ಬಿಗ್ ಬಾಸ್ ಓಟಿಟಿ ಸದ್ಯ ಸಿನಿಪ್ರೇಕ್ಷಕರ ನೆಚ್ಚಿನ ಶೋ ಆಗಿ ಹೊರಹೊಮ್ಮಿದೆ. ಸದಾ ಒಂದಲ್ಲಾ ಒಂದು ವಿಚಾರವಾಗಿ ದೊಡ್ಮನೆ ಸಖತ್ ಸೌಂಡ್ ಮಾಡುತ್ತಿದೆ. ಸೋನು, ಟಾಸ್ಕ್ ಮಾಡುವಾಗ ಅಕ್ಷತಾ ಜತೆ ರಾಕೇಶ್ ಸಲಿಗೆಯಿಂದ ನಡೆದುಕೊಂಡಿದ್ದಾರೆ. ಬಳಿಕ ಸೋನು ರಾಕಿ ಮೇಲೆ ಹುಸಿ ಕೋಪ ತೋರಿದ್ದಾರೆ.
Advertisement
ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ರಂಗು ಜೋರಾಗಿದೆ. ಮನೆಯ ಕ್ಯಾಪ್ಟನ್ ಶಿಪ್ಗೆ ಸ್ಪರ್ಧಿಗಳ ನಡುವೆ ಜಟಾಪಟಿ ನಡೆದಿದೆ. ಜಶ್ವಂತ್ ನಂತರ ವಾರದ ಕ್ಯಾಪ್ಟನ್ ಆಗಲು ಬಿಗ್ ಬಾಸ್ ನಯಾ ಟಾಸ್ಕ್ ನೀಡಿದ್ದರು. ತಿರುಗುವ ಕುರ್ಚಿಯ ಮೇಲೆ 15 ನಿಮಿಷ ಕುಳಿತುಕೊಳ್ಳಬೇಕು. ಯಾರು ಹೆಚ್ಚು ಸಮಯ ಕುರುವರೋ ಅವರೇ ವಿಜೇತರು. ಸೋನು ಕೂಡ ಈ ಟಾಸ್ಕ್ನಲ್ಲಿ ಭಾಗವಹಿಸಿದ್ದು, ಸ್ಪರ್ಧಿ ಕುಳಿತಿರುವಾಗ ಇತರೇ ಅವರನ್ನು ಟಾಸ್ಕ್ ಕಂಪ್ಲೀಟ್ ಮಾಡದಂತೆ ತಡೆಯಬಹುದು. ಇದನ್ನೂ ಓದಿ:ಜಯಶ್ರೀಗೆ ಎರಡು ಮದುವೆ ಆಗ್ತವೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ
Advertisement
Advertisement
ಈ ವೇಳೆ ಸೋನು ಗೌಡ ಮುಂದೆ, ಅಕ್ಷತಾ ಜೊತೆ ರಾಕೇಶ್ ಅಡಿಗ ಬಹಳ ಸಲುಗೆಯಿಂದ ನಡೆದುಕೊಂಡಿದ್ದಾರೆ. ಅವರ ರೊಮ್ಯಾಂಟಿಕ್ ಮಾತಿನಿಂದ ಸೋನು ಎದ್ದು ಬರಲಿ ಎಂಬುದು ರಾಕೇಶ್ ಅಕ್ಷತಾ ಯೋಚಿಸಿದ್ದರು. ಅದರಂತೆ ಸೋನು ಮುಂದೆ ರಾಕೇಶ್ ಮತ್ತು ಅಕ್ಷತಾ ಬಹಳ ಸಲಿಗೆಯಿಂದ ನಡೆದುಕೊಂಡಿದ್ದರು. ಈ ಟಾಸ್ಕ್ ಅನ್ನು ಸೋನು ಯಶಸ್ವಿಯಾಗಿ ಮುಗಿಸಿದ್ದಾರೆ. ನಂತರ ಉದಯ್ ಸೂರ್ಯ ಬಳಿ ವಿಚಾರಿಸಿದ್ದಾರೆ. ಅಕ್ಷತಾ ಮತ್ತು ರಾಕೇಶ್ ಎನು ಮಾಡ್ತಿದ್ದರು ಎಂದು ಉದಯ್ ಬಳಿ ಚರ್ಚಿಸಿದ್ದಾರೆ. ಈ ಮೂಲಕ ಸೋನು, ರಾಕೇಶ್ ಮೇಲೆ ಹುಸಿ ಕೋಪ ತೋರಿದ್ದಾರೆ.