CinemaDistrictsKarnatakaLatestMain PostSandalwood

ಸೆ.25ರಿಂದ ಬರಲಿದೆ ಬಿಗ್ ಬಾಸ್ 9ನೇ ಸೀಸನ್

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಓಟಿಟಿ(Bigg Boss Ott) ಮೊದಲ ಸೀಸನ್ ಇದೀಗ ಮುಕ್ತಾಯದ ಹಂತದಲ್ಲಿದೆ. ಕಿರುತೆರೆಯಲ್ಲಿ ಬಿಗ್ ಬಾಸ್ 9ನೇ ಸೀಸನ್ ಶುರುವಾಗಲು ಕೌಂಟ್ ಡೌನ್ ಶುರುವಾಗಿದೆ. ಓಟಿಟಿ ಸೀಸನ್ ಮುಗಿದ ಬಳಿಕ ಒಂದೇ ವಾರಕ್ಕೆ ಬಿಗ್ ಬಾಸ್ 9ನೇ (Bigg Boss 9) ಸೀಸನ್ ಪ್ರಸಾರವಾಗಲಿದೆ.

ಓಟಿಟಿಯಲ್ಲಿ ಬಿಗ್ ಬಾಸ್ ಶೋ ಸಂಚಲನ ಮೂಡಿಸುತ್ತಿದೆ. ಬೇರೆ ಬೇರೆ ಕ್ಷೇತ್ರದಿಂದ ಸ್ಪರ್ಧಿಗಳ ಆಯ್ಕೆ ನಡೆದಿದೆ. ಸೋನು ಶ್ರೀನಿವಾಸ್ ಗೌಡ, ಸಾನ್ಯ ಅಯ್ಯರ್, ರೂಪೇಶ್ ಶೆಟ್ಟಿ, ಸೋಮಣ್ಣ, ಆರ್ಯವರ್ಧನ್, ಜಶ್ವಂತ್, ನಂದು, ಜಯಶ್ರೀ ಓಟಿಟಿ ಮೂಲಕ ಗಮನ ಸೆಳೆದಿದ್ದಾರೆ. ಈ ಪೈಕಿ ಕೆಲವರು ಬಿಗ್ ಬಾಸ್ ಹೊಸ ಸೀಸನ್‌ನಲ್ಲಿ ಭಾಗವಹಿಸಿಲಿದ್ದಾರೆ. ಸೆಪ್ಟೆಂಬರ್ 25ಕ್ಕೆ ಬಿಗ್ ಬಾಸ್ 9ನೇ ಸೀಸನ್ ಪ್ರಸಾರವಾಗಲಿದೆ. ಇದನ್ನೂ ಓದಿ:ಆಲಿಯಾ ಭಟ್ ಬೇಬಿ ಶವರ್ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್

ಇದುವೆರೆಗೂ ನಡೆದ 8 ಸಿಸನ್‌ಗಳ ಪ್ರಮುಖ ಸ್ಪರ್ಧಿಗಳ ಜೊತೆಗೆ ಹೊಸ ಸ್ಪರ್ಧಿಗಳಿದ್ದಾರೆ. ಬಿಗ್ ಬಾಸ್ ಓಟಿಟಿಯ ಕೆಲವು ಸ್ಪರ್ಧಿಗಳು ಕೂಡ ಬಿಗ್ ಬಾಸ್ 9ನೇ ಸೀಸನ್‌ನಲ್ಲಿದ್ದಾರೆ. ಈ ಹೊಸ ಸೀಸನ್‌ನಲ್ಲಿ ಹೊಸಬರು ಹಳಬರು ಸಮಾಗಮವಾಗಲಿದೆ. ಇದು ಈ ಸೀಸನ್‌ನ ವಿಶೇಷತೆ ಆಗಿದೆ.

ಹೊಸ ಸೀಸನ್‌ಗೆ ಸ್ಪರ್ಧಿಗಳ ಆಯ್ಕೆಯ ಪ್ರಕ್ರಿಯೆ ನಡೆಯಲಿದೆ. ಯಾರೆಲ್ಲಾ ಸ್ಟಾರ್ಸ್‌ ಬಿಗ್ ಬಾಸ್‌ನಲ್ಲಿ ಭಾಗವಹಿಸಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

Live Tv

Leave a Reply

Your email address will not be published.

Back to top button