ನವದೆಹಲಿ: “ಇದು ಕೇಂದ್ರ ಸರ್ಕಾರದ ಅತಿ ದೊಡ್ಡ ಭ್ರಷ್ಟಾಚಾರ. ಈ ವಿಚಾರದ ಬಗ್ಗೆ ಮಾತನಾಡಲು ನಮಗೆ ಅವಕಾಶ ನೀಡಬೇಕೆಂದು” ಆಗ್ರಹಿಸಿ ಲೋಕಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಭಾರತ್ ಪೆಟ್ರೋಲಿಯಂ ಕಾರ್ಪೋರೆಷನ್ ಲಿಮಿಟೆಡ್(ಬಿಪಿಸಿಎಲ್) ಸೇರಿದಂತೆ ಕೆಲವು ಸಾರ್ವಜನಿಕ ವಲಯ ಸಂಸ್ಥೆಗಳ ಖಾಸಗೀಕರಣ ಮತ್ತು ಚುನಾವಣಾ ಬಾಂಡ್‍ಗಳನ್ನು ಬಿಡುಗಡೆ ಮಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಇಂದು ಕೋಲಾಹಲ ಎಬ್ಬಿಸಿದರು.
Advertisement
ಸುಮಾರು 15 ನಿಮಿಷಗಳ ಕಾಲ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ, ಇದು ಕೇಂದ್ರ ಸರ್ಕಾರದ ಅತಿ ದೊಡ್ಡ ಹಗರಣ, ಖಾಸಗೀಕರಣಗೊಳಿಸಿ ದೇಶವನ್ನು ಲೂಟಿ ಮಾಡಲಾಗುತ್ತಿದೆ. ನಮಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಬೇಕೆಂದು ಹೇಳಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
Advertisement
Advertisement
ಈ ಸಂದರ್ಭದಲ್ಲಿ ಸ್ಪೀಕರ್ ಓ ಬಿರ್ಲಾ ಅವರು, ಶೂನ್ಯ ವೇಳೆಯಲ್ಲಿ ಮಾತನಾಡಲು ಅವಕಾಶ ನೀಡುತ್ತೇನೆ ಎಂದು ಭರವಸೆ ನೀಡಿದ ನಂತರ ಕೈ ಸದಸ್ಯರು ತಮ್ಮ ಸ್ಥಾನಕ್ಕೆ ಹೋಗಿ ಕುಳಿತುಕೊಂಡರು.
Advertisement
ಸದನದ ಘನತೆಯನ್ನು ಯಾರೂ ಹಾಳು ಮಾಡಬಾರದು. ಈ ರೀತಿ ಮಾಡುವುದು ತಪ್ಪು. ಕಲಾಪದಲ್ಲಿ ಕ್ರೀಡಾಪಟುಗಳ ಬಗ್ಗೆ ಗಂಭೀರ ಚರ್ಚೆ ನಡೆಯತ್ತಿರುವಾಗ ಬಾವಿಗಿಳಿದು ಪ್ರತಿಭಟಿಸಬಾರದು. ಸದನದ ಘನತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮನವಿ ಮಾಡಿಕೊಂಡ ಸ್ಪೀಕರ್, ನಾನು ಹೊಸಬನಾಗಿದ್ದು ನೀವು ಹಿರಿಯರಿದ್ದೀರಿ. ನಿಮ್ಮ ನಿಲುವಳಿ ಸೂಚನೆಯನ್ನು ನಾವು ಒಪ್ಪುವುದಿಲ್ಲ. ಶೂನ್ಯ ವೇಳೆ ಚರ್ಚಿಸಲು ಅನುಮತಿ ನೀಡುತ್ತೇನೆ ಎಂದು ತಿಳಿಸಿದರು.
ಈ ವೇಳೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ, ಇದು ದೇಶದ ಅತಿ ದೊಡ್ಡ ಹಗರಣ. ದೇಶವನ್ನು ಲೂಟಿ ಮಾಡಲಾಗುತ್ತದೆ. ನಾವು ಸದನದ ಕಲಾಪ ಸುಗಮವಾಗಿ ನಡೆಯಲು ಸಹಕಾರ ನೀಡುತ್ತೇವೆ. ನೀವು ಸದನಕ್ಕೆ ಹೊಸಬರಲ್ಲ. ಕಲಾಪದಲ್ಲಿ ಪ್ರಮುಖ ವಿಷಯಗಳು ಚರ್ಚೆಯಾಗಬೇಕು. ಇದೊಂದು ದೊಡ್ಡ ಹಗರಣವಾಗಿದ್ದು, ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಈ ಕಾರಣಕ್ಕೆ ನಾವು ನಿಲುವಳಿ ಸೂಚನೆಗೆ ಆಗ್ರಹಿಸುತ್ತಿದ್ದೇವೆಯೇ ಹೊರತು ಸಭಾಧ್ಯಕ್ಷರಿಗೆ ಅಗೌರವ ನೀಡುತ್ತಿಲ್ಲ. ನಮ್ಮ ಮನವಿಗೆ ಸಹಕಾರ ನೀಡಬೇಕೆಂದು ಸ್ಪೀಕರ್ ಬಳಿ ಕೇಳಿಕೊಂಡರು.
ಕೈ ನಾಯಕರ ಆರೋಪಗಳಿಗೆ ಉತ್ತರಿಸಿದ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಪ್ರಧಾನಿ ಮೋದಿಯವರು ಸ್ವಚ್ಛ ಸರ್ಕಾರ ನಡೆಸುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುವುದಿಲ್ಲ. ನೀವು ಪ್ರತಿದಿನ ಒಂದೊಂದು ವಿಷಯಕ್ಕೆ ನಿಲುವಳಿ ಸೂಚನೆ ಹಿಡಿದುಕೊಂಡು ಬರುತ್ತೀರಿ. ಈ ರೀತಿ ನೀವು ಮಾಡಬಾರದು ಎಂದು ಹೇಳಿ ತಿರುಗೇಟು ನೀಡಿದರು.
https://www.youtube.com/watch?v=S6bowQfTxzc