ಸದಾ ತುಂಡುಡುಗೆ ಹಾಕಿಕೊಂಡು ಓಡಾಡುವ ಬಿಗ್ ಬಾಸ್ (Bigg Boss OTT) ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಅರೆಸ್ಟ್ ಆಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಕಾಫಿ ಕುಡಿಯಲೆಂದು ಹೋಟೆಲ್ ಗೆ ಬಂದಿದ್ದ ಉರ್ಫಿಯನ್ನು (Urfi Javed) ಮಹಿಳಾ ಪೊಲೀಸ್ ಪೇದೆಗಳು ಕರೆದುಕೊಂಡು ಹೋಗಿ ಪೊಲೀಸ್ ವ್ಯಾನ್ ನಲ್ಲಿ ಕೂರಿಸುವ ವಿಡಿಯೋ ಅದಾಗಿದ್ದು, ಪೊಲೀಸರು ಉರ್ಫಿಯನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ರೆಸ್ಟೋರೆಂಟ್ ಮುಂದೆಯೇ ಮಹಿಳಾ ಪೊಲೀಸರಿಗೆ ಉರ್ಫಿ ಪ್ರಶ್ನೆ ಮಾಡುತ್ತಾರೆ. ಯಾಕಾಗಿ ನನ್ನನ್ನು ಅರೆಸ್ಟ್ (Arrest) ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ. ಅರೆಬರೆ ಬಟ್ಟೆ ಹಾಕಿಕೊಂಡು ಹೀಗೆ ಬೀದಿಗೆ ಬರಬಹುದೆ? ಎಂದು ಪೊಲೀಸರು ಪ್ರಶ್ನೆ ಮಾಡುತ್ತಾರೆ. ಆನಂತರ ಪೊಲೀಸ್ ವ್ಯಾನ್ ನಲ್ಲಿ ಉರ್ಫಿಯನ್ನು ಕೂರಿಸಿಕೊಂಡು ಹೊರಡುತ್ತಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
Advertisement
Advertisement
ಉರ್ಫಿ ಜಾವೇದ್ ಸಾರ್ವಜನಿಕವಾಗಿ ಅಶ್ಲೀಲತೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್, ಈ ಹಿಂದೆಯಷ್ಟೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಮುಂಬೈ ಪೊಲೀಸರು ಉರ್ಫಿ ಜಾವೇದ್ ಗೆ ಸಮನ್ಸ್ ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು.
Advertisement
ಉರ್ಫಿ ಜಾವೇದ್ ಅವರು ಕೂರ ಚಿತ್ರಾ ಕಿಶೋರ್ ವಾಘ್ ಮೇಲೆ ಆರೋಪ ಮಾಡಿದ್ದರು. ಇವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಮಾನಹಾನಿ ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ವಕೀಲರ ಮೂಲಕ ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ಉರ್ಫಿ ದೂರು ನೀಡಿದ್ದಾರೆ. ಅಲ್ಲದೇ, ತಮಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ರಕ್ಷಣೆ ನೀಡುವಂತೆ ಉರ್ಫಿ ಮನವಿ ಮಾಡಿದ್ದರು.
ಉರ್ಫಿ ಜಾವೇದ್ ಮಹಿಳೆಯರ ಮಾನ ಹರಾಜು ಹಾಕುವಂತಹ ಬಟ್ಟೆಗಳನ್ನು ಹಾಕುತ್ತಾರೆ. ಅಶ್ಲೀಲ ಹಾಗೂ ಅಸಭ್ಯವಾಗಿ ನಡೆದುಕೊಡುತ್ತಾರೆ. ಇಂತಹ ನಟಿಯ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದು ಚಿತ್ರಾ ಅವರು ಕೆಲ ದಿನಗಳ ಹಿಂದೆಯಷ್ಟೇ ದೂರು ದಾಖಲಿಸಿದ್ದರು. ಅಲ್ಲದೇ, ಅಸಹ್ಯ ಎನ್ನುವಂತಹ ಬಟ್ಟೆಗಳನ್ನು ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಚಿತ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಉರ್ಫಿ ಮಹಿಳಾ ಆಯೋಗಕ್ಕೆ ಮೊರೆ ಹೋಗಿದ್ದರು. ಯಾವ ದೂರಿನಡಿ ಉರ್ಫಿ ಬಂಧನವಾಗಿದೆಯೋ ಇನ್ನಷ್ಟೇ ತಿಳಿಯಬೇಕು.
Web Stories