ಬಿಗ್ ಬಾಸ್ ಒಟಿಟಿ ಅಲೆ ಜೋರಾಗಿದೆ. ಯಾರೆಲ್ಲಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬುದು ಈಗಾಗಲೇ ರಿವೀಲ್ ಕೂಡ ಆಗಿದೆ. ಸದ್ಯ ಬಿಗ್ ಬಾಸ್ ಒಟಿಟಿಯ ಪ್ರೋಮೋವೊಂದರಲ್ಲಿ ನಟಿ ಸ್ಪೂರ್ತಿ ಗೌಡ ಮಾತು ಸದ್ದು ಮಾಡ್ತಿದೆ. ಜನ ನನ್ನ ತಾಯಿ ಸಾವಿಗೆ ನಾನೇ ಕಾರಣ ಎಂದು ದೂಷಿಸಿರುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ರಿಯಾಲಿಟಿ ಶೋ, ಜತೆ ಸಾಕಷ್ಟು ಸಿರೀಯಲ್ನಲ್ಲಿ ಕಾಣಿಸಿಕೊಂಡಿದ್ದ ಮಲೆನಾಡಿನ ಚೆಲುವೆ ಸ್ಪೂರ್ತಿ ಗೌಡ ಇದೀಗ ಬಿಗ್ ಬಾಸ್ ಒಟಿಟಿನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಜತೆ ತೆಲುಗಿನ ಸೀರಿಯಲ್ನಲ್ಲೂ ಸ್ಪೂರ್ತಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಕೊಡಲಾಗಿದೆ. `ನಾನು ಯಾರು’ ಎಂಬ ಟಾಸ್ಕ್ನಲ್ಲಿ ಸ್ಪರ್ಧಿಗಳು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ನಟಿ ಸ್ಪೂರ್ತಿ ತನ್ನ ತಾಯಿಯ ಸಾವಿಗೆ ನಾನು ಕಾರಣ ಎಂದು ಸಮಾಜ ದೂಷಿಸಿರುವುದರ ಬಗ್ಗೆ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ನಾನು ಸ್ಮೋಕ್ ಮಾಡ್ತೀನಿ, ಅದರಲ್ಲಿ ತಪ್ಪೇನಿದೆ? ಬಿಗ್ ಬಾಸ್ನಲ್ಲಿ ಸೋನು ಗೌಡ ಬೋಲ್ಡ್ ಮಾತು
Advertisement
ಸ್ಪೂರ್ತಿ ಗೌಡ ಅವರ ತಾಯಿ ಕಳೆದ ವರ್ಷ ನಿಧನರಾಗಿದ್ದರು. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ನನ್ನ ತಾಯಿಗೆ ಥೈರಾಯ್ಡ್ ಕ್ಯಾನ್ಸರ್ ಇತ್ತು. ಜನ ನನ್ನ ತಾಯಿಯ ಸಾವಿಗೆ ನಾನೇ ಕಾರಣ ಎಂದು ಹೇಳುತ್ತಿದ್ದರು. ಜನ ತನ್ನನ್ನು ದೂಷಿಸಿರುವುದರ ಬಗ್ಗೆ ನೆನೆದು ಸ್ಪೂರ್ತಿ ಗೌಡ ಈ ವೇಳೆ ಭಾವುಕರಾಗಿದ್ದಾರೆ.