ಕಾಲಿವುಡ್‌ನ ‘ಕಬಾಲಿ’ (Kabali) ಸಿನಿಮಾದ ನಿರ್ಮಾಪಕ ಕೆ.ಪಿ ಚೌಧರಿ (Kp Chowdary) ಅವರು ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ವಿಚಾರಣೆ ಸಂದರ್ಭದಲ್ಲಿ ಅನೇಕರ ಹೆಸರನ್ನ ನಿರ್ಮಾಪಕ ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಅಶು ರೆಡ್ಡಿ (Ashu Reddy) ಅವರ ಹೆಸರು ಕೇಳಿ ಬರುತ್ತಿದೆ.
ನಟಿ ಅಶು ರೆಡ್ಡಿ ಈಗ ಸುದ್ದಿಯಲ್ಲಿದ್ದಾರೆ. ಇಷ್ಟು ದಿನ ಗ್ಲ್ಯಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್ ಮೂಲಕ ಸುದ್ದಿ ಆಗಿದ್ದಾರೆ. ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ನಿರ್ಮಾಪಕ ಕೆಪಿ ಚೌಧರಿ ಅವರು ಡ್ರಗ್ (Drugs) ಕೇಸ್‌ನಲ್ಲಿ ಅಂದರ್ ಆಗಿದ್ದಾರೆ. ಅಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಡ್ರಗ್ ಮಾರಾಟ ಮಾಡುವ ವ್ಯಕ್ತಿಯ ಜೊತೆ ಇಷ್ಟೊಂದು ದೂರವಾಣಿ ಕರೆ ಏಕೆ ಎನ್ನುವ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.
ಅಶು ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತೆಲುಗಿನ ಬಿಗ್ ಬಾಸ್‌ನಲ್ಲಿ (Bigg Boss Telagu) ಗಮನ ಸೆಳೆದ ಅಶು ರೆಡ್ಡಿಗೆ ಟಿವಿ ಶೋ ಮೂಲಕ ಜನಪ್ರಿಯತೆ ಪಡೆದರು. ಈಗ ಅವರ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದೆ. ಕಬಾಲಿ ನಿರ್ಮಾಪಕ ಅವರು ನೇರವಾಗಿ ಅಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಇವರ ಮಧ್ಯೆ ಲಿಂಕ್ ಇರೋದು ವಿಚಾರಣೆ ವೇಳೆ ಗೊತ್ತಾಗಿದೆ. ಅವರ ಬಳಿ ಇದ್ದ ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಪಿ ಚೌಧರಿ ಅವರ ಒಂದು ಮೊಬೈಲ್‌ನಿಂದ ಅಶು ರೆಡ್ಡಿಗೆ ನೂರಾರು ಬಾರಿ ಫೋನ್ ಕಾಲ್ ಹೋಗಿದೆ. ಇದು ಏಕೆ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ:ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಸೀಕ್ರೆಟ್ ಡೇಟಿಂಗ್‌ಗೆ ಸಿಕ್ತು ಸಾಕ್ಷಿ
ಈ ಬಗ್ಗೆ ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ತನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪೋಸ್ಟ್ ಶೇರ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಇದು ಸ್ಪಷ್ಟತೆ ಎಂದು ಅಶು ರೆಡ್ಡಿ ಹೇಳಿದ್ದಾರೆ.