ಲಕ್ನೋ: ಐಪಿಎಲ್‌ನ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡಕ್ಕೆ ಸ್ಟಾರ್ ವೇಗಿ ಮಯಾಂಕ್ ಯಾದವ್ (Mayank Yadav) ಕಂಬ್ಯಾಕ್ ಮಾಡಿದ್ದು ಆನೆಬಲ ಬಂದಂತಾಗಿದೆ.
⚡ 𝐌𝐀𝐘𝐀𝐍𝐊 ⚡ 𝐘𝐀𝐃𝐀𝐕 ⚡ 𝐈𝐒 ⚡ 𝐁𝐀𝐂𝐊 ⚡ pic.twitter.com/c0G5p3svMA
— Lucknow Super Giants (@LucknowIPL) April 16, 2025
ಲಕ್ನೋ ಫ್ರಾಂಚೈಸಿ ಸೇರಿಕೊಂಡಿರುವ ಮಯಾಂಕ್ ಯಾದವ್, ಶನಿವಾರ (ಏ.19) ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ನಡೆಯಲಿರುವ ಪಂದ್ಯಕ್ಕೂ ಮುನ್ನ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬೌಲರ್‌ಗಳ ಆಟಕ್ಕೆ 20 ವಿಕೆಟ್ ಪತನ – ಪಂಜಾಬ್‌ಗೆ ರೋಚಕ 16 ರನ್‌ಗಳ ಜಯ
ಕಳೆದ ವರ್ಷ ಬಾಂಗ್ಲಾದೇಶ ತಂಡದ ವಿರುದ್ಧ ನಡೆದ ಟಿ20 ಸರಣಿ ವೇಳೆ ಮಯಾಂಕ್ ಯಾದವ್ ಗಾಯಗೊಂಡಿದ್ದರು, ಇದರೊಂದಿಗೆ ಬೆನ್ನುನೋವಿನ ಸಮಸ್ಯೆ ಅವರನ್ನು ತೀವ್ರವಾಗಿ ಕಾಡಿತ್ತು. ಹಾಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ದೀರ್ಘಕಾಲದ ವರೆಗೆ ಪುನರ್ವಸತಿ ಕಲ್ಪಿಸಲಾಗಿತ್ತು. ಸದ್ಯ ಚೇತರಿಕೆ ಕಂಡಿರುವ ಮಯಾಂಕ್ ಲಕ್ನೋ ಫ್ರಾಂಚೈಸಿ ಸೇರಿಕೊಂಡಿದ್ದಾರೆ.
ಸದ್ಯ ಮಯಾಂಕ್ ಸಂಪೂರ್ಣ ಫಿಟ್ ಇದ್ದಾರೆ ಅಂತ ಬಿಸಿಸಿಐ ವೈದ್ಯಕೀಯ ತಂಡ ಖಚಿತಪಡಿಸಿದೆ. ಲಕ್ನೋ ತಂಡದ ಫಿಸಿಯೋ ಥೆರಪಿಸ್ಟ್ ಆಶಿಶ್ ಕೌಶಿಕ್ ಮೌಲ್ಯಮಾಪನ ಮಾಡಲಿದ್ದಾರೆ. ಕೌಶಿಕ್ ಅವರಿಂದ ಫಿಟ್ ಎಂದು ದೃಢವಾದ್ರೆ, ಶನಿವಾರ ರಾಜಸ್ಥಾನ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಮಯಾಂಕ್ ಆಡಲಿದ್ದಾರೆ. ಇದನ್ನೂ ಓದಿ: ಕೇವಲ 26 ರನ್ ಗಳಿಸಿದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಐಪಿಎಲ್‌ನಲ್ಲಿ ಐತಿಹಾಸಿಕ ದಾಖಲೆ:
ಮಯಾಂಕ್ ಯಾದವ್ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ 2024ರ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದರು. 150 ಕಿಮೀಗಿಂತಲೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡಿದ 4ನೇ ಬೌಲರ್ ಎನಿಸಿಕೊಂಡಿದ್ದರು. ಇದನ್ನೂ ಓದಿ: ಒಂದು ತೂಫಾನ್ ಶತಕ – ಹಲವು ದಾಖಲೆಗಳ ʻಅಭಿಷೇಕʼ
ವೇಗದ ಬೌಲಿಂಗ್ ಮಾಡಿದ ಟಾಪ್-5 ಆಟಗಾರರು:
* ಶಾನ್ ಟೈಟ್ – 2011ರಲ್ಲಿ – 157.7 ಕಿಮೀ
* ಲಾಕಿ ಫರ್ಗೂಸನ್ – 2022ರಲ್ಲಿ – 157.3 ಕಿಮೀ
* ಉಮ್ರಾನ್ ಮಲಿಕ್ – 2022ರಲ್ಲಿ – 157.0 ಕಿಮೀ
* ಮಯಾಂಕ್ ಯಾದವ್ – 2024ರಲ್ಲಿ – 156.7 ಕಿಮೀ
* ಅನ್‌ರಿಚ್ ನಾರ್ಟೆ – 2020ರಲ್ಲಿ – 156.2 ಕಿಮೀ