– ಕ್ಯಾಲ್ಸಿಯಂ, ಪ್ರೋಟಿನ್ ಪ್ರಮಾಣ ಕಡಿಮೆ
ಬೆಂಗಳೂರು: ಕಲ್ಲಂಗಡಿ, ಸಿಹಿ ತಿಂಡಿ, ಇಡ್ಲಿ ಬಳಿಕ ಇದೀಗ ಆಹಾರ ಸುರಕ್ಷತಾ ಇಲಾಖೆ ಮತ್ತೆ ಶಾಕ್ ನೀಡುತ್ತಿದ್ದು, ಪನ್ನೀರ್‌ನಲ್ಲಿ (Paneer) ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂಬುದು ಆಹಾರ ಸುರಕ್ಷತಾ ಇಲಾಖೆ (Department of Food Safety) ವರದಿಯಲ್ಲಿ ಗೊತ್ತಾಗಿದೆ.
ಹೌದು, ಈ ಮೊದಲು ಆಹಾರ ಸುರಕ್ಷತಾ ಇಲಾಖೆ ಕಲ್ಲಂಗಡಿಯಲ್ಲಿ ಕೆಮಿಕಲ್, ಸಿಹಿ ತಿಂಡಿ ಹಾಗೂ ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ ಮಾಡಿತ್ತು. ಇದೀಗ ಪನ್ನೀರ್‌ನ್ನು ಮೆದುವಾಗಿಸಲು ಬಳಸುವ ಕೆಮಿಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಇಲಾಖೆಯ ವರದಿ ತಿಳಿಸಿದೆ.ಇದನ್ನೂ ಓದಿ:ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ
ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಕಡೆಯ ಪನ್ನೀರ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಲ್ಯಾಬ್ ಟೆಸ್ಟ್ ವರದಿ ಬಂದಿದ್ದು, ಆತಂಕಕಾರಿ ಅಂಶ ಬಯಲಾಗಿದೆ. ಪನ್ನೀರ್‌ನಲ್ಲಿ ಕ್ಯಾಲ್ಸಿಯಂ ಹಾಗೂ ಪ್ರೋಟಿನ್ ಪ್ರಮಾಣ ಕಡಿಮೆಯಿರುವುದು ಕಂಡುಬಂದಿದೆ. ಪನ್ನೀರ್ ತಯಾರಿಸುವಾಗ ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಪ್ರೋಟಿನ್‌ಅನ್ನು ಬಳಸುತ್ತಾರೆ ಮತ್ತು ಪನ್ನೀರ್‌ನ್ನು ಮೆದುವಾಗಿಸಲು ಕೆಮಿಕಲ್ ಬಳಸುತ್ತಾರೆ. ಈ ಕೆಮಿಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಆಹಾರ ಸುರಕ್ಷತಾ ಇಲಾಖೆ ವರದಿ ತಿಳಿಸಿದೆ.
ಆರೋಗ್ಯ ಸಮಸ್ಯೆಗಳೇನು?
1. ಹೃದಯ ಸಂಬಂಧಿ ಖಾಯಿಲೆಗೆ ಕಾರಣ
2. ಕೆಮಿಕಲ್ ಬಳಕೆ ಕ್ಯಾನ್ಸರ್‌ಗೆ ಕಾರಣ
3. ಕೊಬ್ಬಿನ ಪ್ರಮಾಣ ಹೆಚ್ವಾಗುತ್ತದೆ.
4. ಕಿಡ್ನಿ ಸಮಸ್ಯೆ ಉಂಟಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಹಾಗೂ ತಿನಿಸುಗಳಲ್ಲಿ ಹೆಚ್ಚಾಗಿ ಕಲಬೆರಿಕೆ ಅಂಶ ಪತ್ತೆಯಾಗಿತ್ತಿರುವ ಹಿನ್ನೆಲೆ ಬೆಂಗಳೂರು ನಗರದಲ್ಲಿ ಆಹಾರ ಸುರಕ್ಷತಾ ಇಲಾಖೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಾರತಹಳ್ಳಿ, ವೈಟ್‌ಫೀಲ್ಡ್, ದೊಡ್ಡನಕ್ಕುಂದಿ, ಔಟರ್ ರಿಂಗ್ ರೋಡ್, ಮಹಾದೇವಪುರ ಸುತ್ತಮುತ್ತ ಇಲಾಖೆಯ ಅಧಿಕಾರಿಗಳು ಆಹಾರ ಪದಾರ್ಥಗಳ ಕಲರಿಂಗ್ ಮತ್ತು ಕಲಬೆರಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕಲಬೆರಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ:ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲೀಮರೂ ಸುರಕ್ಷಿತ – ಯೋಗಿ ಆದಿತ್ಯನಾಥ್