ಬೆಂಗಳೂರು: ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿ ಆಂಡ್ರ್ಯೂ ಅಲಿಯಾಸ್ ಆ್ಯಂಡಿ ವಿನಾಕಾರಣ ಇಬ್ಬರ ತಲೆ ಮೇಲೆ ಮೊಟ್ಟೆ ಹೊಡೆದಿದ್ದು, ಪರಿಣಾಮ ಸ್ಪರ್ಧಿಗಳಾದ ಜಯಶ್ರೀ ಮತ್ತು ಸೋನು ಪಾಟೀಲ್ ಕಣ್ಣೀರು ಹಾಕಿದ್ದಾರೆ.
ಬಿಗ್ ಬಾಸ್ ಶುರುವಾದಗಿಂದಲೂ ಒಂದಲ್ಲ ಒಂದು ರೀತಿ ಆ್ಯಂಡಿ ಎಲ್ಲರಿಗೂ ಕಿತಾಪತಿ ಮಾಡುತ್ತಿದ್ದಾರೆ. ಜಯಶ್ರೀ ಮತ್ತು ಸೋನು ಪಾಟೀಲ್ ಸಸ್ಯಹಾರಿಗಳು. ಈ ಬಗ್ಗೆ ಆ್ಯಂಡಿಗೆ ತಿಳಿದಿದ್ದರೂ ಅವರನ್ನೇ ಟಾರ್ಗೆಟ್ ಮಾಡಿ ಮೊಟ್ಟೆ ಹೊಡೆದಿದ್ದಾರೆ. ಇದರಿಂದ ಜಯಶ್ರೀ ಮತ್ತು ಸೋನು ಅವರಿಗೆ ಬೇಸರವಾಗಿದ್ದು, ಗಳಗಳನೇ ಅತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆ್ಯಂಡಿ ಮನೆಯಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Advertisement
Advertisement
‘ಮಗು ಆಗೋಣ ಬಾ’ ಟಾಸ್ಕ್
ಬಿಗ್ ಬಾಸ್ ಮನೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪರ್ಧಿಗಳಿಗೆ ‘ಮಗು ಆಗೋಣ ಬಾ’ ಟಾಸ್ಕ್ ಕೊಟ್ಟಿತ್ತು. ಅಂದರೆ ಮತ್ತೆ ಮಕ್ಕಳಾಗುವ ಅವಕಾಶವನ್ನ ಕೊಟ್ಟಿತ್ತು. ಇದರ ಪ್ರಕಾರ ಪ್ರತಿ ಬಾರಿ ಟಿವಿ ಪರದೆ ಮೇಲೆ ಯಾರ ಭಾವಚಿತ್ರ ಬರುತ್ತದೋ, ಅವರು ಮಗುವಿನ ಹಾಗೆ ವರ್ತಿಸಬೇಕು. ಉಳಿದ ಸ್ಪರ್ಧಿಗಳು ಮಗುವಿನ ಲಾಲನೆ-ಪಾಲನೆ ಮಾಡಬೇಕಿತ್ತು. ಈ ಟಾಸ್ಕ್ ನಲ್ಲಿ ಆಂಡ್ರ್ಯೂ ಮತ್ತು ಆಡಮ್ ಪಾಶಾ ಅವಳ-ಜವಳಿ ಮಕ್ಕಳ ಪಾತ್ರ ನಿಭಾಯಿಸಬೇಕಿತ್ತು.
Advertisement
ಈ ವೇಳೆ ಆ್ಯಂಡಿ ನಾನು ಜೀವನದಲ್ಲಿ ತರ್ಲೆ ಮಾಡಲ್ಲ. ನನಗೆ ಇಬ್ಬರೂ ತುಂಬಾ ಇಷ್ಟ ಎಂದು ಹೇಳುತ್ತಾ ತನ್ನ ಜೇಬಿನಲ್ಲಿ ಇದ್ದ ಮೊಟ್ಟೆಗಳನ್ನ ತೆಗೆದುಕೊಂಡು ಸೋನು ಪಾಟೀಲ್ ಮತ್ತು ಜಯಶ್ರೀ ತಲೆ ಮೇಲೆ ಹೊಡೆದಿದ್ದಾರೆ. ಆದರೆ ಜಯಶ್ರೀ ಮತ್ತು ಸೋನು ಪಾಟೀಲ್ ಮೊಟ್ಟೆ ತಿನ್ನಲ್ಲ ಅಂತ ಆಂಡ್ರ್ಯೂಗೆ ಮೊದಲೇ ತಿಳಿದಿತ್ತು. ಆದರೂ ಅವರಿಗೆ ಮೊಟ್ಟೆ ಹೊಡೆದಿದ್ದಾರೆ.
Advertisement
ಮೊಟ್ಟೆ ಹೊಡೆದಿದ್ದರಿಂದ ತಮ್ಮ ಭಾವನೆಗಳಿಗೆ ಧಕ್ಕೆ ಆದ ಪರಿಣಾಮ, ಜಯಶ್ರೀ ಮತ್ತು ಸೋನು ಪಾಟೀಲ್ ಕಣ್ಣೀರು ಹಾಕಿದ್ದಾರೆ. ತಮ್ಮ ತಾಯಿ ಜೊತೆಗೂ ಆಂಡ್ರ್ಯೂ ಇದೇ ರೀತಿ ನಡೆದುಕೊಳ್ಳುತ್ತಾರಾ ಅಂತ ಜಯಶ್ರೀ ಅಳುತ್ತಾ ಪ್ರಶ್ನಿಸಿದ್ದಾರೆ.
ಟಾಸ್ಕ್ ನಲ್ಲಿ ಮೊಟ್ಟೆ ಹೊಡೆಯಲು ಬಿಗ್ ಬಾಸ್ ಮೊನ್ನೆ ಹೇಳಿದ್ದರು. ಅದು ಅವಮಾನನಾ? ಸಸ್ಯಹಾರಿಗೆ ಮೊಟ್ಟೆ ಹೊಡೆಯಬೇಕಿತ್ತು ಅಂತ ನೀವೆಲ್ಲ ಹೇಳಿದ್ದೀರಿ. ಅದಕ್ಕೆ ಮಾಡಿದೆ, ಆದರೆ ಈಗ ಫನ್ ಆಗಿ ಮಾಡಿದ್ದನ್ನ, ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂದು ಆಂಡ್ರ್ಯೂ ತಮ್ಮ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ. ಬಳಿಕ ಸೋನು ಪಾಟೀಲ್ ಮತ್ತು ಜಯಶ್ರೀಗೆ ನೇರವಾಗಿ ಕ್ಷಮೆ ಕೇಳುವ ಬದಲು ಲಿಖಿತ ರೂಪದಲ್ಲಿ ಬರೆದು ಕ್ಷಮೆ ಕೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews