ಕನ್ನಡದ ಬಿಗ್ ಬಾಸ್ (Bigg Boss Kannada) ಮೂಲಕ ಮೋಡಿ ಮಾಡಿದ್ದ ಚೆಲುವೆ ಅಕ್ಷತಾ ಕುಕಿ (Akshatha Kukki) ಅವರು ಸೋಮವಾರ (ಮಾ.27)ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವಿನಾಶ್ (Avinash) ಎಂಬುವವರ ಜೊತೆ ಅರೆಂಜ್ ಮ್ಯಾರೇಜ್ (Wedding) ಆಗಿದ್ದಾರೆ.
Advertisement
ಬಿಗ್ ಬಾಸ್ ಒಟಿಟಿಗೆ ಕಾಲಿಡುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಸ್ಪರ್ಧಿ ಅಕ್ಷತಾ ಕುಕಿ ಅವರು ಸೀರಿಯಲ್ ಮತ್ತು ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. `ಮಾರ್ಟಿನ್’ (Martin) ಚಿತ್ರದಲ್ಲಿ ಧ್ರುವ ಸರ್ಜಾ (Dhruva Sarja) ಜೊತೆ ಅಕ್ಷತಾ ಕುಕಿ ನಟಿಸಿದ್ದಾರೆ. ಇದನ್ನೂ ಓದಿ:`ಘೋಸ್ಟ್’ ಚಿತ್ರತಂಡ ಸೇರಿದ ಬಾಲಿವುಡ್ ನಟ ಅನುಪಮ್ ಖೇರ್
Advertisement
Advertisement
ಅಕ್ಷತಾ ಕುಕಿ ಅವರು ಹಸೆಮಣೆ ಏರಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ವರನ ಜೊತೆ ಎರಡು ತಿಂಗಳ ಹಿಂದೆ ಎಂಗೇಜ್ಮೆಂಟ್ ಆಗಿತ್ತು. ಅವಿನಾಶ್ ಜೊತೆ ಮಾರ್ಚ್ 27ರಂದು ಅಕ್ಷತಾ ಸಪ್ತಪದಿ ತುಳಿದಿದ್ದಾರೆ. ಬೆಳಗಾವಿಯಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ.
Advertisement
ಅಕ್ಷತಾ ಮದುವೆಯಾಗಿರುವ ವರ ಅವಿನಾಶ್, ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಕಿರುತೆರೆ ಕಲಾವಿದರು, ಸ್ನೇಹಿತರು, ಫ್ಯಾನ್ಸ್ ಶುಭಕೋರುತ್ತಿದ್ದಾರೆ.