ಬೆಂಗಳೂರು: ಡಿವೈಎಸ್ಪಿ ಎಂ ಕೆ ಗಣಪತಿ ಅವರ ಅಸಹಜ ಸಾವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆದ್ರೆ ಇದೀಗ ಈ ಪ್ರಕರಣಕ್ಕೆ ಸ್ಫೋಟಕ ತಿರುವೊಂದು ದೊರೆತಿದೆ.
ಹೌದು. ಯಾರೋ ಕೊಲೆ ಮಾಡಿದ್ದಾರೆ, ಇಲ್ಲ ಆತ್ಮಹತ್ಯೆ ಮಾಡಿಕೊಳ್ಳೊದಕ್ಕೆ ಪ್ರಚೋದಿಸಿದ್ದಾರೆ ಅಂತ ಆರೋಪ ಮಾಡಿದ ಕುಟುಂಬವೇ ಇದೀಗ ಸಾವಿಗೆ ನ್ಯಾಯ ಸಿಕ್ಕೋದಕ್ಕೆ ಬರಲೇ ಇಲ್ಲ. ಆತ್ಮಹತ್ಯೆ ಪ್ರಕರಣ ಬಯಲಿಗೆ ಎಳೆಯೋದಕ್ಕೆ ಸರ್ಕಾರ ನಿವೃತ್ತ ನ್ಯಾಯಾಧೀಶರ ಆಯೋಗವೊಂದನ್ನು ಮಾಡಿದೆ. ಆ ಕೇಶವ ನಾರಾಯಣ ಆಯೋಗ ಎಲ್ಲರನ್ನು ವಿಚಾರಣೆ ಮಾಡಿ ಸತ್ಯಾಸತ್ಯತೆ ಬೆಳಕಿಗೆ ತರುವ ಸಲುವಾಗಿ ತನಿಖೆ ಮಾಡ್ತಾ ಇದೆ.
Advertisement
Advertisement
ಆದ್ರೆ ಗಣಪತಿಯ ಮನೆಯವರೇ ತನಿಖೆಗೆ ಸಹಕಾರ ನೀಡಿಲ್ಲ. ಗಣಪತಿ ಪತ್ನಿ, ಮಗ ಮತ್ತು ತಮ್ಮ ಮೂವರು ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನಮಗೆ ಯಾರ ಮೇಲೂ ಅನುಮಾನ ಇಲ್ಲ ನೀವೆ ಪತ್ತೆ ಹಚ್ಚಿ ಅಂತ ಹೇಳಿ ಹೋಗಿದ್ದಾರೆ ಎನ್ನಲಾಗಿದೆ.
Advertisement
ಇತ್ತ ಸುಪ್ರೀಂಕೋರ್ಟ್ ಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡಿದ ಗಣಪತಿ ಅಕ್ಕ ಸಬಿತಾ, ತಮ್ಮ ಮಾಚಯ್ಯ ಕೂಡ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗುತ್ತಿಲ್ಲ. ಮೂರು ಮೂರು ಬಾರಿ ನೋಟೀಸ್ ನೀಡಿದ್ರು ಕೂಡ ಯಾವುದೇ ಪ್ರತಿಕ್ರಿಯೆಯನ್ನು ನೀಡ್ತಾ ಇಲ್ಲ. ಇನ್ನು ವಿಚಾರಣೆ ಹಾಜರಾದ ಮೂವರು ಯಾವುದೇ ಹೇಳಿಕೆ ಹಾಗೂ ಯಾರ ವಿರುದ್ಧವೂ ಹೇಳಿಕೆ ನೀಡದೇ ಇದ್ದಿದ್ರಿಂದ ಆರೋಪಿಗಳ ಸ್ಥಾನದಲ್ಲಿ ಇರುವ ಜಾರ್ಜ್, ಪ್ರಣವ್ ಮೊಹಂತಿ ಮತ್ತು ಎ ಎಂ ಪ್ರಸಾದ್‍ನ ವಿಚಾರಣೆಯೇ ನಡೆಸಿಲ್ಲ. ಕೇವಲ ಸಿಬಿಐ ಮೇಲೆ ನಂಬಿಕೆ ಇಟ್ಟುಕೊಂಡಿರೋದ್ರಿಂದ ಆಯೋಗವನ್ನು ಕ್ಯಾರೆ ಅನ್ನುತ್ತಿಲ್ಲ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement
ಇದನ್ನೂ ಓದಿ: ಗಣಪತಿ ಸಾವಿನ ಕೇಸಲ್ಲಿ ಕಲಾಪ ಕೋಲಾಹಲ- ಡಾಕ್ಟರ್ ಮೇಲೆ ಸರ್ಕಾರ ಹಾಕಿತ್ತಂತೆ ಒತ್ತಡ
ಕಳೆದ ವರ್ಷ ಜು. 7 ರಂದು ಬೆಳಗ್ಗೆ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವಿನಾಯಕ ಲಾಡ್ಜ್ ಗೆ ಬಂದ ಗಣಪತಿ ಅವರು ರೂಮು ಪಡೆದುಕೊಂಡಿದ್ದರು. ಸಾವಿಗೂ ಮುನ್ನ ಖಾಸಗಿ ವಾಹಿನಿ ಸ್ಟುಡಿಯೋದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದ ಗಣಪತಿ, ಸಚಿವ ಕೆ. ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಹಾಗೂ ಎ. ಎಂ. ಪ್ರಸಾದ್ ಅವರುಗಳಿಂದ ಕಿರುಕುಳ ಅನುಭವಿಸಿದ್ದಾಗಿ ಹೇಳಿಕೊಂಡಿದ್ದರು. ನಂತರ ಲಾಡ್ಜ್ ನಲ್ಲಿ ಪೊಲೀಸ್ ಯೂನಿಫಾಂನಲ್ಲಿಯೇ ನೇತಾಡುತ್ತಿದ್ದ ಅವರ ದೇಹ ಪತ್ತೆಯಾಗಿತ್ತು.
ಇದನ್ನೂ ಓದಿ: ಗಣಪತಿ ಕೇಸ್: ಕಾಟಾಚಾರದ ಸಿಐಡಿ ತನಿಖೆಗೆ ಸಿಕ್ತು ಪುರಾವೆ-ಸಿಬಿಐ ತನಿಖೆ ವೇಳೆ ಪತ್ತೆ ಆಯ್ತು ಗುಂಡು
https://www.youtube.com/watch?v=ExzV6YadXj8