ಚಂದಾದಾರರಿಗೆ ಮಾತ್ರ ಬ್ಲೂ ಟಿಕ್ (BlueTick)ಎಂದು ಹೇಳುವ ಮೂಲಕ ಟ್ವಿಟರ್ (Twitter) ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದರು ಮಾಲೀಕ ಎಲೋನ್ ಮಸ್ಕ್. ತಾವು ಹೇಳಿದಂತೆ ಉಚಿತವಾಗಿ ಬ್ಲೂಟಿಕ್ ಪಡೆದವರ ಖಾತೆಯಿಂದ ಅದನ್ನು ತೆಗೆದುಹಾಕಿದ್ದರು. ಈ ನಡೆಗೆ ಸಾಕಷ್ಟು ಸಿಲೆಬ್ರಿಟಿಗಳು ಆಕ್ರೋಶ ವ್ಯಕ್ತ ಪಡಿಸಿದ್ದರು. ಹಲವರಂತೂ ತಾವು ಹಣ ಪಡೆದು ಬ್ಲೂ ಟಿಕ್ ಪಡೆದುಕೊಳ್ಳುವುದಿಲ್ಲ ಎಂದು ನೇರವಾಗಿಯೇ ತಿಳಿಸಿದ್ದರು.
Advertisement
ಆಕ್ರೋಶ ವ್ಯಕ್ತ ಪಡಿಸಿದವರ ಜೊತೆಗೆ ಕೆಲವರು ಹಣ ಪಾವತಿಸಿ ಬ್ಲೂಟಿಕ್ ಪಡೆದಿದ್ದರು. ಅದರಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಕೂಡ ಒಬ್ಬರು. ಟ್ವಿಟರ್ ಸಂಸ್ಥೆ ತಿಳಿಸಿದಂತೆ ತಿಂಗಳಿಗೆ 900 ರೂಪಾಯಿ ಪಾವತಿಸಿ ಅಮಿತಾಭ್ ಚಂದಾದಾರರಾಗಿದ್ದರು. ಹಣ ನೀಡಿದ್ದರಿಂದ ಅಮಿತಾಭ್ ಅವರ ಟ್ವಿಟರ್ ಖಾತೆಗೆ ಬ್ಲೂಟಿಕ್ ಸಿಕ್ಕಿತ್ತು. ಇದೀಗ ಎಲೋನ್ ಮಸ್ಕ್ (Elon Musk) ಮತ್ತೊಂದು ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ನಿರ್ಧಾರಕ್ಕೆ ಅಮಿತಾಭ್ ಸಿಟ್ಟಾಗಿದ್ದಾರೆ. ಇದನ್ನೂ ಓದಿ:ರಾಡ್ ನಿಂದ ಹೊಡೆದು ಪವನ್ ಕಲ್ಯಾಣ್ ಅಭಿಮಾನಿ ಕೊಂದ ಪ್ರಭಾಸ್ ಫ್ಯಾನ್
Advertisement
Advertisement
ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕು ಎನ್ನುವ ಎಲೋನ್ ನಿರ್ಧಾರವನ್ನು ಸ್ವಾಗತಿಸದೇ ತಮಗೆ ಬ್ಲೂಟಿಕ್ ಬೇಡ ಎಂದು ಸಾಕಷ್ಟು ಸಿಲೆಬ್ರಿಟಿಗಳು ಸುಮ್ಮನಿದ್ದರು. ಬಹುತೇಕರು ಚಂದಾದಾರರಾಗದೇ ಹಾಗೆಯೇ ಉಳಿದುಕೊಂಡರು. ಇದು ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದರಿತ ಎಲೋನ್, ಒಂದು ಮಿಲಿಯನ್ ಹಿಂಬಾಲಕರಿರುವ ಟ್ವಿಟರ್ ಖಾತೆಗೆ ಉಚಿತವಾಗಿ ಬ್ಲೂಟಿಕ್ ನೀಡಿದ್ದಾರೆ. ಈ ನಡೆ ಅಮಿತಾಭ್ ಕೋಪಕ್ಕೆ ಕಾರಣವಾಗಿದೆ.
Advertisement
ಈ ಕುರಿತು ಟ್ವೀಟ್ ಮಾಡಿರುವ ಅಮಿತಾಭ್. ಈಗಾಗಲೇ ನಾನು ಹಣ ಪಾವತಿಸಿ ಬ್ಲೂಟಿಕ್ ಪಡೆದಿದ್ದೇನೆ. ನೀವು ಮತ್ತೊಂದು ನಿರ್ಧಾರ ಪ್ರಕಟಿಸಿದ್ದೀರಿ. 48.4 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ನಾನು ನಿಮ್ಮಿಂದಾಗಿ ಹಣ ಕಳೆದುಕೊಳ್ಳಬೇಕಾಯಿತು. ಈಗ ಏನು ಮಾಡಲಿ? ಎಂದು ಎಲೋನ್ ಮಸ್ಕ್ ಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟ್ವಿಟರ್ ಸಂಸ್ಥೆ ಏನು ಉತ್ತರ ಕೊಡುತ್ತದೆಯೋ ಕಾದು ನೋಡಬೇಕು.