ಬೆಂಗಳೂರು: ಬಿಗ್ ಬಾಸ್ ಸೀಸನ್-3 ಖ್ಯಾತಿಯ ಕ್ರಿಕೆಟರ್ ಎನ್.ಸಿ ಅಯ್ಯಪ್ಪ ಕನ್ನಡದ ನಟಿ ಅನು ಮಾಳೇಟಿರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದ್ದು, ಮುಂದಿನ ವರ್ಷ ಕೊಡಗಿನ ವಿರಾಜಪೇಟೆಯಲ್ಲಿ ಅಯ್ಯಪ್ಪ ಹಾಗೂ ಅನು ಮದುವೆಯಾಗಲಿದ್ದಾರೆ.
ನಿಶ್ಚಿತಾರ್ಥ ಸಮಾರಂಭದಲ್ಲಿ ಇಬ್ಬರ ಕುಟುಂಬದ ಗುರು-ಹಿರಿಯರು ಭಾಗಿಯಾಗಿದ್ದರು. ಅಯ್ಯಪ್ಪ ಹಾಗೂ ಅನು ಮಾಳೇಟಿರ ಗುರು-ಹಿರಿಯರ ಹಾಗೂ ಬಂಧುಗಳ ನಡುವೆ ತಮ್ಮ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ.
ಅನು ಮಾಳೇಟಿರ ಕನ್ನಡದ ಕರ್ವ, ಕಥಾವಿಚಿತ್ರ, ಲೈಫ್ ಸೂಪರ್, ಪಾನಿಪೂರಿ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಈಗ ಅವರು ಖಾಸಗಿ ವಾಹಿನಿಯ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.
ನಿಶ್ಚಿತಾರ್ಥದಲ್ಲಿ ಅಯ್ಯಪ್ಪ ಬೂದಿ ಬಣ್ಣದ ಸೂಟ್ ಧರಿಸಿ ಮಿಂಚಿದ್ದರೆ, ಅನು ಮಾಳೇಟಿರ ಹಸಿರು ಕೊಡವ ರೀತಿಯ ಸೀರೆಯುಟ್ಟು ಮಿಂಚಿದ್ದಾರೆ. ಸದ್ಯ ಎನ್.ಸಿ ಅಯ್ಯಪ್ಪ ಅವರು ಕನ್ನಡದ ಹೆಸರಾಂತ ನಟಿ ಪ್ರೇಮ ಅವರ ಸಹೋದರನಾಗಿದ್ದು, ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕನ್ನಡ ಜನತೆಗೆ ಪರಿಚಯರಾದರು.