ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಬಳಿ ತಣ್ಣೀರುಬಾವಿಯ ಬೀಚ್ ಬಳಿ ನಡೆದಿದೆ ಎನ್ನಲಾದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ತಣ್ಣೀರುಬಾವಿಯ ಫಾತಿಮಾ ಬೀಚ್ ಬಳಿಯ ಗ್ರಾಮಸ್ಥರು ಮಂಗಳೂರು ಆಯುಕ್ತರನ್ನು ಭೇಟಿಯಾಗಿದ್ದು, ವಿದ್ಯಾರ್ಥಿಗಳು ಸ್ಥಳೀಯರ ಜೊತೆ ಅಸಹ್ಯವಾಗುವಂತೆ ವರ್ತಿಸಿದ್ದಾರೆ. ಇದನ್ನು ಪ್ರಶ್ನಿಸಿ ಅಲ್ಲಿಂದ ತೆರಳುವಂತೆ ಸ್ಥಳೀಯರು ಸೂಚಿಸಿದ್ದನ್ನೇ ತಿರುಚಿ ರಾತ್ರಿ ಯಾರದ್ದೋ ಒತ್ತಡಕ್ಕೆ ಮಣಿದು ಪೊಲೀಸ್ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.
Advertisement
Advertisement
ಅಮಾಯಕ ಹುಡುಗರ ವಿರುದ್ಧ ಪೊಲೀಸರು ಡಕಾಯಿತಿ, ದರೋಡೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ. ಈ ನಡುವೆ ಹಲ್ಲೆಗೊಳಗಾದ ಹುಡುಗರಿಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Advertisement
ಇದರೊಂದಿಗೆ ಹಿಂದು ಸಂಘಟನೆ ಕಾರ್ಯಕರ್ತರ ಮೇಲಿದ್ದ ನೈತಿಕ ಪೊಲೀಸ್ ಗಿರಿ ಆರೋಪ ಬೇರೆಯದ್ದೇ ರೂಪ ಪಡೆದುಕೊಂಡಿದೆ. ಬರ್ತ್ ಡೇ ಆಚರಣೆ ಮಾಡಿದ್ದಕ್ಕೆ ತಮಗೆ ಹೊಡೆದಿದ್ದಲ್ಲ. ಮುಸ್ಲಿಮರು ಎಂಬ ಕಾರಣಕ್ಕೆ ಹೊಡೆದಿದ್ದಾರೆ. ತಮ್ಮ ಜೊತೆಗಿದ್ದ ನಿತೇಶ್ ಬಳಿ ನೀನು ಮುಸ್ಲಿಮರಿಗೆ ಯಾಕೆ ಸಪೋರ್ಟ್ ಮಾಡ್ತೀಯಾ ಎಂದು ಕೇಳಿ ಹೊಡೆದಿದ್ದಾರೆ ಅಂತಾ ಪೆಟ್ಟು ತಿಂದ ಹುಡುಗರು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಬೀಚ್ ಬಳಿ ಬರ್ತ್‍ಡೇ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ!
Advertisement