CinemaLatestMain PostNationalSouth cinema

ಪ್ರಭಾಸ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ ಈ ಕರಾವಳಿ ಬ್ಯೂಟಿ

ರಾವಳಿ ಬೆಡಗಿ ಕೃತಿ ಶೆಟ್ಟಿ ತೆಲುಗು ಸಿನಿಮಾ ಲೋಕದಲ್ಲಿ ಪಾದರ್ಪಣೆ ಮಾಡಿದಾಗಿನಿಂದ ಫುಲ್ ಬ್ಯುಸಿಯಾಗಿದ್ದಾರೆ. ಹಲವು ಸ್ಟಾರ್ ನಟರ ಜೊತೆ ಅವಕಾಶ ಪಡೆದುಕೊಳ್ಳುವ ಮೂಲಕ ಸ್ಟಾರ್ ನಟಿಯ ಪಟ್ಟಕ್ಕೆ ಏರುತ್ತಿದ್ದಾರೆ. ಕ್ಯೂಟ್ ಬ್ಯೂಟಿ ಮೂಲಕ ಪಡ್ಡೆ ಹುಡುಗರ ಮನಗೆದ್ದ ಈ ನಟಿ, ಇದೀಗ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಸಿನಿಮಾದಲ್ಲಿ ನಟಿಸಲು ಅವಕಾಶ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಈ ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡಲಿದ್ದಾರೆ. ಚಿತ್ರತಂಡವು ಅಧಿಕೃತ ಮಾಹಿತಿ ಕೊಡದೇ ಇದ್ದರೂ, ಟಾಲಿವುಡ್ ಅಂಗಳದಲ್ಲಂತೂ ಹಾಟ್ ಕೇಕ್ ನಂತೆ ಈ ಸುದ್ದಿ ಸೇಲ್ ಆಗ್ತಿದೆ.

‘ಉಪ್ಪೇನ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕೃತಿ, ಆನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು. ಮೊದಲ ಸಿನಿಮಾದಲ್ಲೇ ಯಶಸ್ಸು ಕಂಡ ಈ ಕರಾವಳಿ ಬ್ಯುಟಿ ಇತ್ತೀಚೆಗೆ ನಾನಿ ಜೊತೆಗೂ ‘ಶ್ಯಾಮ್ ಸಿಂಘ ರಾಯ್’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ಚಿತ್ರರಂಗದಲ್ಲಿ ಭಾರೀ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಆ ಗೆಲುವೇ ಇದೀಗ ಟಾಲಿವುಡ್ನ ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ಗೆ ಜೋಡಿಯಾಗಿ ನಟಿಸುವಂತೆ ಮಾಡಿದೆ. ಈ ಸಿನಿಮಾದಲ್ಲಿ ಮೂವರು ನಾಯಕಿಯರು ಇರಲಿದ್ದಾರೆ ಎನ್ನುವ ಮಾಹಿತಿ ಇದ್ದು, ಅದರಲ್ಲಿ ಒಂದು ಪಾತ್ರವನ್ನು ಕೃತಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಸ್ಟಾರ್ ಡಾಲಿ ಭೀಕರ ರಸ್ತೆ ಅಪಘಾತದಲ್ಲಿ ಸಾವು 

ಪ್ರಭಾಸ್ ಸಿನಿಮಾದಲ್ಲಿ ಕೃತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇಬ್ಬರನ್ನು ತೆರೆಯ ಮೇಲೆ ಯಾವತ್ತು ನೋಡುತ್ತೇವೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

‘ಬಂಗರಾಜು’ ಸಿನಿಮಾದಲ್ಲಿಯೂ ಕೃತಿ ಸ್ಟಾರ್ ನಟರಾದ ನಾಗಚೈತನ್ಯ ಮತ್ತು ನಾಗಾರ್ಜುನ ಜೊತೆ ತೆರೆ ಹಂಚಿಕೊಂಡಿದ್ದರು. ತಮ್ಮ ಎಕ್ಸ್ ಪ್ರೆಸ್ಸನ್ನ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಇದನ್ನೂ ಓದಿ: ಹೆಂಡತಿ, ಮೊಮ್ಮಗನ ಮುತ್ತಿಗೆ ಉಬ್ಬಿಹೋದ ಜಗ್ಗೇಶ್

Leave a Reply

Your email address will not be published.

Back to top button