ಬೆಳಗಾವಿ: ನಗರದ (Belagavi) ಪಿಜಿ ಒಂದರಲ್ಲಿ ಎಂಬಿಎ ಪದವೀಧರೆಯೊಬ್ಬಳು (MBA Graduate) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಪ್ರಿಯಕರನ ಲವ್ (Love) ದೋಖಾಗೆ ವಿಜಯಪುರ (Vijayapura) ಮೂಲದ ಐಶ್ವರ್ಯಲಕ್ಷ್ಮೀ ಗಲಗಲಿ ಬಲಿಯಾಗಿದ್ದಾಳೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಯುವತಿಯ ಮೊಬೈಲ್ ಪರಿಶೀಲನೆ ವೇಳೆ ಪೊಲೀಸರಿಗೆ ಯುವತಿಯ ಪ್ರಿಯಕರನ ಕರಾಳ ಮುಖ ಬಯಲಾಗಿದೆ. ಇದೀಗ ಯುವತಿಯ ಪ್ರಿಯಕರ ಆಕಾಶ್ ಚಡಚಣನನ್ನು ಬೆಳಗಾವಿಯ ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ | ಎಂಬಿಎ ಪದವೀಧರೆ ಪಿ.ಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಐಶ್ವರ್ಯಳ ಪ್ರಿಯಕರ ಮತ್ತೋರ್ವ ಯುವತಿಯೊಂದಿಗೆ ಸಂಬಂಧ ಹೊಂದಿದ್ದು ತಿಳಿದು ಆಘಾತಕ್ಕೊಳಗಾಗಿದ್ದಳು. ಇದೇ ವಿಚಾರಕ್ಕೆ ಮನನೊಂದು ಮಾ.25 ರಂದು ಸಂಜೆ 6:30 ರಿಂದ 7:30ರ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಸಾವಿಗೂ ಮುನ್ನ ಯುವತಿ, ಆಕಾಶ್ ಹಾಗೂ ಅವನ ಸ್ನೇಹಿತನ ಮೊಬೈಲ್‌ಗೆ, ʻನನ್ನ ಸಾವಿಗೆ ನೀವಿಬ್ಬರೂ ಕಾರಣʼ ಎಂದು ಮೆಸೇಜ್ ಮಾಡಿದ್ದಳು ಎನ್ನಲಾಗಿದೆ. ಮೆಸೇಜ್ ನೋಡಿದ್ದ ಆಕಾಶ್, ಐಶ್ವರ್ಯ ತಂಗಿದ್ದ ಪಿಜಿಗೆ ಬಂದು ಬಾಗಿಲು ಒಡೆದು, ಯುವತಿಯ ಮೊಬೈಲ್ ಕದ್ದು ಪರಾರಿಯಾಗಿದ್ದ. ಆತ ಬಂದು ಹೋಗಿರುವ ವೀಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇಬ್ಬರ ನಡುವೆ ಕಾಲೇಜು ದಿನಗಳಿಂದಲೇ ಪ್ರೇಮ ಸಂಬಂಧ ಇತ್ತು ಎನ್ನಲಾಗಿದೆ. ಆಕಾಶ್ ಬೆಳಗಾವಿಯ ಖಾಸಗಿ ಕಂಪನಿಗಲ್ಲಿ ಕೆಲಸ ಮಾಡ್ತಿದ್ದ ಎನ್ನುವ ಕಾರಣಕ್ಕೆ ಆಕೆ ಸಹ ಇಂಟರ್ನಶಿಪ್‌ಗೆ ನಗರಕ್ಕೆ ಬಂದಿದ್ದಳು. ಇದನ್ನೂ ಓದಿ: ಮಾಸ್ಕೋ ನಡು ಬೀದಿಯಲ್ಲಿ ಪುಟಿನ್ ಕಾರು ಸ್ಫೋಟ – ಹತ್ಯೆಗೆ ಯತ್ನ?