ಮಂಗಳೂರು: ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಕಡಲನಗರಿ ಮಂಗಳೂರಿನ ಬೀಚ್ ನಲ್ಲಿ ಜಾಲಿ ಮೂಡ್ ನಲ್ಲಿದ್ದಾರೆ.
ಮಂಗಳವಾರ ತಾನು ಕಲಿತ ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿದ್ದ ಚಂದನ್ ಇಂದು ಬೆಳ್ಳಂಬೆಳಗ್ಗೆಯೇ ಮಂಗಳೂರಿನ ಸಮುದ್ರದಲ್ಲಿ ಎಂಜಾಯ್ ಮಾಡಿದ್ದಾರೆ.
Advertisement
Advertisement
ಮಂಗಳೂರಿನ ಪಣಂಬೂರ್ ಬೀಚ್‍ನಲ್ಲಿ ಚಂದನ್ ತನ್ನ ಸ್ನೇಹಿತರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಸಮುದ್ರದ ಮಧ್ಯೆ ತಮ್ಮ ಗೆಳೆಯ ಪುನಿ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಬೋಟಿಂಗ್, ಸ್ಪೀಡ್ ಬೈಕ್ ರೈಡ್ ಮಾಡಿ ಸಖತ್ ಖುಷಿ ಪಟ್ಟಿದ್ದಾರೆ.
Advertisement
ಸಮುದ್ರದ ಮಧ್ಯದಲ್ಲೇ ಚಂದನ್ ಫೇಸ್‍ಬುಕ್ ಲೈವ್ ಮಾಡಿ ತಮ್ಮ ಗೆಳೆಯನಿಗೆ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಫೇಸ್‍ಬುಕ್ ಲೈವ್ ನೋಡಿ ಅಭಿಮಾನಿಗಳು ಬೀಚ್ ನಲ್ಲಿರುವ ಚಂದನ್ ಅವರನ್ನು ನೋಡಲು ಮುಗಿಬಿದ್ದರು. ಅಷ್ಟೇ ಅಲ್ಲದೇ ಚಂದನ್ ಜೊತೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ.