ಕಾರವಾರ: ಮುಂಬೈ ಅಟ್ಯಾಕ್, ಚಿನ್ನಸ್ವಾಮಿ ಕ್ರೀಡಾಂಗಣ ಬ್ಲಾಸ್ಟ್‌ನಲ್ಲಿ ಆರೋಪಿಯಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಉಗ್ರಗಾಮಿ ಅಬ್ದುಲ್ ವಾಯಿದ್ ಸಿದ್ದಿಬಪ್ಪಗೆ (Abdul Wahid Siddibappa) ದೆಹಲಿ ಪಟಿಯಾಲ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಭಯೋತ್ಪಾದಕ ಚಟುವಟಿಕೆಗೆ ಹವಾಲಾ ಹಣ ವರ್ಗಾವಣೆ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಪ್ರಕರಣ ರದ್ದು ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.
ದುಬೈನಲ್ಲಿ ಕುಳಿತು ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದ ಆರೋಪದಡಿ ಅಲ್ಲಿನ ಸರ್ಕಾರ ಈತನನ್ನು ಗಡಿಪಾರು ಮಾಡಿತ್ತು. ನಂತರ 2016ರ ಮೇ 20 ರಲ್ಲಿ NIA ದೆಹಲಿಯಲ್ಲಿ ಬಂಧಿಸಿತ್ತು. ಇದನ್ನೂ ಓದಿ: ಸ್ವಂತ ಮನೆಯಿಲ್ಲ ಎಂದಿದ್ದ ರಾಹುಲ್ ಗಾಂಧಿಗೆ 4 ಅಂತಸ್ತಿನ ಮನೆ ನೀಡಿದ ಕಾಂಗ್ರೆಸ್ ʻರಾಜಕುಮಾರಿʼ
ಈತನ ವಿರುದ್ಧ ಇಂಡಿಯನ್ ಮುಜಾಹಿದ್ದಿನ್ (ಸಿಮಿ) ಸಂಘಟನೆಗೆ ಅಕ್ರಮ ಹಣಕಾಸು ವ್ಯವಹಾರ, ಹವಾಲಾ ದಂಧೆ, ಮುಂಬೈ ಅಟ್ಯಾಕ್, ಚಿನ್ನಸ್ವಾಮಿ ಕ್ರೀಡಾಂಗಣ ಬ್ಲಾಸ್ಟ್‌ನಲ್ಲಿ ಸಹ ಈತನ ಕೈವಾಡ ಇರುವ ಕುರಿತು NIA ಪ್ರಕರಣ ದಾಖಲಿಸಿತ್ತು.
ಭಟ್ಕಳ ಮೂಲದ ಅಬ್ದುಲ್ ವಾಯಿದ್ ಸಿದ್ದಿಬಪ್ಪ ವಿರುದ್ಧ NIA ದಾಖಲಿಸಿದ್ದ, ಭಯೋತ್ಪಾದನೆ ಸಂಘಟನೆಗೆ ಹಣ ಒದಗಿಸಿದ ಕುರಿತು ಇರುವ ದೂರಿನಲ್ಲಿ ಸಾಕ್ಷಿ ಕೊರತೆ ಹಿನ್ನಲೆಯಲ್ಲಿ ಪ್ರಕರಣವನ್ನು ದೆಹಲಿ ಪಟಿಯಾಲ ಕೋರ್ಟ್ ಶನಿವಾರ ರದ್ದುಪಡಿಸಿತು. ಅಲ್ಲದೇ ವಾಯಿದ್ ಬಿಡುಗಡೆ ಮಾಡುವಂತೆ ಸೋಮವಾರ ಆದೇಶ ಮಾಡಿದೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಗಲಭೆಕೋರರನ್ನ ತಲೆಕೆಳಗಾಗಿ ನೇತು ಹಾಕ್ತೀವಿ – ಅಮಿತ್ ಶಾ ಗುಡುಗು