ಕವಿತಾ ಆರೋಪಕ್ಕೆ ತಿರುಗೇಟು ಕೊಟ್ಟ ಆ್ಯಂಡಿ

Public TV
4 Min Read
Kavitha Andya F

-ಮನೆಯಿಂದ ಹೊರ ಬಂದ್ಮೇಲೆ ಇವಾಗ ನೆನಪಾಯ್ತಾ?

ಬೆಂಗಳೂರು: ಬಿಗ್ ಬಾಸ್ ಸೀಸನ್- 6ರ ಸ್ಪರ್ಧಿ ಕವಿತಾ ಗೌಡ ಅವರು ಆ್ಯಂಡಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಆ್ಯಂಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ನಾನು ಕವಿತಾ ಅವರನ್ನು ಭೇಟಿ ಮಾಡಿಲ್ಲ, ಅವರ ಫೋನ್ ನಂಬರ್ ನನ್ನ ಬಳಿ ಇಲ್ಲ. ಇದುವರೆಗೂ ನಾನು ಅವರಿಗೆ ಮೆಸೇಜ್ ಕೂಡ ಮಾಡಿಲ್ಲ ಹಾಗೂ ಅವರ ಸಂಪರ್ಕದಲ್ಲೇ ಇಲ್ಲ. ಬೆಳಗ್ಗೆಯಿಂದ ನನಗೆ ಸುಮಾರು ಕರೆ ಬಂದಿದೆ. ಆದರೆ ನನಗೆ ಈ ವಿಷಯದ ಬಗ್ಗೆ ಏನೂ ಗೊತ್ತಿಲ್ಲ. ಅವರು ಏನೂ ದೂರು ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಆ್ಯಂಡಿ ಹೇಳಿದ್ದಾರೆ.

bigg boss andy 2

ಬಿಗ್ ಬಾಸ್ ಮನೆಯಲ್ಲೂ ಒಬ್ಬನೇ ಇದ್ದೆ. ಈಗ ಕೂಡ ಒಬ್ಬನೇ ಇದ್ದೀನಿ. ಬಿಗ್ ಬಾಸ್ ಮನೆಯಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಟಾಸ್ಕ್‍ಗಾಗಿ ನಾನು ಕವಿತಾ ಜೊತೆ ಮಾತನಾಡಲು 10 ನಿಮಿಷ ಕೇಳಿದೆ. ಇದಕ್ಕೆ ಕವಿತಾ ಅವರು ಒಪ್ಪಿಕೊಂಡು 2 ದಿನ ನಂತರ ಇಲ್ಲ ಎಂದು ಹೇಳುತ್ತಾರೆ. ಅದೇ ವಾರ ಸುದೀಪ್ ಅವರು ನನ್ನನ್ನು ಪ್ರೀತಿಸಿ ಎಂದು ಹೇಳಿದ್ದರು. ಆಗಿನಿಂದ ನಾನು ಅವರ ಜೊತೆ ಮಾತನಾಡಲು ಕಡಿಮೆ ಮಾಡಿದೆ. ನಾನು ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಕವಿತಾ ಅವರು ನನಗೆ ಫೋನ್ ಮಾಡುತ್ತೀನಿ ಎಂದು ಹೇಳಿದ್ದರು. ಮತ್ತೆ ಪ್ರಥಮ್ ಅವರು ಬಂದಾಗ ಕೂಡ ಅಣ್ಣ-ತಂಗಿ ಎಂದು ಹೇಳುತ್ತಿದ್ದರು. ಆಗ ನಾನು ಸರಿ ಅಣ್ಣ- ತಂಗಿ ಎಂದು ಸುಮ್ಮನೆ ಇದೆ.

ಕೆರಿಯರ್ ಹಾಳಾಗ್ತಿದೆ:
ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಎಲ್ಲರು ಒಂದೊಂದು ಕೆಲಸ ಮಾಡುತ್ತಾರೆ. ನಾನು ಬಿಗ್ ಬಾಸ್ ಮನೆಯಲ್ಲಿ ಎಷ್ಟೋ ಪಾಠಗಳನ್ನು ಕಲಿತ್ತಿದ್ದೇನೆ. ನಾನು ಇನ್ಮುಂದೆ ಜೀವನದಲ್ಲಿ ಹೀಗೆ ಇರಲ್ಲ, ನಾನು ಬದಲಾಗಿದ್ದೇನೆ ಎಂದು ಹೇಳಿ ಬಂದೆ. ಆದರೆ ಇವರು ಬಿಡಲ್ಲ. ನನ್ನನ್ನು ಸಾಯಿಸುತ್ತಿದ್ದಾರೆ. ಮನೆಯಿಂದ ಹೊರ ಬಂದ್ಮೇಲೆ ಕವಿತಾ ಜೊತೆ ಮಾತು ಕೂಡ ಆಡಲಿಲ್ಲ. ಕಷ್ಟಪಟ್ಟು ನಾನು ಒಂದು ಕಾರ್ಯಕ್ರಮ ಮಾಡುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲು ನನಗೆ ಕಾಲ್ ಮಾಡಿ ಈ ವಿಷಯ ತಿಳಿಸಿದ್ದರು. ನಾನು ಆ ಶೋನಲ್ಲಿ ಸರಿಯಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ನನ್ನ ಕೆರಿಯರ್ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

bigg boss andy 3

ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಕವಿತಾ ಅವರು ಫೋನ್ ಮಾಡುತ್ತೀನಿ ಎಂದು ಹೇಳಿದರು. ಆದರೆ ನಾನು ಅವರಿಗೆ ಕರೆ ಮಾಡುತ್ತೇನೆ ಎಂದು ಹೇಳಲಿಲ್ಲ. ಬಳಿಕ ಬಿಗ್ ಬಾಸ್ ಮನೆಯ ಪಾರ್ಟಿಯಲ್ಲಿ ನೀನು ಮಾಡಿದನ್ನು ನಾನು ಮರೆಯುವುದಿಲ್ಲ. ನಿನಗೆ ಮುಂದೆ ಇಟ್ಟಿದ್ದೀನಿ ಎಂದು ಹೇಳಿದ್ದರು. ಬಳಿಕ ಮತ್ತೊಮ್ಮೆ ನನಗೆ ಒಪನ್ ವಾರ್ನಿಂಗ್ ನೀಡಿದ್ದರು. ಅದಾದ ಬಳಿಕ ನಾನು ಅವರ ಜೊತೆ ಮಾತನಾಡಿಲ್ಲ. ಕವಿತಾ ಅವರು ಹಿಂದೆ ನಡೆಯುತ್ತಿರುವುದನ್ನು ಮತ್ತೆ ಈಗ ತೆಗೆದುಕೊಂಡು ಬರುತ್ತಿದ್ದಾರೆ. ಇದು ಪಬ್ಲಿಸಿಟಿ ಸ್ಟಂಟಾ? ಎಂದು ಹೇಳಬೇಕಾ ಬೇಡ್ವಾ ಎಂದು ಗೊತ್ತಾಗುತ್ತಿಲ್ಲ ಎಂದು ಆ್ಯಂಡಿ ಹೇಳಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿ ಆ್ಯಂಡಿ ವಿರುದ್ಧ ಕವಿತಾ ಗೌಡ ಮಹಿಳಾ ಆಯೋಗಕ್ಕೆ ದೂರು

ಸೋತ ಹತಾಶೆಯಲ್ಲಿ ಕವಿತಾ:
ಬಿಗ್ ಬಸ್ ಮನೆಯಲ್ಲಿ ಎಷ್ಟೋ ಕ್ಯಾಮೆರಾಗಳಿದೆ. ಅಲ್ಲಿ ಕವಿತಾ ಅವರಿಗೆ ತೊಂದರೆ ಆದಾಗ ಅವರು ಅಲ್ಲೇ ದೂರು ನೀಡಬಹುದಿತ್ತು. ಅಲ್ಲಿ ಚೆನ್ನಾಗಿ ಆಟವಾಡಿಕೊಂಡು, ಜೊತೆಯಲ್ಲಿ ಊಟ ಮಾಡಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ನಾನು ಅವರಿಗೆ ಹೆಡ್ ಮಸಾಜ್ ಮಾಡಿದೆ. ಆಗ ಅವರು ಮಾಡಿಸಿಕೊಂಡಿದ್ದರು. ಆಗ ಅವರಿಗೆ ಏಕೆ ತೊಂದರೆ ಆಗಲಿಲ್ಲ. ಆಗ ಅವರು ಏಕೆ ಏನೂ ಹೇಳಲಿಲ್ಲ. ಆಗ ಸುಮ್ಮನಿದ್ದು ಈಗ ಏಕೆ ಅವರು ದೊಡ್ಡ ಸಮಸ್ಯೆ ಮಾಡಬೇಕು. ಬಿಗ್ ಬಾಸ್ ಮನೆಯಲ್ಲಿ ಯಾರಿಗಾದರೂ ತೊಂದರೆ ಆದರೆ ಅವರು ಕ್ಯಾಮೆರಾ ಮುಂದೆ ಹೇಳುವ ಅವಕಾಶ ಇದೆ. 100 ದಿನ ಆಟವಾಡಬೇಕು ಎಂದು ಅಲ್ಲಿ ಇದ್ದು, ಬಳಿಕ ಆಟ ಗೆಲಿಲ್ಲ ಎಂದಾಗ ಹೀಗೆ ಮಾಡುವುದು ಸರಿಯಲ್ಲ.

bigg boss andy 4 1

ನಾನು ಕಿರಿಕಿರಿ ಮಾಡಿದರೆ ಅದು ಕೇವಲ ಟಾಸ್ಕ್ ಅಷ್ಟೇ. ಬಿಗ್ ಬಾಸ್ ಮನೆಯಲ್ಲಿ ಎಲ್ಲರು ಮಾಡುತ್ತಾರೆ. ಬಿಗ್ ಬಾಸ್ ಮುಗಿದ ನಂತರ ಹೊರ ಬಂದ್ಮೇಲೆ ನಾನು ಅವರಿಗೆ ಕಿರಿಕಿರಿ ಮಾಡಿಲ್ಲ. ನಾನು ಅವರ ವಿರುದ್ಧ ಪ್ರತಿ ದೂರು ನೀಡುವುದಿಲ್ಲ. ಅಲ್ಲಿ ಆಗಿರುವ ವಿಷಯಗಳಿಗೆ ನಾನು ಸುದೀಪ್ ಅವರ ಮುಂದೆಯೇ ಪಬ್ಲಿಕ್ ಅಲ್ಲಿ ಕ್ಷಮೆ ಕೇಳಿದ್ದೀನಿ. ವೇದಿಕೆ ಮೇಲೆ ನಿಂತುಕೊಂಡು ಕರ್ನಾಟಕದ ಜನತೆ ಮುಂದೆ ಸಾರಿ ಕೇಳಿದ್ದೇನೆ. ಕವಿತಾ ಮಾಡಿರುವ ಆರೋಪಗಳು ಸುಳ್ಳು. ನಾನು ಅವರ ಹಿಂದೆ ತಿರುಗಿಲ್ಲ. ಅವರಿಗೆ ತೊಂದರೆ ಆದಾಗ ಅಲ್ಲೇ ಏಕೆ ಹೇಳಲಿಲ್ಲ. 20 ದಿನದ ನಂತರ ಅವರು ನೆನಪಾಯಿತಾ ಎಂದು ಆ್ಯಂಡಿ ಪ್ರಶ್ನೆ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಸ್ವಲ್ಪ ಜನ ನನ್ನನ್ನು ದ್ವೇಷ ಮಾಡುವವರು ಇದ್ದಾರೆ, ತುಂಬಾ ಜನ ಪ್ರೀತಿ ಮಾಡುವವರು ಇದ್ದಾರೆ. ನಾನು ಈಗ ನನ್ನ ಸಿನಿಮಾಗಳಲ್ಲಿ ಅವಕಾಶ ಪಡೆದು ನನ್ನ ಕೆರಿಯರ್ ಶುರು ಮಾಡಬೇಕು ಎಂದುಕೊಂಡೆ. ಆದರೆ ಅವರು ಇವನನ್ನು ಬೆಳೆಯಲು ಬಿಡಬಾರದು ತುಳಿದು ಸಾಯಿಸಬೇಕು ಎಂದುಕೊಂಡಿದ್ದಾರೋ ಎನೋ ಗೊತ್ತಿಲ್ಲ. ನಾನು ಕವಿತಾ ಅವರ ಮೇಲೆ ದೂರು ನೀಡುವುದಿಲ್ಲ. ಅಲ್ಲಿ ಏನೇ ನಡೆದಿದ್ದರು, ಕೇವಲ ಟಾಸ್ಕ್ ಅಷ್ಟೇ. ಕವಿತಾ ಅವರು ಫೈನಲ್‍ನಲ್ಲಿ ವಿನ್ ಆಗಿಲ್ಲ ಎಂದು ಅವರ ತಾಯಿ ಮೈಕ್ ತೆಗೆದುಕೊಂಡು ಮಾತಾಡಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *