BollywoodCinemaLatestMain Post

ಆಲಿಯಾ ಭಟ್ ಬೇಬಿ ಶವರ್ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್

ಬಾಲಿವುಡ್ ಬ್ಯೂಟಿ ಆಲಿಯಾ ಭಟ್ (Alia Bhatt) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಡಬಲ್ ಸಂಭ್ರಮದ ಖುಷಿಯಲ್ಲಿದ್ದಾರೆ. `ಬ್ರಹ್ಮಾಸ್ತ್ರʼ (Brahmastra) ಸಕ್ಸಸ್ ಬೆನ್ನಲ್ಲೇ ಆಲಿಯಾ ಭಟ್‌ಗೆ ಬೇಬಿ ಶವರ್ ಕಾರ್ಯಕ್ರಮ ಮಾಡಲು ಡೇಟ್ ಫಿಕ್ಸ್ ಆಗಿದೆ.

ಬಾಯ್ಕಾಟ್ ಟ್ರೆಂಡ್ ನಡುವೆ ರಣ್‌ಬೀರ್ ಮತ್ತು ಆಲಿಯಾ ನಟನೆಯ `ಬ್ರಹ್ಮಾಸ್ತ್ರʼ (Bhrahmastra) ‌ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಮತ್ತೊಂದೆಡೆ ನಟಿಗೆ ಬೇಬಿ ಶವರ್ ಕಾರ್ಯಕ್ರಮ ಮಾಡಲು ತೆರೆ ಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.

 

View this post on Instagram

 

A post shared by Alia Bhatt 🤍☀️ (@aliaabhatt)

ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದರು. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಬೇಬಿ ಶವರ್ ಈವೆಂಟ್ ಮಾಡಲು ಕಪೂರ್‌ ಕುಟುಂಬ ನಿರ್ಧರಿಸಿದೆ. ಇದನ್ನೂ ಓದಿ:‘ಮದುವೆ’ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆದ ಮಹಾಲಕ್ಷ್ಮಿ ರವೀಂದರ್

ಈ ಕಾರ್ಯಕ್ರಮದಲ್ಲಿ ಕಪೂರ್ ಕುಟುಂಬದ ಜತೆ, ಆಲಿಯಾ ಅವರ ಬಾಲ್ಯದ ಸ್ನೇಹಿತರು ಮತ್ತು ಚಿತ್ರರಂಗದ ಕೆಲ ನಟಿಮಣಿಯರು ಭಾಗವಹಿಸಲಿದ್ದಾರೆ.

Live Tv

Back to top button