ಬೆಂಗಳೂರು: ಇಲ್ಲಿನ ಸಿಂಗೇನ ಅಗ್ರಹಾರ ಬಳಿಯ ಜಿಆರ್ ಫಾರ್ಮ್‍ಹೌಸ್‍ನಲ್ಲಿ ನಡೀತಿದ್ದ ರೇವ್‍ಪಾರ್ಟಿ (Rave Party) ಇದೀಗ ತೆಲುಗು ನಟಿ ಹೇಮಾಗೆ ಸಂಕಷ್ಟ ತಂದೊಡ್ಡಿದೆ.
ತೆಲುಗು ನಟಿ ಹೇಮಾ (Telugu Actress Hema) ಪಾರ್ಟಿಯಲ್ಲಿ ಇದ್ದದ್ದು ಈಗ ಜಗಜ್ಜಾಹೀರವಾಗಿದೆ. ಈ ಕುರಿತು ಖುದ್ದು ಪೊಲೀಸ್ ಆಯುಕ್ತ ದಯಾನಂದ್, ತೆಲುಗಿನ ಖ್ಯಾತ ನಟಿ ಪಾರ್ಟಿಯಲ್ಲಿ ಇದ್ದಿದ್ದನ್ನು ಬಹಿರಂಗಗೊಳಿಸಿದ್ದಾರೆ. ಇನ್ನೂ ಪಾರ್ಟಿಯಲ್ಲಿ ಇದ್ದರೂ ಕೂಡ, ನಾನು ಹೈದ್ರಾಬಾದ್‍ನಲ್ಲಿದ್ದೇನೆ ಅಂತ ನಾಟಕವಾಡಿದ್ದ ನಟಿ ಹೇಮಾಗೆ ಈಗ ಸಂಕಷ್ಟ ಎದುಗುವ ಸಾಧ್ಯತೆ ಇದೆ.
Advertisement
Advertisement
ಸ್ಟೇಷನ್ ಬೇಲ್ ಮೇಲೆ ರಕ್ತದ ಮಾದತಿ ಕೊಟ್ಟು ಹೋಗಿರೋ ನಟಿಗೆ ಪೊಲೀಸರು ಮಾಸ್ಟರ್ ಸ್ಟ್ರೋಕ್ ಕೊಡಲು ಮುಂದಾಗಿದ್ದಾರೆ ಅನ್ನೋದು ಗೊತ್ತಾಗಿದೆ. ರೇವ್ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದ ತೆಲುಗು ನಟಿ ಹೇಮಾಗೆ ಪೊಲೀಸರು ಬ್ಲಡ್ ಸ್ಯಾಂಪಲ್ ಪಡೆದು ಕಳಿಸಿದ್ದಾರೆ. ಬ್ಲಡ್ ಸ್ಯಾಂಪಲ್ ನಲ್ಲಿ ಪಾಸಿಟಿವ್ ಬಂದರೆ ಹೇರ್ ಪಾಲಿಕಲ್ ಟೆಸ್ಟ್ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ. ಡ್ರಗ್ಸ್ ಸೇವನೆ ಮಾಡಿರೋದು ಹೇರ್ ಪಾಲಿಕಲ್ ಟೆಸ್ಟ್ ನಲ್ಲಿ ಗೊತ್ತಾಗಾಲಿದೆ. ಹಾಗಾಗಿ ಪೊಲೀಸ್ ಹೇರ್ ಪಾಲಿಕ್ ಟೆಸ್ಟ್ ಮೊರೆ ಹೋಗಲು ಮುಂದಾಗಿದ್ದಾರೆ. ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿಯಾಗಿದ್ದು ನಿಜ: ಪೊಲೀಸ್ ಕಮಿಷನರ್ ಸ್ಪಷ್ಟನೆ