ಬಿಗ್ ಬಾಸ್ (Bigg Boss) ಸೀಸನ್ 9ಕ್ಕೆ ಆರ್ಯವರ್ಧನ್ ಗುರೂಜಿ (Aryavardhan) ಕಾಲಿಟ್ಟಿದ್ದರು. ಟಾಸ್ಕ್, ಮನರಂಜನೆ, ಅಡುಗೆ ಅಂತಾ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದರು. ಆದರೆ ಫಿನಾಲೆ ಅಂತಿಮ ಘಟ್ಟದಲ್ಲಿರುವಾಗ ಮಿಡ್ ನೈಟ್ ಎಲಿಮಿನೇಟ್ ಆಗಿ ಹೊರಬಂದರು. ಈಗ ದೊಡ್ಮನೆಗೆ ಎಂಟ್ರಿ ಕೊಡಲು ಸುದೀಪ್ ಸರ್ ಸಂಭಾವನೆ (Kiccha Sudeep) ಲೆವೆಲ್‌ಗೆ ಪೇಮೆಂಟ್ ಮಾತನಾಡಿದ್ದೆ ಎಂದು ಆರ್ಯವರ್ಧನ್ ಗುರೂಜಿ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

ಕಳೆದ 8 ಸೀಸನ್‌ನಿಂದ ನನಗೆ ಬಿಗ್ ಬಾಸ್ ತಂಡದಿಂದ ಆಫರ್ ಬರುತ್ತಿತ್ತು. ಆದರೆ ಎಲ್ಲಿ ಈ ಶೋಗೆ ಹೋದರೆ ನನ್ನ ವೃತ್ತಿ ಜೀವನಕ್ಕೆ ಹೊಡೆತ ಬೀಳುತ್ತೆ ಎಂದು ಹೆದರಿ ಹೋಗಿರಲಿಲ್ಲ. ಆದರೆ ಈ ಬಾರಿ ವಾಹಿನಿ ಮುಖ್ಯಸ್ಥ ಪರವೇಶ್ವರ್ ಗುಂಡ್ಕಲ್ ಮಾತಿಗೆ ಬೆಲೆ ಕೊಟ್ಟು ಹೋಗಿದ್ದೆ. ಇನ್ನೂ ಬಿಗ್ ಬಾಸ್ ಮನೆಗೆ ಬರಲು ಸುದೀಪ್ ಸರ್ ಸಂಭಾವನೆ ಲೆವೆಲ್‌ಗೆ ಪೇಮೆಂಟ್ ಡಿಮ್ಯಾಂಡ್ ಮಾಡಿದ್ದೆ. ಬಿಗ್ ಬಾಸ್ ಟೀಮ್ ಈ ಬಗ್ಗೆ ಗಾಬರಿಯಾಗಿದ್ದರು. ಕೊನೆಗೆ ಎಲ್ಲರಿಗಿಂತ ಕಮ್ಮಿ ಪೇಮೆಂಟ್‌ಗೆ ಒಪ್ಪಿಕೊಂಡು ಹೋದೆ ಎಂದು ಗುರೂಜಿ ಹೇಳಿದ್ದಾರೆ.
ಇನ್ನೂ ಈ ಬಾರಿ ಬಿಗ್ ಬಾಸ್ ಪಟ್ಟವನ್ನ ನನ್ನ ಮಗ ರೂಪೇಶ್ ಶೆಟ್ಟಿ ಗೆಲ್ಲಬೇಕು ಎಂದು ಆಶಿಸುತ್ತೇನೆ. ಅವರೇ ಗೆಲ್ಲುತ್ತಾರೆ ಎಂದು ಆರ್ಯವರ್ಧನ್ ಗುರೂಜಿ ಮಾತನಾಡಿದ್ದಾರೆ.


