ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

Public TV
1 Min Read
lokesh rakesh poojari

ರಾಕೇಶ್ ಪೂಜಾರಿ (Lokesh Poojari) ಸಾವಿನ ಸುದ್ದಿ ಈಗಲೂ ಅರಗಿಸಿಕೊಳ್ಳೋಕೆ ಆಗ್ತಿಲ್ಲ ಎಂದು ‘ಬಿಗ್ ಬಾಸ್’ ಖ್ಯಾತಿಯ ಲೋಕೇಶ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ನಟಿಗೆ ಬಿಗ್ ಚಾನ್ಸ್- ಉಪೇಂದ್ರಗೆ ಅಂಕಿತಾ ಅಮರ್ ನಾಯಕಿ

Rakesh Poojari 2

ಗೆಳೆಯನ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿ, ನನಗೆ ಅವರ ಸಾವಿನ ಬಗ್ಗೆ ಬೆಳಗ್ಗೆ 4 ಗಂಟೆಗೆ ನಟಿ ದಿವ್ಯಾಶ್ರೀ ಕಡೆಯಿಂದ ತಿಳಿಯಿತು. ದಿವ್ಯಾ ಮತ್ತು ರಾಕೇಶ್ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅವರು ಫೋನ್ ಮಾಡಿ ಹೇಳಿದಾಗ ನನಗೆ ನಂಬೋಕೆ ಆಗಲಿಲ್ಲ. ‘ಕಾಮಿಡಿ ಕಿಲಾಡಿಗಳು’ ಚಾಂಪಿಯನ್‌ಶಿಪ್‌ನಲ್ಲಿ ನಾವು ಒಟ್ಟಿಗೆ ಕೆಲಸ ಮಾಡಿದ್ವಿ. ಅವರು ಅದ್ಭುತವಾಗಿ ನಟಿಸುತ್ತಿದ್ದರು. ಈಗ ಅವರ ಸಾವಿನ ಸುದ್ದಿ ಕೇಳಿ ಆಶ್ವರ್ಯ ಆಯ್ತು, ನನಗೆ ನಂಬಲು ಆಗ್ತಿಲ್ಲ. ಈಗಲೂ ಇದನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ:ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

lokeshಅವರಿಗಿನ್ನು ಚಿಕ್ಕ ವಯಸ್ಸು, ಚಿತ್ರರಂಗದಲ್ಲಿ ಬೆಳೆಯೋದಿತ್ತು, ಹೀಗೆ ಆಗಿದ್ದು ನ್ಯಾಯನಾ ಅನಿಸುತ್ತದೆ. ‘ಕಾಮಿಡಿ ಕಿಲಾಡಿಗಳು’ ಟೀಮ್ ಅವರ ಊರಿನ ಕಡೆ ಹೊರಟಿದೆ. ಇತ್ತೀಚೆಗೆ ನಾವು ಭೇಟಿಯಾಗಿರಲಿಲ್ಲ. ಆದರೆ ಸಮಯ ಸಿಕ್ಕಾಗ ಫೋನ್‌ನಲ್ಲಿ ಮಾತನಾಡುತ್ತಿದ್ದೇವು. ನಾನು ರಾಕಿ ಅಂತ ಕರೆದ್ರೆ ಅಣ್ಣ ಎಂದು ಬಂದು ತಬ್ಬಿಕೊಳ್ತಿದ್ದರು. ಈಗ ಅವರ ಸಾವಿನ ಸುದ್ದಿ ಕೇಳಿದ್ರೆ ಹೊಟ್ಟೆ ಉರಿಯುತ್ತದೆ ಅಂತ ಕಣ್ಣೀರಿಟ್ಟರು.

Rakesh Poojari‘ಕಾಂತಾರ ಚಾಪ್ಟರ್ 1’ರಲ್ಲಿ ಕೆಲಸ ಮಾಡುತ್ತಿದ್ದ ವಿಷಯ ಗೊತ್ತಿತ್ತು. ಬೆಳೆಯುವ ಟೈಮ್‌ನಲ್ಲಿ ಒಂದೊಳ್ಳೆಯ ಬ್ಯಾನರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಹೀಗೆ ಆಯ್ತಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಕೇಶ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಸಮಾಧಾನ ಸಿಗಲಿ ಎಂದು ಮಾತನಾಡಿದ್ದಾರೆ.

ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಸಂಜೆ ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

Share This Article