‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ತೆರೆಬಿದ್ದಿದೆ. ಹನುಮಂತ (Hanumantha) ವಿನ್ನರ್ ಆಗಿದ್ದು, ತ್ರಿವಿಕ್ರಮ್ ರನ್ನರ್ ಅಪ್ ಆಗಿ ಗೆದ್ದು ಬೀಗಿದ್ದಾರೆ. 5ನೇ ರನ್ನರ್ ಅಪ್ ಆಗಿರುವ ಭವ್ಯಾ ಅವರು ತ್ರಿವಿಕ್ರಮ್ (Trivikram) ಜೊತೆಗಿನ ಬಾಂಡಿಂಗ್ ಬಗ್ಗೆ ಮಾತನಾಡಿದ್ದಾರೆ. ತ್ರಿವಿಕ್ರಮ್ ಕಡೆಯಿಂದ ಮದುವೆ ಪ್ರಪೋಸಲ್ ಬಂದ್ರೆ ಭವ್ಯಾ (Bhavya Gowda) ಉತ್ತರ ಏನಾಗಿರುತ್ತದೆ ಎಂದು ನಟಿ ರಿಯಾಕ್ಟ್ ಮಾಡಿದ್ದಾರೆ.
ಅವರ ಕಡೆಯಿಂದ ಮದುವೆ ಪ್ರಪೋಸಲ್ ಬರಲ್ಲ ಅಂತ ನನಗೂ ಗೊತ್ತು. ನನ್ನ ಕಡೆಯಿಂದಲೂ ಬರಲ್ಲ ಅನ್ನೋದು ತ್ರಿವಿಕ್ರಮ್‌ಗೆ ಗೊತ್ತು. ಇಬ್ಬರೂ ಲೈನ್ ಹಾಕಿಕೊಂಡು ಇದ್ದೀವಿ, ನನಗೂ ಮತ್ತು ತ್ರಿವಿಕ್ರಮ್‌ಗೂ ಈ ರೀತಿಯ ಆಲೋಚನೆ ಇರಲಿಲ್ಲ. ನಮ್ಮೀಬ್ಬರ ನಡುವೆ ಇಬ್ಬರಿಗೂ ಒಳ್ಳೆಯ ಬಾಂಡಿಂಗ್ ಹಾಗೂ ಫ್ರೆಂಡ್ಶಿಪ್ ಇದೆ. ಇದನ್ನೂ ಓದಿ:ಸುದೀಪ್ ಸರ್ ಕೊಟ್ಟಿರೋದಕ್ಕೆ ಬೆಲೆ ಕಟ್ಟಲಾಗಲ್ಲ, ಫ್ರೇಮ್ ಹಾಕಿಸಿ ಇಟ್ಟುಕೊಳ್ಳುತ್ತೇನೆ: ಯುವನ್
‘ಬಿಗ್ ಬಾಸ್’ ಆಟ ಅಂತ ಬಂದಾಗ ಅವರ ಆಟ ಅವರು ಆಡಿದ್ದಾರೆ. ನನ್ನ ಆಟ ನಾನು ಆಡಿದ್ದೇನೆ. ಆ ಮನೆಯಲ್ಲಿ ಕಂಫರ್ಟ್ ಝೋನ್ ಅಂತ ಕೊಟ್ಟಿರೋದು ತ್ರಿವಿಕ್ರಮ್. ನನ್ನ ಏಳು ಬೀಳುಗಳಲ್ಲಿ ಅವರು ನನ್ನ ಜೊತೆ ಇದ್ದರು. ಆ ತರಹ ಏನಿಲ್ಲ ಇದ್ದರೆ ಖಂಡಿತವಾಗಿಯೂ ನಾವು ತಿಳಿಸುತ್ತಿದ್ವಿ ಎಂದು ತ್ರಿವಿಕ್ರಮ್ ಜೊತೆಗೆ ಮದುವೆಯಾಗುವ ಪ್ಲ್ಯಾನ್ ಇಲ್ಲ ಎಂದು ಭವ್ಯಾ ಸ್ಪಷ್ಟಪಡಿಸಿದ್ದಾರೆ.
ಇನ್ನೂ ‘ಬಿಗ್ ಬಾಸ್’ ಮನೆಯ 5ನೇ ರನ್ನರ್ ಆಗಿ ಹೊರಹೊಮ್ಮಿರುವ ಭವ್ಯಾ ಇದೀಗ ಹೊಸ ಶೋವೊಂದಕ್ಕೆ ಆಯ್ಕೆಯಾಗಿದ್ದಾರೆ. ‘ಬಾಯ್ಸ್ ವರ್ಸಸ್ ಗರ್ಲ್ಸ್’ ನಟಿ ಭಾಗಿಯಾಗಲಿದ್ದಾರೆ. ಇದರ ಜೊತೆ ಸಿನಿಮಾ ಅಥವಾ ಸೀರಿಯಲ್ ಆಫರ್‌ಗಳಿಗಾಗಿ ನಟಿ ಎದುರು ನೋಡುತ್ತಿದ್ದಾರೆ.