ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಟೇಕ್ ಆಫ್ ವೇಳೆ ಸಂಭವಿಸಬಹುದಾಗಿದ್ದ ಭಾರೀ ಅನುಹುತ ಸ್ವಲ್ಪದರಲ್ಲಿಯೇ ತಪ್ಪಿದೆ.
ಗುರುವಾರ ಮಧ್ಯಾಹ್ನ ಮಂಗಳೂರಿನಿಂದ ಮುಂಬೈಗೆ ಜೆಟ್ ಏರ್‍ವೇಸ್ ವಿಮಾನ ಟೇಕ್ ಆಫ್ ಆಗಲು ಸಿದ್ಧತೆ ನಡೆಸುತಿತ್ತು. ಈ ವೇಳೆ ಏರ್ ಟ್ರಾಫಿಕ್ ಕಂಟ್ರೋಲ್ ಕೊಠಡಿಗೆ ರನ್ ವೇ ತುದಿಯಲ್ಲಿ ಟ್ರಾಕ್ಟರ್ ನಿಂತಿರುವುದು ಕಾಣಿಸಿದೆ. ಇದನ್ನು ಗಮನಿಸಿದ ಕೂಡಲೇ ಪೈಲಟ್ ಗೆ ಸೂಚನೆ ನೀಡಿ ಟೇಕ್ ಆಫ್ ರದ್ದು ಮಾಡಲಾಯಿತು.
Advertisement
ಹುಲ್ಲು ಕತ್ತರಿಸಲು ಬಂದಿದ್ದ ಟ್ರಾಕ್ಟರ್ ರನ್ ವೇ ಬಳಿ ನಿಂತಿತ್ತು. ನಂತರ ಟ್ರಾಕ್ಟರ್ ತೆರವುಗೊಳಿಸಿದ ಬಳಿಕ ವಿಮಾನ ಟೇಕ್ ಆಫ್ ಆಯ್ತು.
Advertisement
ಮಂಗಳೂರು ವಿಮಾನ ನಿಲ್ದಾಣ ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿರುವ ಕಾರಣ ಲ್ಯಾಂಡಿಂಗ್ ಮತ್ತು ಟೇಕಫ್ ವೇಳೆ ಸ್ವಲ್ಪ ಅಪಾಯ ಜಾಸ್ತಿ. 2010ರಲ್ಲಿ ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇ ಬಿಟ್ಟು ಮುಂದುಗಡೆ ಲ್ಯಾಂಡ್ ಆಗಿ ಮುಂದಕ್ಕೆ ಚಲಿಸಿ ಪ್ರಪಾತಕ್ಕೆ ಬಿದ್ದ ಪರಿಣಾಮ 158 ಪ್ರಯಾಣಿಕರು ಮೃತಪಟ್ಟಿದ್ದರು.
Advertisement
ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?
ಸುತ್ತಲು ಆಳ ಕಣಿವೆ ಇದ್ದು ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳಿಗೆ ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ. ಮಂಗಳೂರು ಹೊರತು ಪಡಿಸಿ ದೇಶದಲ್ಲಿ ಕೋಝಿಕ್ಕೋಡು ಮತ್ತು ಲೆಂಗ್‍ಪುಯಿ ನಲ್ಲಿ ಟೇಬಲ್ ಟಾಪ್ ವಿಮಾನ ನಿಲ್ದಾಣ ನಿರ್ಮಾಣವಾಗಿದೆ.