ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.
ಜನಾರ್ದನ್(52), ಸುಷ್ಮಿತ(48), ಸುದರ್ಶಿನಿ(29) ಹಾಗೂ ಸೋನಿಕ(6) ಮೃತ ವ್ಯಕ್ತಿಗಳು. ಒಂದೇ ಮನೆಯ ದುರಂತ ಸಾವುಗಳನ್ನು ಕಂಡರೆ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನುವುದು ಪೊಲೀಸರಿಗೆ ಅನುಮಾನ ಮೂಡಿದೆ. ಏಕೆಂದರೆ ಮೃತರ ಪೈಕಿ ಜನಾರ್ದನ್ ಮತ್ತು ಸುಮಿತ್ರ ಮಾತ್ರೆ ಸೇವನೆ ಮಾಡಿ ಮೃತ ಪಟ್ಟಿದರೆ, ಮಗುವನ್ನು ಉಸಿರು ಕಟ್ಟಿಸಿ ಕೊಲೆ ಮಾಡಿ ನಂತರ ಸುಧಾರಾಣಿ ಮುಖಕ್ಕೆ ಪ್ಲಾಸ್ಟಿಕ್ ಕವರ್ ನಲ್ಲಿ ಬಿಗಿದುಕೊಂಡು ಸಾವನಪ್ಪಿದ್ದಾರೆ. ಸಾವಿಗೂ ಮುನ್ನ ಸುಧಾರಾಣಿ ಬರೆದಿರುವ ಡೆತ್ ನೋಟ್ ಹಲವು ವಿಚಾರಗಳನ್ನು ಹೊರ ಹಾಕಿದೆ.
Advertisement
ಡೆತ್‍ನೋಟ್‍ನಲ್ಲಿ ಏನಿದೆ?
ನಾನು ಸುಧಾರಾಣಿ. ನಮ್ಮ ಸಾವಿಗೆ ಬೇರೆ ಯಾರು ಕಾರಣ ಅಲ್ಲ ನಾನೇ ಕಾರಣ. ನನಗೆ ಒಂದು ಮನೆ ತೆಗೆದುಕೊಳ್ಳುವ ಕನಸು ಇತ್ತು. ಹೀಗಿರುವಾಗ ಒಬ್ಬನನ್ನು ನಂಬಿದ್ದೆ. ಅದೇ ನಂಬಿಕೆ ಮೇಲೆ ಆತನಿಗೆ 25 ಲಕ್ಷ ಹಣ ಕೊಟ್ಟಿದ್ದೆ. ಆದರೆ ಆ ವ್ಯಕ್ತಿ ಹಣ ತೆಗೆದುಕೊಂಡು ಹೋಗುತ್ತಿರುವಾಗಲೇ ಅಪಘಾತವಾಗಿ ಸಾವನ್ನಪ್ಪಿದ. ನನ್ ಹಣ ಹೋಯ್ತು. ಅಪ್ಪ ಅಮ್ಮನಿಗೆ ವಿಚಾರ ತಿಳಿಸಿದ್ದೆ. ನಂತರ ಹಣ ವಾಪಸ್ ಸಿಗಬಹುದು ಅಂತ ಸಾಕಷ್ಟು ಪ್ರಯತ್ನ ಪಟ್ಟೆ. ತುಂಬಾ ಜನರ ಬಳಿ ಕೇಳಿ ಕೊಂಡಿದ್ದೆ. ಆದರೆ ಪರಿಹಾರ ಸಿಗಲಿಲ್ಲ. ಹಣ ವಾಪಸ್ ಬರುತ್ತೆ ಎನ್ನುವ ನಂಬಿಕೆ ಬರಲಿಲ್ಲ.
Advertisement
Advertisement
ಕೊನೆಗೆ ಅಪ್ಪ-ಅಮ್ಮನ ಜೊತೆ ಮಾತನಾಡಿ ತೀರ್ಮಾನ ಮಾಡಿದ್ವಿ. ಅಪ್ಪ ಅಮ್ಮನಿಗೆ ಶನಿವಾರ ಮಾತ್ರೆ ಕೊಟ್ಟೆ, ಅವರು ಸಾಯುವ ಮೊದಲು ನಾವೇನಾದರು ಸತ್ತಿಲ್ಲಾ ಅಂದರೆ ನಮ್ಮನ್ನು ಕೊಂದುಬಿಡು ಎಂದು ಹೇಳಿದರು. ನಂತರ ಅಪ್ಪ-ಅಮ್ಮ ಮಾತ್ರೆ ಸೇವಿಸಿದ ನಂತರ ನಾನು ಮಗಳನ್ನು ಕರೆದುಕೊಂಡು ಮನೆ ಬೀಗ ಹಾಕಿಕೊಂಡು ಗಂಡನ ಮನೆಗೆ ಹೋಗಿದ್ದೆ ಅಲ್ಲಿ ಅಡುಗೆ ಮಾಡಿಟ್ಟು, ಸಂಜೆ ವಾಪಸ್ ಬಂದೆ. ಅಷ್ಟರಲ್ಲಿ ಅಪ್ಪ-ಅಮ್ಮ ಸತ್ತು ಹೋಗಿದ್ದರು. ನಂತರ ನಾನು ಮೊದಲೇ ತೀರ್ಮಾನ ಮಾಡಿದ ಹಾಗೆ, ಮನೆ ಒಳಗಿನಿಂದ ಬೀಗ ಹಾಕಿ ಮಗಳು ಮೋನಿಕಾಳನ್ನು ಉಸಿರುಗಟ್ಟಿಸಿ ಕೊಂದೆ. ಇವಾಗ ನಾನು ಸಾಯುತ್ತೇನೆ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಸದ್ಯ ಮೂರು ಕೊಲೆ ಮತ್ತು ಒಂದು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡಿರುವ ವಿದ್ಯಾರಣ್ಯಪುರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.
ಈ ಸಾವಿಗೆ ಕೇವಲ ಹಣ ಮಾತ್ರ ಕಾರಣವಾ ಇಲ್ಲಾ ಅದಕ್ಕೂ ಮೀರಿದ್ದು ಏನಾದರೂ ಇದೆಯಾ ಅನ್ನೋದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews