– ಶಿಕ್ಷೆಯಿಂದ ಪಾರಾಗಲು ಅಪ್ರಾಪ್ತ ಮಗನಿಂದ ಕೃತ್ಯ ಎಂಬ ಕಟ್ಟುಕತೆ
ಬೆಂಗಳೂರು: ಇಲ್ಲಿನ ಕೆಆರ್ಪುರ (KRPura) ಪೊಲೀಸ್ (Police) ಠಾಣಾ ವ್ಯಾಪ್ತಿಯ ಭೀಮಯ್ಯ ಲೇಔಟ್ನಲ್ಲಿ ಇತ್ತೀಚೆಗೆ ಮಗನೇ ತಾಯಿಯನ್ನು (Mother) ಹತ್ಯೆಗೈದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯನ್ನು ಆಕೆಯ ಪತಿ ಹತ್ಯೆಗೈದಿದ್ದು, ತಂದೆಯನ್ನು ಪೊಲೀಸರಿಂದ ರಕ್ಷಿಸಲು ಅಪ್ರಾಪ್ತ ಮಗ ತಾಯಿಯನ್ನು ಕೊಲೆಗೈದ ನಾಟಕವಾಡಿರುವುದು ಇದೀಗ ಬೆಳಕಿಗೆ ಬಂದಿದೆ.
Advertisement
ಪೊಲೀಸರ ವಿಚಾರಣೆ ವೇಳೆ ಮಹಿಳೆ ನೇತ್ರಾಳ ಹತ್ಯೆ ವೇಳೆ ಆಕೆಯ ಪತಿ ಚಂದ್ರಪ್ಪ ಕೂಡ ಅದೇ ಮನೆಯಲ್ಲಿದ್ದ ಎಂಬುದು ತಿಳಿದು ಬಂದಿದೆ. ಬಳಿಕ ಪೊಲೀಸರು ಆತನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಈ ವೇಳೆ ಚಂದ್ರಪ್ಪನ ಮಾತಿನಿಂದ ಪೊಲೀಸರಿಗೆ ಅನುಮಾನ ಮೂಡಿದೆ. ಬಳಿಕ ತೀವ್ರ ವಿಚಾರಣೆ ನಡೆಸಿದಾಗ, ಕೊಲೆ ಮಾಡಿರುವುದು ಮಗನಲ್ಲ ನಾನೇ ಎಂದು ಚಂದ್ರಪ್ಪ ಒಪ್ಪಿಕೊಂಡಿದ್ದಾನೆ. ಚಂದ್ರಪ್ಪನಿಗೆ ಪತ್ನಿ ನೇತ್ರಾಳ ಶೀಲದ ಮೇಲೆ ಅನುಮಾನ ಇತ್ತು, ಇದೇ ವಿಚಾರಕ್ಕೆ ಸಾಕಷ್ಟು ಬಾರಿ ಜಗಳ ಸಹ ನಡೆದಿತ್ತು. ಇದೇ ಕಾರಣಕ್ಕೆ ಹತ್ಯೆಗೈದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಖ್ಯಾತ ಹಾಕಿ ಆಟಗಾರನಿಂದ ಅಪ್ರಾಪ್ತೆಯ ಮೇಲೆ ರೇಪ್!
Advertisement
Advertisement
ಮಹಿಳೆ ಹತ್ಯೆಯಾದ ದಿನ, ಮುಳುಬಾಗಿಲಿನಲ್ಲಿ ಓದುತ್ತಿದ್ದ ಆಕೆಯ ಹದಿನೇಳು ವರ್ಷದ ಮಗ ಮನೆಗೆ ಬಂದಿದ್ದ. ಆ ದಿನ ತಿಂಡಿ ಮಾಡಿಕೊಡುವ ವಿಚಾರಕ್ಕೆ ತಾಯಿ ಮತ್ತು ಮಗನ ನಡುವೆ ಜಗಳ ನಡೆಯುತ್ತಿತ್ತು. ಮೊದಲಿಗೆ ಅಪ್ತಾಪ್ತ ಮಗನೇ ದೊಣ್ಣೆಯಿಂದ ತಾಯಿಗೆ ಹಲ್ಲೆ ಮಾಡಿದ್ದಾನೆ. ಈ ವೇಳೆ ದೊಣ್ಣೆ ಕಿತ್ತುಕೊಂಡ ಚಂದ್ರಪ್ಪ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ನೇತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಈ ವೇಳೆ ಪ್ಲ್ಯಾನ್ ಮಾಡಿದ ಚಂದ್ರಪ್ಪ, ನಿನಗೆ ಹದಿನೇಳು ವರ್ಷ, ಕೊಲೆ ಮಾಡಿದ್ರೂ ಜೈಲು ಶಿಕ್ಷೆ ಆಗಲ್ಲ. ನಾನೇ ಮಾಡಿದ್ದು ಎಂದು ಒಪ್ಪಿಕೊಳ್ಳುವಂತೆ ಹೇಳಿದ್ದ.
Advertisement
ತಂದೆಯ ಮಾತನ್ನು ಕೇಳಿ ಮಗ ಪೊಲೀಸರಿಗೆ ಕರೆ ಮಾಡಿ ತಾಯಿಯನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದ. ಪೊಲೀಸರು ಯಾಕಪ್ಪ ಕೊಲೆ ಮಾಡಿದೆ ಎಂದು ವಿಚಾರಿಸಿದಾಗ, ಕಾಲೇಜ್ಗೆ ಹೋಗಲು ತಿಂಡಿ ಮಾಡಿ ಕೊಡು ಎಂದು ತಾಯಿಯ ಬಳಿ ಹೇಳಿದ್ದೆ. ತಾಯಿ ತಿಂಡಿ ಮಾಡಿಕೊಡದೆ, ಕೆಟ್ಟದಾಗಿ ನನ್ನನ್ನೇ ಬೈದಿದ್ದಕ್ಕಾಗಿ ಕೋಪದಲ್ಲಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿಬಿಟ್ಟೆ ಎಂದಿದ್ದ. ಇದೀಗ ಪೊಲಿಸರ ತನಿಖೆ ವೇಳೆ ಸತ್ಯ ಬಯಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು