ಬೆಂಗಳೂರು: ಬೆಂಗಳೂರು (Bengaluru) ಕಸ ಅನ್ನೋದೇ ಒಂದು ಮಾಫಿಯಾ, ಶಾಸಕರೇ ನನಗೆ ಬ್ಲ್ಯಾಕ್‌ಮೇಲ್ ಮಾಡ್ತಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ (D.K Shivakumar) ವಿಧಾನ ಪರಿಷತ್‌ನಲ್ಲಿ ಆರೋಪಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ (Congress) ನಾಗರಾಜ್ ಯಾದವ್ ಬೆಂಗಳೂರು ಕಸದ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರ ನೀಡಿದ ಡಿಸಿಎಂ, ಕಸ ಅನ್ನೋದು ಮಾಫಿಯಾ, ಕಸದ ವಿಚಾರವಾಗಿ ಬೆಂಗಳೂರು ಶಾಸಕರುಗಳೇ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ. ಎಲ್ಲಾ ಪಾರ್ಟಿಯವರು ಇದ್ದಾರೆ. ಕಸ ವಿಲೇವಾರಿ (Garbage Disposal) 800 ಕೋಟಿ ರೂ. ಅಂತೆ. ನನಗೆ ಶಾಕ್ ಆಯ್ತು ಇದನ್ನು ಕೇಳಿ. ಮೂರು ದಿನಗಳಿಂದ ಮಹದೇವಪುರದಲ್ಲಿ ಕಸದ ಗಾಡಿ ಹಾಗೆ ನಿಂತಿದೆ ಎಂದು ತಿಳಿಸಿದರು.
ಬೆಂಗಳೂರು ವ್ಯಾಪ್ತಿಯಿಂದಲೇ ಕಸ ಹೋಗಬೇಕು ಅನ್ನೋದು ನನ್ನ ಇಚ್ಚೆ. ಇದಕ್ಕಾಗಿ ಬೆಂಗಳೂರು ಹೊರಗೆ ಕಸ ಹಾಕಲು ಜಾಗ ಹುಡುಕುತ್ತಿದ್ದೇವೆ. ತಮಿಳುನಾಡು, ಅಂಧ್ರ ಪ್ರದೇಶ, ದೆಹಲಿಯಲ್ಲಿ ವ್ಯವಸ್ಥೆ ನೋಡಿದ್ದೇನೆ. ಕಸದ ಸಮಸ್ಯೆಗೆ ಪರಿಹಾರ ಮಾಡಲು ಕ್ರಮವಹಿಸುತ್ತೇನೆ ಎಂದರು. ಇದೇ ವೇಳೆ ಬಿಜೆಪಿ ಶಾಸಕ ರಾಮಮೂರ್ತಿ ಹೇಳಿಕೆ ಪ್ರಸ್ತಾಪ ಮಾಡಿದ ಡಿಕೆಶಿ, ಯಾರೋ ಮಹಾನ್ ವ್ಯಕ್ತಿ ಟೆಂಡರ್ ಕರೆಯದೇ ಹೋದ್ರು ಡಿ.ಕೆ ಶಿವಕುಮಾರ್ 15 ಸಾವಿರ ಕೋಟಿ ಹೊಡೆದಿದ್ದಾನೆ ಎಂದು ಸುದ್ದಿಗೋಷ್ಟಿ ಮಾಡಿದ್ರು ಎಂದು ಶಾಸಕರ ವಿರುದ್ದ ಕಿಡಿಕಾರಿದ್ದಾರೆ.