‘ಬಿಗ್ ಬಾಸ್ ಸೀಸನ್ 7’ರ (Bigg Boss Kannada 7) ಸ್ಪರ್ಧಿ ಚಂದನಾ ಅನಂತಕೃಷ್ಣ (Chandana Ananthakrishna) ಪ್ರಸ್ತುತ ‘ಲಕ್ಷ್ಮಿ ನಿವಾಸ’ (Lakshmi Nivasa Serial) ಸೀರಿಯಲ್ ಮೂಲಕ ಮೋಡಿ ಮಾಡ್ತಿದ್ದಾರೆ. ಇದೀಗ ಕಿರುತೆರೆಯಿಂದ ಹಿರಿತೆರೆಗೆ ನಟಿ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ರೇವ್ ಪಾರ್ಟಿ ಸಂಕಷ್ಟ- ಹೇಮಾ ಕೂದಲು ಸ್ಯಾಂಪಲ್ ಟೆಸ್ಟ್‌ಗೆ ಮುಂದಾದ ಪೊಲೀಸ್ರು
ನನ್ನ ಆಸೆನೂ ಒಂದು ದಿನ ಸಮುದ್ರನೇ ಆಗಿತ್ತು, ಆದ್ರೆ ಸಮುದ್ರದ ನೀರು ಕುಡಿಯೋಕೆ ಎಲ್ಲಾಗತ್ತೆ ಹೇಳಿ!? ಎಂದು ಡೈಲಾಗ್ ಮೂಲಕ ‘ಭಾವ ತೀರ ಯಾನ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಟಿಯ ಲುಕ್ ಮತ್ತು ಸಿನಿಮಾದ ಡೈಲಾಗ್ ಪ್ರೇಕ್ಷಕರಿಗೆ ಮೆಚ್ಚುಗೆ ಆಗಿದೆ. ಇದನ್ನೂ ಓದಿ:‘ಚಿಲ್ಲಿ ಚಿಕನ್’ ಟೀಸರ್ ರಿಲೀಸ್ : ಚೈನೀಸ್ ಹೋಟೆಲ್ ಹುಡುಗರ ಸ್ಟೋರಿ
View this post on Instagram
ಮಯೂರ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ಅವರು ನಿರ್ಮಾಣ ಮಾಡುತ್ತಿರುವ ‘ಭಾವ ತೀರ ಯಾನ’ (Bhaava Theera Yaana) ಚಿತ್ರದಲ್ಲಿ ಚಂದನಾ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಧೃತಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದ್ಯ ನಟಿಯ ಮೊದಲ ಸಿನಿಮಾದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ (Bigg Boss) ಸೇರಿದಂತೆ ರಿಯಾಲಿಟಿ ಶೋನ ನಿರೂಪಕಿಯಾಗಿಯೂ ಕೂಡ ಗುರುತಿಸಿಕೊಂಡಿದ್ದರು.