ಬಿಗ್‍ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರುವ ನಿವೇದಿತಾ ಗೌಡ, ರ‍್ಯಾಪರ್ ಚಂದನ್ ಶೆಟ್ಟಿ ಅವರ ಜೊತೆ ಸಪ್ತಪದಿ ತುಳಿದು ಸಾಂಸಾರಿಕ ಜೀವನದಲ್ಲಿ ಖುಷಿಯಾಗಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಇವರು ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಕಳೆದ 2 ತಿಂಗಳಿಂದ ಮಿಸೆಸ್ ಇಂಡಿಯಾ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಇವರು ಈಗ ಗೆಲುವಿನ ನಗೆ ಬೀರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಪ್ಡೇಟ್‍ಗಳ ಬಗ್ಗೆ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿರುವ ಮುದ್ದು ಬೊಂಬೆ ನಿವೇದಿತಾ ಗೌಡ ಈಗ ಮಿಸೆಸ್ ಇಂಡಿಯಾ ಆಗಿದ್ದಾರೆ. ಮಿಸೆಸ್ ಇಂಡಿಯಾ ಆಗಲು ಅವರು ಮಾಡುತ್ತಿದ್ದ ತಯಾರಿಗಳ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ನಿವೇದಿತಾ ಗೆಲುವಿನ ಕಿರೀಟವನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ. ಇದನ್ನೂ ಓದಿ: ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್ ನಟನೆಯ ಹಾಲಿವುಡ್ ಚಿತ್ರತಂಡ
View this post on Instagram
ಮಿಸೆಸ್ ಇಂಡಿಯಾ ಆಗಿರುವ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ ನಿವೇದಿತಾ ತಂಡ, ಕೊನೆಗೂ ಜನರ ಹೃದಯವನ್ನು ಗೆದ್ದು ಅವರಿಗೆ ಇಷ್ಟವಾಗುವಂತೆ ಮಾಡುವುದು ನಿಜವಾದ ಸಾಧನೆ, ಅಲ್ಲವೇ? ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022 ರ ವಿಜೇತರಾದ ಶ್ರೀಮತಿ ನಿವೇದಿತಾ ಗೌಡ ಅವರು ನಮ್ರತೆಯಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ನಿವೇದಿತಾ ಗೌಡ ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಅದರಲ್ಲಿ ಅವರು ಹೋಮ್ ಟೂರ್, ಬಟ್ಟೆ ಕಲೆಕ್ಷನ್ ಹಾಗೂ ಬ್ಯಾಗ್ ಕಲೆಕ್ಷನ್ ಸೇರಿದಂತೆ ಹಲವಾರು ರೀತಿಯ ವೀಡಿಯೋಗಳನ್ನು ಮಾಡಿ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಮಿಸೆಸ್ ಇಂಡಿಯಾಗೆ ಅವರು ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಅವರ ಡಯೆಟ್ ಏನು ಎಂಬ ಬಗ್ಗೆ ಹೇಳಿದ್ದರು. ಇದನ್ನೂ ಓದಿ: ಸೊಳ್ಳೆ ಪರದೆ ಡ್ರೆಸ್ ಧರಿಸಿ ಬಂದ ಉರ್ಫಿ ಜಾವೇದ್‌ಗೆ ನೆಟ್ಟಿಗರಿಂದ ಫುಲ್ ಕ್ಲಾಸ್
ಅಲ್ಲದೇ, ಈ ವೀಡಿಯೋದಲ್ಲಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಾರೆ ಎಂಬುದನ್ನ ಸಹ ತೋರಿಸಿದ್ದಾರೆ. ಹೇಗೆ ನೈಸರ್ಗಿಕವಾಗಿ ಮುಖದ ಅಂದವನ್ನು ಹೆಚ್ಚು ಮಾಡಿಕೊಳ್ಳಬಹುದು ಎಂಬುದನ್ನ ತೋರಿಸಿದ್ದಾರೆ. ಫೇಸ್ ಮಸಾಜ್‍ಗಳನ್ನು ಹೇಳಿಕೊಟ್ಟಿದ್ದು, ಯಾವುದರಿಂದ ಏನು ಲಾಭ ಎಂಬುದನ್ನ ಸಹ ತಿಳಿಸಿದ್ದರು.