‘ನನ್ನ ಮೇಲೆ ನೆಗೆಟಿವ್ ಇಮೇಜ್ ಕಟ್ಟಿದರು ಕೆಲವರು. ನನ್ನ ನಿಜವಾದ ಫೇಸ್ ತೋರಿಸಬೇಕು. ಅದನ್ನು ಮನೆಯೊಳಗೆ ಖಂಡಿತ ತೋರಿಸ್ತೀನಿ. ಬದುಕಿನಲ್ಲಿ ಪಾಸಿಟಿವ್ ನೆಗೆಟಿವ್ ಎರಡೂ ಇರಬೇಕು’ ಎಂದು ವಯಸ್ಸಿಗೂ ಮೀರಿ ಪ್ರಬುದ್ಧವಾಗಿ ಮಾತಾಡುವ ಹುಡುಗ ರಕ್ಷಕ್ (Rakshak), ಹಿರಿಯ ಹಾಸ್ಯನಟ ಬುಲೆಟ್ ಪ್ರಕಾಶ್ (Bullet Prakash) ಅವರ ಪುತ್ರ.
‘ಜನರ ಬಾಯಿ ಮುಚ್ಚಿಸಲಾಗದು. ಟ್ರೋಲ್, ರೋಸ್ಟ್ ಮಾಡಿದರು ಜನರು… ಅದಕ್ಕೆಲ್ಲ ಕೇರ್ ಮಾಡಲ್ಲ. ನನ್ನ ಸ್ವಂತ ಐಡೆಂಟಿಟಿಯೊಂದಿಗೆ ಬಿಗ್‌ಬಾಸ್ ಮನೆಯೊಳಗೆ ಹೋಗ್ತೀನಿ’ ಎಂದು ನೇರವಾಗಿ ಮಾತಾಡುವ ರಕ್ಷಕ್, ಕೌಟುಂಬಿಕ ಪ್ರೇಕ್ಷಕರ ಮನಸಲ್ಲಿ ಜಾಗ ಕಂಡುಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡು ಬಿಗ್‌ಬಾಸ್ ವೇದಿಕೆಗೆ ಬಂದಿದ್ದರು.
‘ರಾಜಕೀಯ ಸಿನಿಮಾ ಎರಡರಲ್ಲಿಯೂ ನೆಗೆಟಿವ್ ಪಾಸಿಟಿವ್ ಎರಡೂ ಇರತ್ತೆ. ಹೋಗುತ್ತಾ ಹೋಗುತ್ತಾ ಈ ನೆಗೆಟಿವೇ ಪಾಸಿಟಿವ್ ಆಗುತ್ತದೆ’ ಎನ್ನುವ ನಂಬಿಕೆಯಲ್ಲಿರುವ ರಕ್ಷಕ್ ಅವರು ಮನೆಯೊಳಗೆ ಮಾತುಗಳಿಗೆ ಸೆನ್ಸಾರ್ ಅಳವಡಿಸಿಕೊಂಡೇ ಮನೆಯೊಳಗೆ ಹೋಗಲು ನಿರ್ಧರಿಸಿದ್ದರು. ‘ನನ್ನ ರಿಯಲ್ ಫೇಸ್ ನೋಡಲಿಕ್ಕಾಗಿ ನನಗೆ ವೋಟ್ ಮಾಡಿ’ ಎಂಬ ರಕ್ಷಕ್ ಮನವಿಗೆ ಜನರು 53% ವೋಟ್ ಮಾಡಿ ಹೋಲ್ಡ್‌ನಲ್ಲಿ ಇಟ್ಟಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]