Connect with us

Bengaluru City

ಗಣಪತಿ ಸಾವಿನ ಕೇಸಲ್ಲಿ ಕಲಾಪ ಕೋಲಾಹಲ- ಡಾಕ್ಟರ್ ಮೇಲೆ ಸರ್ಕಾರ ಹಾಕಿತ್ತಂತೆ ಒತ್ತಡ

Published

on

ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸದನ ಕೋಲಾಹಲವೇ ನಡೀತು.

ಸರ್ಕಾರ ಒತ್ತಡ ಹಾಕಿದೆ, ಸರ್ಕಾರ ಹೇಳಿದಂತೆ ವರದಿ ಕೊಟ್ಟಿದ್ದೇವೆ ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ಡಾ.ಶೈಲಜಾ ಸಿಬಿಐ ಮುಂದೆ ಹೇಳಿದ್ದಾರೆ. ಹಾಗಾಗಿ ಸಚಿವ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿದ್ವಿ. ಈಗ ಸಿಎಂ ಕೂಡ ತಪ್ಪಿತಸ್ಥರಾಗಿದ್ದು, ಅವರು ರಾಜೀನಾಮೆ ಕೊಡ್ಲಿ ಅಂತ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಪಟ್ಟು ಹಿಡಿದ್ರು.

ಸಿಬಿಐ ತನಿಖೆ ಅಗಲಿ, ಆಮೇಲೆ ನೋಡೋಣ ಎಂದು ಗೃಹ ಸಚಿವರು ಹೇಳಿದ್ರೆ, ಚರ್ಚೆಗೆ ಅವಕಾಶ ಕೊಡಬೇಕು, ಸಿಎಂ, ಜಾರ್ಜ್ ರಾಜೀನಾಮೆ ಕೊಡಬೇಕು ಅಂತಾ ಬಿಜೆಪಿಯವರು ಪಟ್ಟು ಹಿಡಿದ್ರು. ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದ್ರು. ಆಗ ಕಾಂಗ್ರೆಸ್ ಬಿಜೆಪಿಗರ ಮಧ್ಯೆ ಮಾತಿನ ಚಕಮಕಿ ನಡೀತು.

ಡಿವೈಎಸ್ಪಿ ಗಣಪತಿ ನಿಗೂಢ ಸಾವಿನ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇತ್ತೆಂದು ಹರಡಿರುವ ವದಂತಿಗೆ ಮಡಿಕೇರಿಯ ವೈದ್ಯೆ ಡಾ. ಶೈಲಜಾ ಸ್ಪಷ್ಟನೆ ನೀಡಿದ್ದಾರೆ. ತಾವು ಸಿಬಿಐಗೆ ಯಾವುದೇ ಹೇಳಿಕೆ ನೀಡಿಲ್ಲ. ಕೇವಲ ಮರಣೋತ್ತರ ಪರೀಕ್ಷೆಯ ವರದಿಯನ್ನು ಸಿಬಿಐ ಅಧಿಕಾರಿಗಳು ಕೊಂಡೊಯ್ದಿದಿದ್ದು, ಇದುವರೆಗೆ ಯಾವುದೇ ಹೇಳಿಕೆ ಪಡೆದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *