯೂಸ್ ಸಿಕ್ಕಿದ್ದೇ ದರ್ಶನ್ (Darshan) ಸರ್‌ಗೆ ಬೇಲ್ ಆದ ವಿಚಾರ ತಿಳಿಯಿತು. ಈ ವಿಚಾರ ಕೇಳಿ ಖುಷಿಯಾಯಿತು. ಜೊತೆಗೆ ಅವರಿಗೆ ಬೆನ್ನು ನೋವಿದೆ ಆಪರೇಷನ್ ಮಾಡಬೇಕು ಎಂದಿದ್ದು ಬೇಜರಾಯಿತು. ಇದನ್ನೂ ಓದಿ:ಸ್ನೇಹಿತರ ಜೊತೆ ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್
ಅವರ ಫಾರ್ಮ್‌ಹೌಸ್‌ನಲ್ಲಿ ಕುದುರೆ ಓಡಿಸುವಾಗ ಆವಾಗಲೇ ಅವರಿಗೆ ಬೆನ್ನು ನೋವಿತ್ತು. ಸ್ಟಂಟ್ ಮಾಡುವಾಗಲೂ ಅವರಿಗೆ ಬೆನ್ನಿಗೆ ಎಷ್ಟು ನೋವಾಗುತ್ತಿತ್ತು ಎಂಬುದು ಗೊತ್ತಾಗುತ್ತಿತ್ತು. ಈ ಸಲ ಸ್ವಲ್ವ ಜಾಸ್ತಿ ಆಗಿರೋದು ಕೇಳಿ ನೋವಾಗಿದೆ. ಅವರು ಬೇಗ ಗುಣಮುಖರಾಗಲಿ ಅಂತ ಆಶಿಸುತ್ತೇನೆ ಎಂದಿದ್ದಾರೆ ಧರ್ಮ.
ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ನೋಡಿದಾಗ ಕಾನೂನಿಗೆ ನಾವು ಯಾವಾಗಲೂ ತಲೆಬಾಗಲೇಬೇಕು. ಇದನ್ನು ಕೋರ್ಟ್ ನಿರ್ಧಾರ ಮಾಡುತ್ತೆ. ನನಗೆ ಒಂದು ಲೈಫ್ ಅಂತ ಕೊಟ್ಟಿರೋದು ದರ್ಶನ್ ಸರ್. ಸಿನಿಮಾರಂಗದಲ್ಲಿ ನಾನು ನಿಲ್ಲೋಕೆ ಅವರು ಕಾರಣ. ಅವರು ನನ್ನ ಶಕ್ತಿ. ನಾನು ದೇವರಲ್ಲಿ ಕೇಳಿಕೊಳ್ಳೋದು ಏನು ಅಂದರೆ ಇದೆಲ್ಲಾ ಆದಷ್ಟು ಬೇಗ ಸರಿ ಹೋಗಲಿ ಎಂದು ದರ್ಶನ್ ಕುರಿತು ನಟ ಮಾತನಾಡಿದ್ದಾರೆ.
ಅಂದಹಾಗೆ, ದರ್ಶನ್ ನಟನೆಯ ‘ನವಗ್ರಹ’ (Navagraha) ಸಿನಿಮಾದಲ್ಲಿ ಧರ್ಮ ಅವರು ಚಾಕ್‌ಲೇಟ್ ಹೀರೋ ಆಗಿ ಕಾಣಿಸಿಕೊಂಡಿದ್ದರು. ಶರ್ಮಿಳಾ ಮಾಂಡ್ರೆಗೆ ಹೀರೋ ಆಗಿ ನಟಿಸಿದ್ದರು. ಈ ಚಿತ್ರದ ಮೂಲಕ ಧರ್ಮ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.