‘ವರಾಹ ರೂಪಂ’ (Varaha Rupam) ಹಾಡಿಗೆ (Song) ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಇಂದು ಸುಪ್ರೀಂ ಕೋರ್ಟ್ ಸಡಿಲಿಸಿದೆ. ಕೆಲವು ಷರತ್ತುಗಳನ್ನು ಹಾಕುವ ಮೂಲಕ ‘ಕಾಂತಾರ’ (Kantara) ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು (Vijay Kirgandur) ಅವರಿಗೆ ಕೇರಳ ಹೈಕೋರ್ಟ್ ಮೊನ್ನೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ‘ವರಾಹ ರೂಪಂ’ ಹಾಡಿಗೆ ಸಂಬಂಧಿಸಿದಂತೆ ಕೇರಳದ ಹೈಕೋರ್ಟ್ ನ್ಯಾಯಮೂರ್ತಿ ಎ.ಬದ್ರುದ್ದೀನ್ ಅವರು ‘ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್ ನಿಂದ ಆದೇಶ ಬರೋವರೆಗೂ ವರಾಹ ರೂಪಂ ಹಾಡನ್ನು ಬಳಕೆ ಮಾಡುವಂತಿಲ್ಲ’ ಎನ್ನುವ ಷರತ್ತೂ ಸೇರಿದಂತೆ ಹಲವು ಷರತ್ತುಗಳು ಹಾಕಿತ್ತು.
ಎರಡು ದಿನಗಳ ಕಾಲ ಅಂದರೆ ಫೆ.12 ಮತ್ತು 13 ರಂದು ವಿಚಾರಣೆಗಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ತನಿಖಾಧಿಕಾರಿಯು ಅವರನ್ನು ವಿಚಾರಣೆಗೆ ಒಳಪಡಿಸಿ, ಒಂದು ವೇಳೆ ಬಂಧಿಸಿದರೆ ನ್ಯಾಯವ್ಯಾಪ್ತಿಯ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು. ನಂತರ 50 ಸಾವಿರ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮೇಲೆ ಕೋರ್ಟ್ ಜಾಮೀನು ನೀಡಬೇಕು. ಆರೋಪಿಗಳು ಅರ್ಜಿದಾರರನ್ನು ಹಾಗೂ ಸಾಕ್ಷಿಗಳನ್ನು ಬೆದರಿಸಬಾರದು ಮತ್ತು ಸಾಕ್ಷ್ಯ ನಾಶ ಮಾಡುವಂತಹ ಕೆಲಸಕ್ಕೆ ಕೈ ಹಾಕಬಾರದು. ಹಾಗೂ ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ಪೂರ್ವಾನುಮತಿಯಿಲ್ಲದೇ ಆರೋಪಿಗಳು ಭಾರತವನ್ನು ತೊರೆಯುವಂತಿಲ್ಲ. ಜಾಮೀನು ಪಡೆದ ಸಮಯದಲ್ಲಿ ಆರೋಪಿಗಳು ಯಾವುದೇ ಅಪರಾಧದ ಕೃತ್ಯದಲ್ಲಿ ಭಾಗಿಯಾಗುವಂತಿಲ್ಲ. ಅಂತಹ ಘಟನೆಗಳು ನಡೆದಿರುವುದು ಕೋರ್ಟ್ ಗಮನಕ್ಕೆ ಬಂದರೆ, ಜಾಮೀನನ್ನು ರದ್ದುಗೊಳಿಸಲಾಗುವುದು ಎಂದು ಕೋರ್ಟ್ ತಿಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್, ನಟ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರ್ಗಂದೂರ್ ಗೆ ಮಧ್ಯಂತರ ರಕ್ಷಣೆ ನೀಡಿದೆ. ತನಿಖೆ ವೇಳೆ ಬಂಧಿಸದಂತೆ ಸುಪ್ರೀಂ ಸೂಚಿಸಿದೆ. ಇದನ್ನೂ ಓದಿ: ಕ್ರಶ್ ಮದುವೆ ಆಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ ಸುದೀಪ್ ಪುತ್ರಿ
‘ಕಾಂತಾರ’ ಸಿನಿಮಾದ ಸೂಪರ್ ಹಿಟ್ ‘ವರಾಹ ರೂಪಂ’ ಹಾಡಿನ ಟ್ಯೂನ್ ಅನ್ನು ಕದಿಯಲಾಗಿದೆ ಎಂದು ಮಲಯಾಳಂನ ತೈಕ್ಕುಡಂ ಬ್ರಿಡ್ಜ್ ಆರೋಪಿಸಿ ದೂರು ನೀಡಿತ್ತು. ಅದು ತಮ್ಮ ‘ನವರಸಂ’ ಹಾಡಿನದ್ದು ಎನ್ನುವುದನ್ನು ಸಾಕ್ಷ್ಯ ಸಮೇತ ಕೋಯಿಕ್ಕೋಡ್ ನ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ದೂರಿಗೆ ಸಂಬಂಧಿಸಿದಂತೆ ಮೊನ್ನೆ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಮತ್ತು ರಿಷಬ್ ಶೆಟ್ಟಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ರವಿವಾರವಷ್ಟೇ ‘ಕಾಂತಾರ’ ಸಿನಿಮಾದ ಶತದಿನೋತ್ಸವ ಆಚರಿಸಿದೆ ಚಿತ್ರತಂಡ. ಈ ವೇಳೆಯಲ್ಲಿ ‘ಕಾಂತಾರ 1’ ಸಿನಿಮಾದ ವಿಷಯವನ್ನೂ ಹಂಚಿಕೊಂಡಿದೆ. ಏಪ್ರಿಲ್ ಹೊತ್ತಿಗೆ ‘ಕಾಂತಾರ 1’ ಸಿನಿಮಾದ ಕೆಲವು ವಿಷಯಗಳನ್ನೂ ನಿರ್ದೇಶಕರು ಹಂಚಿಕೊಳ್ಳಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸದಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ಆದರೂ, ವರಾಹ ರೂಪಂ ಹಾಡಿನ ಸಮಸ್ಯೆ ಬಗೆಹರಿದಿಲ್ಲ. ಮುಂದಿನ ದಿನಗಳಲ್ಲಿ ಯಾರ ಪರ ತೀರ್ಪು ಬರಬಹುದು ಎನ್ನುವುದು ಸದ್ಯಕ್ಕಿರುವ ಕುತೂಹಲವಷ್ಟೇ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k