ದುಬೈ: ಭಾರತ-ಪಾಕಿಸ್ತಾನ (IND vs PAK) ನಡುವಿನ ರಣರೋಚಕ ಕಾದಾಟಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ದೊಡ್ಡ ಆಘಾತವಾಗಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಹಾಗೂ ಪಾಕ್‌ಗೆ ಪ್ರತಿ ಬಾರಿಯೂ ಸಿಂಹಸ್ವಪ್ನವಾಗಿ ಕಾಡಿದ್ದ ವಿರಾಟ್ ಕೊಹ್ಲಿಗೆ (Virat Kohli) ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ.
Advertisement
ದುಬೈನಲ್ಲಿ (Dubai) ಪಂದ್ಯಕ್ಕೂ ಮುನ್ನ ತಂಡದ ಅಂತಿಮ ಅಭ್ಯಾಸ ಅವಧಿಯ ವೇಳೆ ಕೊಹ್ಲಿಯ ಮೊಣಕಾಲಿಗೆ ಗಾಯವಾಗಿದ್ದು, ಅಭ್ಯಾಸ ಅವಧಿಯಲ್ಲಿ ಬಹುಕಾಲ ಅವರು ಕಾಲಿಗೆ ದೊಡ್ಡ ಐಸ್‌ಪ್ಯಾಕ್ ಇರಿಸಿಕೊಂಡೇ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: Champions Trophy | ಇಂಡೋ-ಪಾಕ್ ಕಾದಾಟದ ರೋಚಕ ಇತಿಹಾಸ – ಹೈವೋಲ್ಟೇಜ್ ಕದನದಲ್ಲಿ ಯಾರ ಕೈ ಮೇಲು?
Advertisement
Advertisement
ಕಾಲಿಗೆ ದೊಡ್ಡ ಐಸ್‌ಪ್ಯಾಕ್ ಕಟ್ಟಿಕೊಂಡು ಡಗ್‌ಔಟ್‌ನಲ್ಲಿ ಕೊಹ್ಲಿ ವಿಶ್ರಾಂತಿ ಪಡೆಯುತ್ತಿರುವ ಸಾಕಷ್ಟು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ ಕೊಹ್ಲಿ ಫಿಟ್‌ನೆಸ್ ಬಗ್ಗೆ ಟೀಂ ಇಂಡಿಯಾದಲ್ಲೂ (Team India) ಆತಂಕ ಶುರುವಾಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಆಕ್ರಮಣಕಾರಿಯಾಗಿ ಆಡುತ್ತಾರೆ. ಅದೇ ಕಾರಣಕ್ಕಾಗಿ ಕೊಹ್ಲಿ ಫಿಟ್‌ನೆಸ್ ಈ ಪಂದ್ಯಕ್ಕೆ ಪ್ರಮುಖವಾಗಿದೆ. ಪಾಕಿಸ್ತಾನ (Pakistan) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇಲ್ಲದೇ ಕಣಕ್ಕಿಳಿಯುವುದನ್ನು ಟೀಂ ಇಂಡಿಯಾ ಕೂಡ ಇಷ್ಟಪಡುತ್ತಿಲ್ಲ. ಇದನ್ನೂ ಓದಿ: ಆಂಗ್ಲರನ್ನು ಸದೆಬಡಿದ ಇಂಗ್ಲಿಸ್ – ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ!
Advertisement
ಚಾಂಪಿಯನ್ಸ್ ಟ್ರೋಫಿ ವರದಿ ಮಾಡಲು ತೆರಳಿರುವ ಹಲವು ಪತ್ರಕರ್ತರು ಕೊಹ್ಲಿಗೆ ಗಾಯವಾಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೂ ಬಿಸಿಸಿಐ ಮಾತ್ರ ಐಸ್‌ಪ್ಯಾಕ್ ಇರಿಸಿಕೊಂಡ ಕೊಹ್ಲಿಯ ವೈರಲ್ ಚಿತ್ರಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ: ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ – ಸೋತರೆ ಬಹುತೇಕ ಮನೆಗೆ